ಉಡುಪಿ, ಮಾ. 9: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021-22ನೇ ಸಾಲಿನಲ್ಲಿ ಸ್ನಾತಕೋತ್ತರ ಪರೀಕ್ಷೆಗಳಲ್ಲಿ 8 ರ‍್ಯಾಂಕು ಹಾಗೂ ಪದವಿ ವಿಭಾಗದಲ್ಲಿ ಒಂದು ರ‍್ಯಾಂಕ್ ಗಳಿಸಿದೆ. ಎಂ.ಎ. ಇತಿಹಾಸ ವಿಭಾಗದ ಪ್ರಕಾಶ ಪ್ರಥಮ ರ‍್ಯಾಂಕು, ಎಂ.ಎ. ಸಮಾಜಶಾಸ್ತ್ರ ವಿಭಾಗದ ರಕ್ಷಿತಾ ಪ್ರಥಮ ರ‍್ಯಾಂಕ್, ಆಂಗ್ಲ ಭಾಷಾ ವಿಭಾಗದ ಕೋಲಿನ್ ಆಂಟೋನಿತಾ ಲೋಬೋ ಪ್ರಥಮ ರ‍್ಯಾಂಕ್ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ರೈನಾ ಡಿಸೋಜ ದ್ವಿತೀಯ ರ‍್ಯಾಂಕ್, ನವ್ಯ ಅಂಚನ್ ಆರನೇ ರ‍್ಯಾಂಕ್, ರೀಮಾ ಸೀಮಾ ಎಂಟನೇ ರ‍್ಯಾಂಕ್, ಅನುಷಾ ಶಂಕರ ನಾಯ್ಕ್ ಒಂಬತ್ತನೇ ರ‍್ಯಾಂಕ್ ಹಾಗೂ ಪ್ರಣೀತ ಹತ್ತನೇ ರ‍್ಯಾಂಕ್ ಗಳಿಸಿರುತ್ತಾರೆ. ಪದವಿ ವಿಭಾಗ ಪರೀಕ್ಷೆಗಳಲ್ಲಿ ಬಿ.ಎಸ್.ಡಬ್ಲ್ಯೂ. ವಿಭಾಗದಲ್ಲಿ ದಿವ್ಯಾ ತೃತೀಯ ರ‍್ಯಾಂಕ್ ಪಡೆದಿರುತ್ತಾರೆ.
ಚಿನ್ನದ ಪದಕಗಳು: ಸಮಾಜಶಾಸ್ತ್ರ ವಿಭಾಗದ ರಕ್ಷಿತಾ ಅವರು ಜಯರಾಜ್ ಬಳ್ಳಾಲ್ ಮೆಮೋರಿಯಲ್ ಚಿನ್ನದ ಪದಕ, ಪ್ರೊ. ಜೋಗನ್ ಶಂಕರ್ ಚಿನ್ನದ ಪದಕ, ವಿಮೋಚನಾ ದೇವದಾಸಿ ಪುನರ್ವಸತಿ ಸಂಘ ಅಥಣಿ ಚಿನ್ನದ ಪದಕ, ಒಟ್ಟು 3 ಚಿನ್ನದ ಪದಕಗಳು. ಇತಿಹಾಸ ವಿಭಾಗದ ಪ್ರಕಾಶ ಕೆ. ಇವರು ದಿ. ಡಾ. ಗುರುರಾಜ ಭಟ್ಟ ಚಿನ್ನದ ಪದಕ, ದಿ. ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ಚಿನ್ನದ ಪದಕ ಒಟ್ಟು 2 ಚಿನ್ನದ ಪದಕಗಳು.
ನಗದು ಬಹುಮಾನ: ಕನ್ನಡ ವಿಭಾಗದ ಸ್ವರ್ಣ ಇವರು ಪೆರುವಾಯ ಸುಬ್ಬಯ್ಯ ಶೆಟ್ಟಿ ಮೆಮೋರಿಯಲ್ ನಗದು ಬಹುಮಾನ ಪಡೆದಿರುತ್ತಾರೆ. ಆಂಗ್ಲ ಭಾಷಾ ವಿಭಾಗದ ಕೋಲಿನ್ ಆಂಟೋನಿತಾ ಲೋಬೋ ಅವರು ಪದ್ಮನಾಗಪ್ಪ ಶಾಸ್ತ್ರಿ ನಗದು ಬಹುಮಾನ, ಲವ್ಲಿಲಾ ಮತ್ತು ಜೆ.ಬಿ. ಲೋಬೋ ಪ್ರಭು ಸಾಹಿತ್ಯ ನಗದು ಬಹುಮಾನ, ಹಳೆ ವಿದ್ಯಾರ್ಥಿ ನಗದು ಬಹುಮಾನ ಪಡೆದಿರುತ್ತಾರೆ.
ಆಂಗ್ಲ ಭಾಷಾ ವಿಭಾಗದ ರವೀನಾ ಸಿ. ಪೂಜಾರಿ ಇವರು ಶ್ರೀಮತಿ ವಸಂತ ಎಸ್. ಅನಂತ ನಾರಾಯಣ ಮತ್ತು ಪ್ರೊ. ಎಸ್. ಅನಂತನಾರಾಯಣ ನಗದು ಬಹುಮಾನ ಪಡೆದಿರುತ್ತಾರೆ. ಇತಿಹಾಸ ವಿಭಾಗದ ಪ್ರಕಾಶ್ ಕೆ. ಇವರು ಡಾ. ಪಿ. ಗುರುರಾಜ ಭಟ್ಟ ಮೆಮೋರಿಯಲ್ ನಗದು ಬಹುಮಾನ ಹಾಗೂ ಆಬ್ರೆ ಡಿಸೋಜಾ ಚಾರಿಟೇಬಲ್ ಫೌಂಡೇಶನ್ ನಗದು ಬಹುಮಾನ ಪಡೆದಿರುತ್ತಾರೆ.