Wednesday, January 22, 2025
Wednesday, January 22, 2025

ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಹೊರರೋಗಿ ಸೇವೆಯ ಪರಿಷ್ಕೃತ ಸಮಯದ ಮಾಹಿತಿ

ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಹೊರರೋಗಿ ಸೇವೆಯ ಪರಿಷ್ಕೃತ ಸಮಯದ ಮಾಹಿತಿ

Date:

ಕಾರ್ಕಳ, ಏ. 1: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳವನ್ನು ಇತ್ತೀಚೆಗೆ ಹೊಸ ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಹಲವು ಸೌಲಭ್ಯಗಳ ಸೇರ್ಪಡೆಯೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಜ್ಞ ವೈದ್ಯರ ಸೇರ್ಪಡೆಯೊಂದಿಗೆ 24*7 ಅಪಘಾತ ಮತ್ತು ತುರ್ತು ಚಿಕಿತ್ಸಾ ಸೌಲಭ್ಯವನ್ನು ಆರಂಭಿಸಲಾಗುವುದು.

ಇದೀಗ ಸಾರ್ವಜನಿಕರ ಅಪೇಕ್ಷೆಯ ಮೇರೆಗೆ ಮತ್ತು ಅವರ ಅನುಕೂಲಕ್ಕಾಗಿ ಆಸ್ಪತ್ರೆಯ ಹೊರರೋಗಿ ವಿಭಾಗದ ವೈದ್ಯರ ಸಮಾಲೋಚನೆ ಸಮಯವನ್ನು ಬದಲಾಯಿಸಲಾಗಿದೆ.

ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಅಪರಾಹ್ನ 3.30 ರಿಂದ ಸಂಜೆ 6.30ರವರೆಗೆ ತಜ್ಞ ವೈದ್ಯರು ಸಮಾಲೋಚನೆಗೆ ಲಭ್ಯವಿರುತ್ತಾರೆ.

ಪರಿಷ್ಕೃತ ಹೊರರೋಗಿ ಸಮಯವು, ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಈ ಬದಲಾವಣೆಗಳೊಂದಿಗೆ, ರೋಗಿಗಳು ಅವರ ಅನುಕೂಲಕ್ಕೆ ತಕ್ಕಂತೆ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು ಎಂದು ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯು ಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ಸೌಲಭ್ಯಗಳ ಸೇರ್ಪಡೆಯೊಂದಿಗೆ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆಯನ್ನು ಒದಗಿಸಲು ಮೀಸಲಾಗಿರುವ ಹೆಚ್ಚು ನುರಿತ ವೈದ್ಯರು ಮತ್ತು ಸಿಬ್ಬಂದಿಗಳ ತಂಡವನ್ನು ಹೊಂದಿದೆ ಎಂದು ಡಾ ಕೀರ್ತಿನಾಥ ಬಲ್ಲಾಳ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 08258 230583 ಅಥವಾ 9731601150 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!