Home ಸುದ್ಧಿಗಳು ಪ್ರಾದೇಶಿಕ ಡಿ.10: ಅಂತರ್ ಜಿಲ್ಲಾಮಟ್ಟದ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ

ಡಿ.10: ಅಂತರ್ ಜಿಲ್ಲಾಮಟ್ಟದ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ

354
0

ಉಡುಪಿ, ಡಿ.5: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ಯ ೨೪ನೇ ವರ್ಷಾಚರಣೆ ಅಂಗವಾಗಿ ಡಿಸೆಂಬರ್ 10ರಂದು ಆದಿತ್ಯವಾರ ಬೆಳಿಗ್ಗೆ 08-30ರಿಂದ ಸಂಜೆ 06-00ರವರೆಗೆ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಂಗಮಂದಿರದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ಬಹುಮುಖ ಪ್ರತಿಭೆಗಳ ಅಂತರ್ ಜಿಲ್ಲಾಮಟ್ಟದ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ ಜರಗಲಿದೆ. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷರಾದ ಇನ್ನಾ ವಿಠಲ ಮೂಲ್ಯ ಅವರು ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ನಂದಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರಿ ವಿನೋದಾ, ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೋಳ ದಿನೇಶ್ ಅಂಚನ್, ಬೆಳ್ಮಣ್ಣು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂದೀಪ್ ಅಂಚನ್, ದೈವಾರಾಧಕರು ಮತ್ತು ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೋಳ ನಾರಾಯಣ ಪಾಣರ, ಬೆಳ್ಮಣ್ಣು ಜೇಸಿಐ ಅಧ್ಯಕ್ಷರಾದ ಸರಿತಾ ದಿನೇಶ್ ಸುವರ್ಣ, ಕೆಮ್ಮಣ್ಣು ರೋಟರಿ ಸಮುದಾಯದಳ ಅಧ್ಯಕ್ಷರಾದ ಪ್ರದೀಪ್ ಸುವರ್ಣ, ಬೋಳ-ಕೆದಿಂಜೆ ಶ್ರೀ ಸತ್ಯಸಾರಾಮಣಿ ದೈವಸ್ಥಾನದ ಅಧ್ಯಕ್ಷರಾದ ಸೂರ್ಯಕಾಂತ್ ಶೆಟ್ಟಿ, ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸತೀಶ್ ಕೋಟ್ಯಾನ್, ನಾನಿಲ್ತಾರ್ ಕುಲಾಲ್ ಸಂಘದ ಯುವ ವಿಭಾಗದಲ್ಲಿ ಪೂರ್ವಾಧ್ಯಕ್ಷರಾದ ದೀಪಕ್ ಕುಲಾಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಬೆಳ್ಮಣ್ಣು ವೈಷ್ಣವಿ ವಿಘ್ನೇಶ್ ಭಟ್, ವಾಯ್ಸ್ ಆಫ್ ಆರಾಧನಾ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸುರತ್ಕಲ್ ಅಗರಿ ಎಂಟರ್‌ಪ್ರೈಸಸ್‌ನ ಮಾಲಕರಾ ರಾಘವೇಂದ್ರ ರಾವ್, ಅಖಿಲ ಭಾರತ ತುಳು ಒಕ್ಕೂಟದ ಡಾ. ರಾಜೇಶ್ ಆಳ್ವ, ಉದ್ಯಮಿ ಹಾಗೂ ಕಲಾ ಪೋಷಕರಾದ ಸಾಣೂರು ಅರುಣ್ ಶೆಟ್ಟಿಗಾರ್, ಮಂದಾರ ಪತ್ರಿಕೆಯ ಪತ್ರಕರ್ತರಾದ ಡಾ. ರಾಜೇಶ್ ಭಟ್ ಅವರು ಸಮ್ಮೇಳನದಲ್ಲಿ ಗೌರವ ಉಪಸ್ಥತಿತರಿರುವರು.

