Home ಸುದ್ಧಿಗಳು ಪ್ರಾದೇಶಿಕ ಮುಕ್ತ ವಿ.ವಿ ಪ್ರವೇಶಾತಿಗೆ ಮಾರ್ಚ್ 31 ಕೊನೆಯ ದಿನ

ಮುಕ್ತ ವಿ.ವಿ ಪ್ರವೇಶಾತಿಗೆ ಮಾರ್ಚ್ 31 ಕೊನೆಯ ದಿನ

297
0

ಉಡುಪಿ, ಮಾ. 24: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ಜನವರಿ ಆವೃತ್ತಿಯ ಬಿ.ಎ, ಬಿ.ಕಾಂ, ಬಿ.ಲಿಬ್.ಐಸ್ಸಿ, ಡಿಪ್ಲೋಮಾ ಸರ್ಟಿಫಿಕೇಟ್, ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಎಸ್ಸಿ, ಎಂ.ಲಿಬ್.ಐಸ್ಸಿ ಕೋರ್ಸುಗಳ ಪ್ರವೇಶಾತಿಗೆ ಮಾರ್ಚ್ 31 ಕೊನೆಯ ದಿನವಾಗಿದೆ.

ಮಾರ್ಚ್ 25 ರ ನಾಲ್ಕನೇ ಶನಿವಾರ ಮತ್ತು ಮಾ. 26 ರ ಭಾನುವಾರದಂದು ಪ್ರವೇಶಾತಿ ಪ್ರಕ್ರಿಯೆ ನಡೆಯಲಿದ್ದು, ಜನವರಿ ಆವೃತ್ತಿಯ ದ್ವಿತೀಯ ಮತ್ತು ತೃತೀಯ ಕೋರ್ಸ್ಗಳ ನವೀಕರಣವೂ ನಡೆಯುತ್ತಿದ್ದು, ಪ್ರಾದೇಶಿಕ ಕೇಂದ್ರ ಕಚೇರಿ ಎಂದಿನಂತೆ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ http://www.ksoumysuru.ac.in ನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.