ಉಡುಪಿ, ಸೆ. 27: ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕು ಸ್ವಷ್ಟ ನಿಖರವಾಗಿ ಬೆಳೆಯಲು ಬೇಕಾಗುವ ಚೇತನ ಶಕ್ತಿ ತುಂಬಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಿದೆ. ಇಂತಹ ಉತ್ತುಂಗ ಜವಾಬ್ದಾರಿಯನ್ನು ಧಾರೆ ಎರೆದು ಕೊಟ್ಟ ಹೆಗ್ಗಳಿಕೆಗೆ ಉಡುಪಿ ಎಂ.ಜಿ.ಎಂ. ಸಂಸ್ಥೆಗಿದೆ ಎಂದು ಮಂಗಳೂರು ವಿ.ವಿ.ಆಂಗ್ಲ ಭಾಷಾ ವಿಭಾಗದ ನಿವೃತ್ತ ಮುಖ್ಯಸ್ಥೆ ಉಡುಪಿ ಎಂಜಿಎಂ. ಕಾಲೇಜಿನ ಹಳೆ ವಿದ್ಯಾರ್ಥಿ ಡಾ.ಕಿಶೋರಿನಾಯಕ್ ಅಭಿಪ್ರಾಯಪಟ್ಟರು. ಇನ್ನೇೂರ್ವ ಪ್ರಧಾನ ಅತಿಥಿ ಕಾಲೇಜಿನ ಹಳೆ ವಿದ್ಯಾರ್ಥಿ ಕನಾ೯ಟಕ ಬ್ಯಾಂಕ್ ವ್ಯವಹಾರ ವಿಭಾಗದ ಹಿರಿಯ ಅಧಿಕಾರಿ ಬಿ.ಗೇೂಕುಲದಾಸ ಪೈ ಮಾತನಾಡಿ, ಶಿಕ್ಷಣದ ಜೊತೆಗೆ ಅತ್ಯುನ್ನತ ಸಂಸ್ಕಾರಗಳನ್ನು ಬದುಕಿಗೆ ತುಂಬಿಸಿಕೊಡುವಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ಕೊಡುಗೆ ಅನನ್ಯವಾದುದು ಮಾತ್ರವಲ್ಲ ಮಣಿಪಾಲ ಬ್ರಹ್ಮ ಡಾ. ಮಾಧವ ಪೈ ಅವರ ಕನಸಿನ ಮೊದಲ ಶೈಕ್ಷಣಿಕ ಸಂಸ್ಥೆಯಾಗಿದೆ ಎಂದು ಸ್ಮರಿಸಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಿಕಟಪೂರ್ವ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಎಂ.ಎಲ್ ಸಾಮಗ ವಹಿಸಿದ್ದರು. ಆಡಳಿತ ಮಂಡಳಿಯ ಪರವಾಗಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ್ ಇದರ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ ಶುಭಾಶಂಶನೆಗೈದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಎಂ.ವಿಶ್ವನಾಥ ಪೈ ವಂದಿಸಿದರು. ಕೇೂಶಾಧಿಕಾರಿ ದೀಪಾಲಿ ಕಾಮತ್ ವರದಿ ಮಂಡಿಸಿದರು. ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.