Home ಸುದ್ಧಿಗಳು ಪ್ರಾದೇಶಿಕ ಮಲ್ಪೆ: ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ

ಮಲ್ಪೆ: ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ

467
0

ಮಲ್ಪೆ, ಸೆ. 16: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯೂತ್ ರೆಡ್ ಕ್ರಾಸ್ ಘಟಕ, ರೇಂಜರ್ ರೋವರ್ ಘಟಕ ಮತ್ತು ಎಚ್.ಸಿ.ಎಲ್ ಫೌಂಡೇಶನ್, ಉಡುಪಿ ನಗರಸಭೆ, ಅರಣ್ಯ ಇಲಾಖೆ  ಸಹಯೋಗದೊಂದಿಗೆ ಮಲ್ಪೆ ಕಡಲ ತೀರದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಡಲ ತೀರದಲ್ಲಿದ್ದ ವಿವಿಧ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ ಚಪ್ಪಲಿಗಳು ಪೇಪರ್ ಕಸ ಇತ್ಯಾದಿಗಳನ್ನು ಹೆಕ್ಕಿ ಬೇರ್ಪಡಿಸಿ ನಗರಸಭೆಗೆ ಹಸ್ತಾಂತರಿಸಲಾಯಿತು. ಕಾಲೇಜಿನ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿಗಳಾದ ಡಾ. ರಘು ನಾಯ್ಕ ಮತ್ತು ಮಮತಾ ವಿವಿಧ ಸಂಘಟನೆಗಳ ಅಧ್ಯಕ್ಷರುಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.