ಉಡುಪಿ, ಜು. 24: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕದ ವತಿಯಿಂದ ವೃಕ್ಷಮಾತೆ ಡಾ. ಸಾಲುಮರದ ತಿಮ್ಮಕ್ಕ ಅವರನ್ನು ಉಡುಪಿಯ ಭೇಟಿಯ ಸಂದರ್ಭದಲ್ಲಿ ಗೌರವಿಸಲಾಯಿತು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡಿ, ಉಡುಪಿಗೂ ಸಾಲುಮರದ ತಿಮ್ಮಕ್ಕ ಅವರಿಗೂ ಅವಿನಾಭಾವ ಸಂಬಂಧವಿದೆ. ತಿಮ್ಮಕ್ಕ ಅವರ ಕುರಿತಾದ ಗೀತೆ ಮತ್ತು ಸಾಕ್ಷ್ಯಚಿತ್ರ ಉಡುಪಿಯಿಂದಲೇ ಧ್ವನಿಮುದ್ರಿತಗೊಂಡು ಅನವರಣವಾಗಿದೆ, ಅಲ್ಲದೆ ಅಜ್ಜಿ ಸಂಕಷ್ಟದಲ್ಲಿದ್ದಾಗ ದೊಡ್ಡ ಮೊತ್ತದ ಸಹಾಯವನ್ನು ‘ನೆರಳು ನೆರವು’ ಯೋಜನೆಯ ಮೂಲಕ ಅವರಿಗೆ ನೀಡಲಾಗಿತ್ತು ಎಂದು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ, ಸಾಲುಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ವನಸಿರಿ, ಉರಗ ತಜ್ಞ ಗುರುರಾಜ್ ಸನಿಲ್, ಮಧುಸೂದನ್ ಹೇರೂರು, ಅವಿನಾಶ್ ಕಾಮತ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.