Home ಸುದ್ಧಿಗಳು ಪ್ರಾದೇಶಿಕ ಉಡುಪಿ: ಸಂಸತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಯುವಜನರಿಗೆ ಅವಕಾಶ

ಉಡುಪಿ: ಸಂಸತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಯುವಜನರಿಗೆ ಅವಕಾಶ

309
0

ಉಡುಪಿ, ಸೆ. 13: ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಸ್ಮರಣಾರ್ಥ ನೆಹರು ಯುವ ಕೇಂದ್ರ ಸಂಘಟನೆಯ ೨೫ ಯುವಜನರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ನೆಹರು ಯುವ ಕೇಂದ್ರ ಸಂಘಟನೆಯ 25 ಯುವಜನರನ್ನು ಆಯ್ಕೆ ಮಾಡಲು ದೇಶಾದ್ಯಂತ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಭಾಷಣ ಸ್ಪರ್ಧೆಯನ್ನು ನಡೆಸಲು ನಿರ್ಧರಿಸಲಾಗಿದೆ. ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು, ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯಗಳನ್ನು ಗುಂಪು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಯುವಜನರು ಲಾಲ್ ಬಹದ್ಧೂರ್ ಶಾಸ್ತ್ರಿ- ಅಮೃತಕಾಲದಲ್ಲಿ ಅವರ ಜೀವನ ಪಾಠಗಳು ಮತ್ತು ಪರಂಪರೆ ವಿಷಯದ ಬಗ್ಗೆ ಭಾಷಣ್ ಮಾಡಬೇಕು.

ಸ್ಪರ್ಧೆಯ ನಿಯಮಗಳ: ಸ್ಪರ್ಧೆಯಲ್ಲಿ ಭಾಗವಹಿಸುವವರು ಉಡುಪಿ ಜಿಲ್ಲೆಯ ನಿವಾಸಿಗಳಾಗಿರಬೇಕು. ವಯಸ್ಸು 18 ರಿಂದ 29 (1 ನೇ ಅಕ್ಟೋಬರ್ 2023 ಗೆ) ವರ್ಷದೊಳಗಿರಬೇಕು. ಈ ಹಿಂದೆ ಸಂಸತ್ತಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಯುವಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ. ವಿಷಯ- ಲಾಲ್ ಬಹದ್ಧೂರ್ ಶಾಸ್ತ್ರಿ- ಅಮೃತಕಾಲದಲ್ಲಿ ಅವರ ಜೀವನ ಪಾಠಗಳು ಮತ್ತು ಪರಂಪರೆ. ಭಾಷಣದ ಕಾಲಾವಕಾಶ ಕೇವಲ ೩ ನಿಮಿಷ ಮಾತ್ರ. ಹಿಂದಿ ಅಥವಾ ಇಂಗ್ಲೀಷ್ ಬಾಷೆಗಳಲ್ಲಿ ಮಾತ್ರ ಭಾಷಣ ಮಾಡಲು ಅವಕಾಶ.

ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ನೆಹರು ಯುವ ಕೇಂದ್ರ ಉಡುಪಿ ವತಿಯಿಂದ ದಿನಾಂಕ 16.09.2023 ರಂದು ಮಧ್ಯಾಹ್ನ 3.00 ಗಂಟೆಗೆ ಆಯೋಜಿಸಲಾಗಿದ್ದು ಸ್ಪರ್ಧೆಗಳು ಆನಲೈನ್ (ವರ್ಚುವಲ್) ಮುಖೇನ ನಡೆಸಲಾಗುವುದು. ಸ್ಪರ್ಧೆಗೆ ಆನಲೈನ್ ಲಿಂಕ್‌ನ್ನು ನೊಂದವಣಿಯಾದ ಸ್ಪರ್ಧಾಳುಗಳಿಗೆ ನೀಡಲಾಗುವುದು.

ನೊಂದಾವಣೆ: ಭಾಗವಹಿಸಲಿಚ್ಚಿಸುವವರು ತಮ್ಮ ಸ್ವ ವಿವರವನ್ನು [email protected] ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವಜನ ಅಧಿಕಾರಿ ಮೂಬೈಲ್ ಸಂಖ್ಯೆ 7503703457/ 8762114883 (ಲೆಕ್ಕಾಧಿಕಾರಿಗಳು) ಹಾಗೂ ದೂರವಾಣಿ ಸಂಖ್ಯೆ 0820-2574992 ಇವರಿಂದ ಪಡೆಯಬಹುದು ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ
ಯಶವಂತ್ ಯಾದವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.