Home ಸುದ್ಧಿಗಳು ಪ್ರಾದೇಶಿಕ ಕಾತ್ಯಾಯಿನಿ ಕುಂಜಿಬೆಟ್ಟು ಅವರ 5 ಕೃತಿಗಳ ಅನಾವರಣ

ಕಾತ್ಯಾಯಿನಿ ಕುಂಜಿಬೆಟ್ಟು ಅವರ 5 ಕೃತಿಗಳ ಅನಾವರಣ

320
0

ಕಾಸರಗೋಡು, ಆ. 26: ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ನಡೆದ ರಂಗಚಿನ್ನಾರಿ ಕಾಸರಗೋಡು (ರಿ) ಇದರ ಮಹಿಳಾ ಘಟಕದ ‘ನಾರಿಚಿನ್ನಾರಿ’ಯ ಓಣಂ ಸಂಧ್ಯಾದಲ್ಲಿ ಸಾಹಿತಿ, ಉಡುಪಿಯ ಎಂಜಿಎಂ ಕಾಲೇಜಿನ ಉಪನ್ಯಾಸಕಿ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಐದು ಕೃತಿಗಳು ಅನಾವರಣಗೊಂಡವು.

ಏಕತಾರಿ ಸಂಚಾರಿ (ಕವನ ಸಂಕಲನ) ಕೊಕ್ಕೊ ಕೋಕೋ (ಮಕ್ಕಳ ನಾಟಕ) ಶಿವರಾಮ ಕಾರಂತರ ಕನ್ನಡ ಪ್ರಜ್ಞೆ (ಸಂಪಾದಿತ) ಕನಕದಾಸೆರ್ನ ರಾಮಧಾನ್ಯ ಚರಿತೆ (ಅನುವಾದ) ಮೊಗೇರಿ ಗೋಪಾಲಕೃಷ್ಣ ಅಡಿಗ (ವಾಚಿಕೆ) ಈ ಐದು ಕೃತಿಗಳನ್ನು ಗಡಿನಾಡಿನ ಮಹತ್ವದ ಮಹಿಳಾ ಬರಹಗಾರರಾದ ವಿಜಯಲಕ್ಷ್ಮೀ ಶ್ಯಾನ್ ಭೋಗ್, ಸರ್ವಮಂಗಳ ಜಯ್ ಪುಣಿಚಿತ್ತಾಯ, ದಿವ್ಯಾ ಗಟ್ಟಿ ಪರಕ್ಕಿಲ, ಸ್ನೇಹಲತಾ ದಿವಾಕರ್ ಹಾಗೂ ಡಾ. ಮಹೇಶ್ವರಿ ಬಿಡುಗಡೆಗೊಳಿಸಿದರು.

ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮೀ ಕೆ ಅವರು ಕೃತಿಗಳನ್ನು ಪರಿಚಯಿಸಿದರು. ಓಣಂ ಸಂಧ್ಯಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಲೆಕ್ಕ ಪರಿಶೋಧಕರು ಹಾಗೂ ನಾರಿ ಚಿನ್ನಾರಿಯಾ ಗೌರವಾಧ್ಯಕ್ಷರಾದ ತಾರಾ ಜಗದೀಶ್ ವಹಿಸಿದ್ದರು. ರಂಗ ಚಿನ್ನಾರಿ ಇದರ ಮುಖ್ಯಸ್ಥ ಕಲಾವಿದ ಕಾಸರಗೋಡು ಚಿನ್ನಾ ಅವರು ಆಶಯದ ನುಡಿಗಳನ್ನಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.