ಯುವ ಉದ್ಯಮಿ ಇನ್ನಾ ಯೋಗೀಶ್ ಆಚಾರ್ಯ, ಬೆಳ್ಮಣ್ಣು ಪಿಲಾರು ಶಾಸ್ತವು ಕ್ಯಾಟರ‍್ಸ್ ಮಾಲಕರಾದ ಮುರಳೀಧರ ಉಡುಪ, ಬೆಳ್ಮಣ್ಣು ಲಂಚ್ ಹೋಮ್ ಮಾಲಕರಾದ ಪ್ರವೀಣ್ ಶೆಟ್ಟಿ, ಬೆಳ್ಮಣ್ಣು ಎಸ್.ಎಸ್.ಗ್ಲಾಸ್ ಮಾಲಕರಾದ ಸತೀಶ್ ಕುಲಾಲ್, ಮಾವಿನಕಟ್ಟೆ ಕೆದಿಂಜೆ ಮಹಾಮ್ಮಾಯಿ ಕನ್ಸ್ಟ್ರಕ್ಷನ್ ಮತ್ತು ಅರ್ಥ್ಮೂರ‍್ಸ್ ಮಾಲಕರಾದ ಧೀರಜ್ ಎಸ್., ಬೋಳ ಪುನ್ಕೆದಡಿ ಕಿಶೋರ್ ದೀಕ್ಷಿತ್ ದೇವಾಡಿಗ, ನಂದಳಿಕೆ ಗೋಳಿಕಟ್ಟೆ ಶ್ರೀ ದೇವಿದಯಾ ಜನರಲ್ ಸ್ಟೊರ‍್ಸ್ನ ಮಾಲಕರಾದ ಅರುಣ್ ಭಂಡಾರಿ, ಬೆಳ್ಮಣ್ಣು ಕಾಮಾಕ್ಷಿ ಇಂಜಿನಿರ‍್ಸ್ ಸುಧೀರ್ ಕಾಮತ್, ಬೆಳ್ಮಣ್ಣು ಹೊಸಮಾರು ಶ್ರೀ ದುರ್ಗಾ ಇವೆಂಟ್ಸ್ ಮಾಲಕರಾದ ಶರತ್ ರಾವ್, ಬೆಳ್ಮಣ್ಣು ಸೂರಜ್ ಹೊಟೇಲ್ ಮಾಲಕರಾದ ಸ್ವರೂಪ್ ಶೆಟ್ಟಿ, ಬೆಳ್ಮಣ್ಣು ತಪಸ್ಯಾ ಪಿಂರ‍್ಸ್ ಮಾಲಕರಾದ ದಿನೇಶ್ ಕುಮಾರ್, ಬೆಳ್ಮಣ್ಣು ಶಿವಂ ಸೆಕ್ಯೂರಿಟಿ ಸಿಸ್ಟಂನ ಮಾಲಕರಾದ ಸಂತೋಷ್ ಶೆಟ್ಟಿ, ಬೆಳ್ಮಣ್ಣು ಲಕ್ಷ್ಮೀ ಎಸೋಶಿಯೇಟ್ಸ್ನ ಏಕನಾಥ್ ಶೆಣೈ, ಬೋಳ ಶ್ರೀ ದುರ್ಗಾ ಸ್ವೀಟ್ಸ ಕ್ಯಾಟರರ‍್ಸ್ ಮಾಲಕರಾದ ಬಾಲೇಶ್ ಸಾಲ್ಯಾನ್ ಅವರು ವಿಶೇಷ ಆಹ್ವಾನಿತ ಅತಿಥಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬೆಳ್ಮಣ್ಣು ಉದ್ಭವ್ ದೇವಾಡಿಗವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೊರಗಜ್ಜ ಹಾಡಿನ ಮೂಲಕ ಪ್ರಸಿದ್ದಿ ಪಡೆದ ಕಾರ್ಕಳ ತಾಲೂಕಿನ ಮಾಸ್ಟರ್ ಕಾರ್ತಿಕ್, ಸಪ್ತ ಸಾಗಾರದಾಚೆ ಎಲ್ಲೋ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿರುವ ಬಾಲನಟ ಅಕ್ಷನ್ ಎಸ್. ಕರ್ಕೇರ ಸೇರಿದಂತೆ ಅಂತರ್ ಜಿಲ್ಲಾಮಟ್ಟದ ಬಹುಮುಖ ಪ್ರತಿಭೆಯ ನೂರಾರು
ಮಕ್ಕಳಿಂದ ಸಾಂಸಕ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಮ್ಮೇಳನದ ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ ಭಜನೆ, ಚೆಂಡೆವಾದನ, ನಾಸಿಕ್ ಬ್ಯಾಂಡ್, ಯಕ್ಷಗಾನ ನೃತ್ಯ, ಜಾನಪದ ನೃತ್ಯ, ಭರತನಾಟ್ಯ, ಸಂವಾದ, ಫಿಲ್ಮಿಡ್ಯಾನ್ಸ್, ಫ್ಯಾಶನ್ ಶೋ, ಯೋಗ ನೃತ್ಯ, ಸಾಂಸ್ಕೃತಿಕ ವೈವಿಧ್ಯ, ಸಂಗೀತ ರಸದೌತನ ನಡೆಯಲಿದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸಮ್ಮೇಳನದ ನಿರ್ದೇಶಕರಾದ ಆನಂದ ಪೂಜಾರಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.