ಉಡುಪಿ, ಡಿ.3: ಹಾವಂಜೆ ಗ್ರಾಮ ಪಂಚಾಯತ್ನ ಜೀವ ವೈವಿಧ್ಯ ನಿರ್ವಹಣಾ ಸಮಿತಿ, ಗ್ರಾಮ ವಿಕಾಸ ಸಮಿತಿ, ಮಣಿಪಾಲ ಬರ್ಡರ್ಸ್ ಕ್ಲಬ್ ಸಹಯೋಗದೊಂದಿಗೆ ಭಾವನಾ ಪೌಂಡೇಶನ್ ಆಯೋಜಿಸಿದ ‘ಹಾವಂಜೆಯ ಹಕ್ಕಿಗಳು’ ಎಂಬ ಪಕ್ಷಿ ವೀಕ್ಷಣಾ ಕಾರ್ಯಕ್ರಮ ಕೀಳಂಜೆಯ ಬಳಿಯ ಮದ್ಮಲ್ ಕೆರೆಯ ಪರಿಸರದಲ್ಲಿ ನಡೆಯಿತು.
ಶ್ರೀಲಂಕಾ ಫ್ರಾಗ್ಮೌತ್, ಪಿನ್ ಟೈಲ್ಡ್ ಸ್ನೆಪ್, ವೆಸ್ಟರ್ನ್ ಮಾರ್ಶ್ ಹ್ಯಾರಿಯರ್, ವೈಟ್ ಚೀಕ್ಡ್ ಬಾರ್ಬೆಟ್, ಕಾಮನ್ ಇಯೋರಾ, ಸ್ಕೇಲೀ ಬ್ರೆಸ್ಟೆಡ್ ಮುನಿಯಾ, ಬ್ಲಾಕ್ ನೇಪ್ಡ್ ಮೊನಾರ್ಕ್ ಸೇರಿದಂತೆ ಸುಮಾರು 65 ವಿವಿಧ ಪ್ರಬೇಧಗಳ ಆರುನೂರಕ್ಕೂ ಮಿಕ್ಕಿ ಪಕ್ಷಿಗಳನ್ನು ಒಂದು ಘಂಟೆಯ ಅವಧಿಯಲ್ಲಿ ಗುರುತಿಸಲಾಯಿತು.
ಪಕ್ಷಿ ವೀಕ್ಷಕರಾದ ತೇಜಸ್ವಿ ಆಚಾರ್ಯ, ತೇಜಸ್, ಪಂಚಾಯತ್ ಪಿಡಿಒ ದಿವ್ಯಾ ಎಸ್., ಅಧ್ಯಕ್ಷರಾದ ಆಶಾ ಪೂಜಾರಿ, ಉಪಾಧ್ಯಕ್ಷರಾದ ಗುರುರಾಜ್ ಕಾರ್ತಿಬೈಲು, ಮಾಜಿ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ, ಮಣಿಪಾಲ ಬರ್ಡ್ ಕ್ಲಬ್ನ ಹಲವಾರು ಆಸಕ್ತರು ಹಾಗೂ ಗ್ರಾಮಸ್ಥರು ಮತ್ತು ಮಕ್ಕಳು ಭಾಗವಹಿಸಿದ್ದರು.
ಕಲಾವಿದರಾದ ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ, ಮಂಜುನಾಥ್ ಪೂಜಾರಿಯವರು ಪಕ್ಷಿಗಳ ಪಟ್ಟಿ ಮಾಡಿ, ಪಂಚಾಯತ್ನ ಸದಾಶಿವ ಕೆ. ಎಸ್. ವಂದಿಸಿದರು.