Wednesday, November 27, 2024
Wednesday, November 27, 2024

ಬಸವಣ್ಣ ಅವರಿಂದ ಜಗತ್ತಿನ ಮೊದಲ ಸಂಸತ್ತು ರಚನೆ: ಪ್ರಸನ್ನ ಹೆಚ್

ಬಸವಣ್ಣ ಅವರಿಂದ ಜಗತ್ತಿನ ಮೊದಲ ಸಂಸತ್ತು ರಚನೆ: ಪ್ರಸನ್ನ ಹೆಚ್

Date:

ಉಡುಪಿ, ಏ.23: ಜಗತ್ತಿನಲ್ಲಿ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪವನ್ನು ರಚಿಸುವ ಮೂಲಕ ಸರ್ವ ಜನಾಂಗದ ಶ್ರೇಯಾಭಿವೃದ್ಧಿಗೆ ಸ್ತ್ರೀ-ಪುರುಷರೆಂಬ ತಾರತಮ್ಯವಿಲ್ಲದೆ ಮುಕ್ತ ವಾತಾವರಣವನ್ನು ಕಲ್ಪಿಸಿದ ಬಸವಣ್ಣನವರು ಜಗತ್ತಿನ ಪ್ರಥಮ ಪ್ರಜಾಪ್ರಭುತ್ವಕ್ಕೆ ಮಾದರಿಯಾದವರು ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು. ಅವರು ಭಾನುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ತಾವು ಈ ಹಿಂದೆ ಬಸವಕಲ್ಯಾಣದಲ್ಲಿ ಕೆಲಸ ನಿರ್ವಹಿಸಲು ಸಿಕ್ಕ ಅವಕಾಶವನ್ನು ಸ್ಮರಿಸಿಕೊಂಡು, ಬಸವಕಲ್ಯಾಣದಲ್ಲಿ ಇರುವ ಬಸವಣ್ಣ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸರ್ಕಾರದ ವತಿಯಿಂದ ಬಸವಣ್ಣನವರನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೆಂದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ರವರು ಮಾತನಾಡುತ್ತಾ ಬಸವಣ್ಣನವರ ಕಾಯಕ ತತ್ವ ಹಾಗೂ ದಾಸೋಹ ತತ್ವ ಇಂದಿನ ಮಟ್ಟಿಗೆ ತುಂಬಾ ಪ್ರಸ್ತುತ. ಬಸವಣ್ಣನವರ ತತ್ವದಂತೆ ಅಂತರAಗ ಶುದ್ಧರಾಗಿ ಎಲ್ಲರೂ ಕೆಲಸ ನಿರ್ವಹಿಸುವುದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಂದ್ರ ಅಡಿಗ ಅವರು ಶುಭ ಹಾರೈಕೆಯ ಮಾತುಗಳನ್ನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಗಿರೀಶ್ ಬಸವಣ್ಣನವರ ವಚನವನ್ನು ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ ನ ರವಿರಾಜ್ ಹೆಚ್. ಪಿ., ನರಸಿಂಹಮೂರ್ತಿ, ರಾಜೇಶ್ ಭಟ್, ಸಂಗೊಳ್ಳಿ ರಾಯಣ್ಣ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸವಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಬಸವ ಸಮಿತಿ ಜಿಲ್ಲಾ ಅಧ್ಯಕ್ಷ ಶಾಂತೇಗೌಡ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಕಲಚೇತನರ ಸಪ್ತಾಹ ಉದ್ಘಾಟನೆ

ಉಡುಪಿ, ನ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ...

ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅಮೂಲ್ಯ: ಶಾಸಕ ಯಶ್‌ಪಾಲ್ ಎ ಸುವರ್ಣ

ಉಡುಪಿ, ನ.26: ಸ್ವಚ್ಛತೆಯಲ್ಲಿ ಉಡುಪಿಯು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣ ಜಿಲ್ಲೆಯ ಪೌರಕಾರ್ಮಿಕರು....

ರಥಬೀದಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮಂಗಳೂರು, ನ.26: ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ...

ಆಳ್ವಾಸ್ ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ

ವಿದ್ಯಾಗಿರಿ, ನ.26: ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ...
error: Content is protected !!