ಬೆಳ್ಮಣ್, ಜು. 22: ಅಂತರರಾಷ್ಟ್ರೀಯ ಭಾರತಿಯ ಜೇಸಿಐ ವಲಯ ಹದಿನೈದರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ೪೩ ವರ್ಷಗಳ ಸುದೀರ್ಘ ಇತಿಹಾಸವಿರುವ ಬೆಳ್ಮಣ್ಣು ಜೇಸಿಐ ಘಟಕಕ್ಕೆ ಭಾರತೀಯ ಜೇಸಿಐನ ರಾಷ್ಟ್ರಾಧ್ಯಕ್ಷರಾದ ಕಾರ್ತಿಕೇಯನ್ ಎಂ.ಎನ್ ಅವರು ಆಗಮಿಸಿ ವಾಸ್ತು ತಜ್ಞರು ಹಾಗೂ ಜ್ಯೋತಿಷ್ಯರಾದ ಗುರೂಜಿ ಡಾ. ಆಚಾರ್ಯ ಜಿ. ವಾದಿರಾಜ್ ಬೆಳ್ಮಣ್ಣು ಇವರ ನೇತೃತ್ವದಲ್ಲಿ ಬೆಳ್ಮಣ್ಣು ಜಂತ್ರ ನಿರ್ಮಿಸಿರುವ ನೂತನ ಮನೆಯನ್ನು ಉದ್ಘಾಟಿಸಿ ಬೆಳ್ಮಣ್ಣು ಜೇಸಿಐನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಬೆಳ್ಮಣ್ಣು ಜೇಸಿಐ ಘಟಕದ ಸಾಧನೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ವಹಿಸಿದ್ದರು.
ದಾನಿಗಳಾದ ನೂತನ ಮನೆ ನಿರ್ಮಾಣದ ನೇತೃತ್ವ ವಹಿಸಿರುವ ಜ್ಯೋತಿಷ್ಯರು ಹಾಗೂ ವಾಸ್ತು ತಜ್ಞರಾದ ಬೆಳ್ಮಣ್ಣು ಆಚಾರ್ಯ ಜಿ. ವಾದಿರಾಜ ದಂಪತಿಗಳನ್ನು ಭಾರತೀಯ ಜೇಸಿಐನ ರಾಷ್ಟ್ರಾಧ್ಯಕ್ಷರು ಬೆಳ್ಮಣ್ಣು ಜೇಸಿಐ
ವತಿಯಿಂದ ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ವಲಯಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷರಾದ ಬೋಳ ಸುಧಾಕರ ಆಚಾರ್ಯ, ಅಭಿಲಾಷ್, ಜಯಶ್ರೀ ಮಿತ್ರ ಕುಮಾರ್, ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಮುರಳೀಧರ ಜೋಗಿ, ರವಿರಾಜ್ ಶೆಟ್ಟಿ, ಸದಸ್ಯರಾದ ಮಾಯಾ ಸಿ. ರಾವ್, ಶ್ವೇತಾ ಆಚಾರ್ಯ, ವೀಣಾ ಆಚಾರ್ಯ, ಅನಿತಾ ಪೂಜಾರಿ, ಪದ್ಮಶ್ರೀ ಪೂಜಾರಿ, ಸುರೇಶ್ ಪೂಜಾರಿ ಕಾಸ್ರಬೈಲು ಸೇರಿದಂತೆ ವಲಯ ಹಲವಾರು ನಿರ್ದೇಶಕರುಗಳು, ಸಂಯೋಜಕರು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿದ್ದರು.