Home ಸುದ್ಧಿಗಳು ಪ್ರಾದೇಶಿಕ ಸಮೃದ್ಧಿ ಮಹಿಳಾ ಮಂಡಳಿ: ಸನ್ಮಾನ, ಬಹುಮಾನ ವಿತರಣಾ ಕಾರ್ಯಕ್ರಮ

ಸಮೃದ್ಧಿ ಮಹಿಳಾ ಮಂಡಳಿ: ಸನ್ಮಾನ, ಬಹುಮಾನ ವಿತರಣಾ ಕಾರ್ಯಕ್ರಮ

417
0

ಬ್ರಹ್ಮಾವರ, ಮಾ. 16: ಸಮೃದ್ಧಿ ಮಹಿಳಾ ಮಂಡಳಿ (ರಿ.) ಪೇತ್ರಿ, ಚೇರ್ಕಾಡಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸನ್ಮಾನ ಅಹಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಪೇತ್ರಿ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶೀಲಾ ಉದ್ಘಾಟನೆ ನೆರವೇರಿಸಿದರು. ರಾಷ್ಟ್ರಪ್ರಶಸ್ತಿ ವಿಜೇತ ಭೂಮಿಕಾ ರಂಗತಂಡ ಹಾರಾಡಿ ಇದರ ಬರ್ಬರೀಕ ನಾಟಕದ ಕಲಾವಿದೆ ವನಿತಾ ಎಸ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಮಲ್ಲಿಕಾ ಹರೀಶ್ ಸ್ವಾಗತಿಸಿ, ಶಾಂಭವಿ ವಂದಿಸಿದರು. ವೀಣಾ ಪಿ ಶ್ಯಾನುಭೋಗ್ ನಿರೂಪಿಸಿದರು. ಲತಾ.ಡಿ., ವನಿತಾ ಪಿ ಶೆಟ್ಟಿ, ಯಶೋಧ, ಪ್ರತಿಮಾ, ಸವಿತಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.