Wednesday, January 22, 2025
Wednesday, January 22, 2025

ಉಡುಪಿಗೆ ಒಂದು ಸುಸಜ್ಜಿತ ಎಂಫಿ ಥಿಯೇಟರ್ ಅಗತ್ಯ: ಪ್ರೊ. ಮುರಳೀಧರ ಉಪಾಧ್ಯ

ಉಡುಪಿಗೆ ಒಂದು ಸುಸಜ್ಜಿತ ಎಂಫಿ ಥಿಯೇಟರ್ ಅಗತ್ಯ: ಪ್ರೊ. ಮುರಳೀಧರ ಉಪಾಧ್ಯ

Date:

ಉಡುಪಿ, ಮಾ. 27: ಉಡುಪಿಯ ಭುಜಂಗ ಪಾರ್ಕ್ ಬಳಿ ಬೆಂಗಳೂರಿನ ರಂಗ ಶಂಕರ ಮಾದರಿಯ ಸುಸಜ್ಜಿತವಾದ ರಂಗಮಂದಿರವನ್ನು ನಿರ್ಮಾಣ ಮಾಡಬೇಕೆಂದು ಕನ್ನಡದ ಹಿರಿಯ ವಿಮರ್ಶಕ, ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಅವರು ಉಡುಪಿಯ ನಗರ ಸಭೆಗೆ ಒತ್ತಾಯಿಸಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಮಲಬಾರ್ ವಿಶ್ವರರಂಗ ಪುರಸ್ಕಾರ 2023 ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ, ಉಡುಪಿ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು ಸುಸಜ್ಜಿತವಾದ ರಂಗಮಂದಿರದ ಅಗತ್ಯವಿದೆ.

ಈ ನಿಟ್ಟಿನಲ್ಲಿ ಉಡುಪಿ ನಗರಸಭೆಯು ಬೆಂಗಳೂರಿನ ರಂಗ ಶಂಕರದ ಮಾದರಿಯ ಸುಸಜ್ಜಿತವಾದ ರಂಗ ಮಂದಿರ (ಎಂಫಿ ಥಿಯೇಟರ್) ನಿರ್ಮಾಣ ಮಾಡಬೇಕು‌. ಉಡುಪಿಯ ಎಲ್ಲಾ ರಂಗ ತಂಡಗಳು, ಸಾಂಸ್ಕೃತಿಕ ತಂಡಗಳು ಕೈಗೆಟುಕುವ ಬಾಡಿಗೆಯನ್ನು ನೀಡಿ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವಂತೆ ಆಗಬೇಕು. ಉಡುಪಿ ನಗರಸಭೆ ಈ ಬಗ್ಗೆ ಆದಷ್ಟು ಬೇಗ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು.

ರಂಗಭೂಮಿಯಲ್ಲಿ ಸಾಧನೆ ಮಾಡಿದ ಹಿರಿಯರಾದ ಮೂರ್ತಿ ದೇರಾಜೆ , ಬೆಂಗಳೂರಿನ ಶೋಭ ವೆಂಕಟೇಶ್, ಉಡುಪಿಯ ಎಂ. ಎಸ್. ಭಟ್ ಹಾಗೂ ಪಾಂಬೂರಿನ ಪ್ರಕಾಶ್ ನೊರೋನ್ಹ ಅವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಲಾವಣ್ಯ ಬೈಂದೂರು ಇದರ ಮುಖ್ಯಸ್ಥರಾದ ಗಣೇಶ್ ಕಾರಂತ್, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷರಾದ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ವ್ಯವಸ್ಥಾಪಕ ಹಫೀಸ್ ರೆಹಮಾನ್ ಉಪಸ್ಥಿತರಿದ್ದರು.

ಮಲಬಾರ್ ವಿಶ್ವರಂಗ ಪುರಸ್ಕಾರದ ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು.

ಸಂಚಾಲಕ ರವಿರಾಜ್ ಎಚ್.ಪಿ., ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಸಂಧ್ಯಾ ಶೆಣೈ ವಂದಿಸಿ, ಕೃಷ್ಣಮೂರ್ತಿ ಮಂಜಿತಾಯ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾರಂಭದಲ್ಲಿ ಯುವ ಕಲಾವಿದೆ ಪವಿತ್ರ ನಾಯಕ್ ಅವರಿಂದ ಏಕವ್ಯಕ್ತಿ ರಂಗ ಪ್ರಯೋಗ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಬೃಂದಾವನದಿಂದ ಉಡುಪಿಯೆಡೆ’ ಸಾಂಝಿ ಕಲಾಕೃತಿಗಳ ಪ್ರದರ್ಶನ

ಉಡುಪಿ, ಜ.22: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು...

ಜ.23: (ನಾಳೆ) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಡುಪಿಗೆ

ಉಡುಪಿ, ಜ.22: ಕರ್ನಾಟಕ ಸರಕಾರದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು...

ಪೆರ್ಡೂರು: ಕೊರಗ ಸಮುದಾಯದ ಕಾಲನಿಗೆ ಶಾಸಕರ ಭೇಟಿ

ಪೆರ್ಡೂರು, ಜ.22: ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುಂಡಿ ಕೊರಗರ ಕಾಲೋನಿಗೆ...

ಜ್ಞಾನಸುಧಾ: ಕಂಪೆನಿ ಸೆಕ್ರೇಟರಿ ಸಾಧಕರಿಗೆ ಸನ್ಮಾನ

ಕಾರ್ಕಳ, ಜ.22: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು...
error: Content is protected !!