ಉಡುಪಿ, ಮಾ. 8: ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಆಡಳಿತರೂಢ ಪಕ್ಷಕ್ಕೆ ಬಂಟರ ಸಂಘ ಬಹುಕಾಲದಿಂದ ನಿರಂತರವಾಗಿ ಹಿಂದುಳಿದ ಪ್ರವರ್ಗ 2ಎಗೆ ಮೀಸಲಾತಿ ದೊರಕಿಸಿಕೊಡಬೇಕು ಮತ್ತು ಬಂಟರಿಗೊಂದು ನಿಗಮ ಸ್ಥಾಪಿಸಬೇಕೆಂಬ ಬಹುಅಗತ್ಯದ ಎರಡು ಬೇಡಿಕೆಗಳನ್ನು ಜಾಗತಿಕ ಬಂಟರ ವೇದಿಕೆಯ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಮೂಲಕ ಹಲವು ಬಾರಿ ಮುಖ್ಯಮಂತ್ರಿಗಳನ್ನು, ಸಚಿವರುಗಳನ್ನು, ಶಾಸಕರುಗಳನ್ನು ನಿವೇದಿಸಿಕೊಂಡು ಮನವಿ ಸಲ್ಲಿಸಲಾಯಿತು. ಅದಕ್ಕೆ ಸಕಾರಾತ್ಮಕ ಸ್ಪಂದಿಸಿದ ಮುಖ್ಯಮಂತ್ರಿಗಳು ಸಚಿವರು ಶಾಸಕರುಗಳು ನಿಮ್ಮ ಬೇಡಿಕೆಗಳನ್ನು ಖಂಡಿತವಾಗಿಯೂ ಪೂರೈಸಿಕೊಡುತ್ತೇವೆ ಅನ್ನುವ ಭರವಸೆಯನ್ನು ನೀಡುತ್ತಾ ಬಂದಿದ್ದರು.
ಆದರೆ ಬಜೆಟ್ ಅಧಿವೇಶನ ಕಳೆದು ಚುನಾವಣೆ ಹತ್ತಿರ ಬಂದರೂ ಕೂಡಾ ಈ ಕುರಿತಾಗಿ ಗಂಭೀರವಾದ ಮೌನ ವಹಿಸಿರುವುದು ಬಂಟರಿಗೆ ಅತೀವ ನೇೂವು ತಂದಿದೆ. ಬಂಟರು ಅಂದರೆ ಎಲ್ಲರೂ ಶ್ರೀಮಂತರಲ್ಲ. ಸುಮಾರು ಶೇ.90ರಷ್ಟು ಬಂಟರು ಬಡತನ ಮಧ್ಯಮ ವರ್ಗದಲ್ಲಿ ಬಹುಕಷ್ಟದಿಂದ ಬದುಕುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ವಸತಿ, ಆರೇೂಗ್ಯ ದೃಷ್ಟಿಯಿಂದ ಸಾಕಷ್ಟು ಸಮಸ್ಯೆಗಳಿವೆ. ಬಂಟರು ಯಾವತ್ತೂ ತಮ್ಮ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯ ಮಾಡಿದವರಲ್ಲ. ಆದರೆ ನಮ್ಮ ಮುಂದೆ ಎಲ್ಲರಿಗೂ ಸರ್ಕಾರದ ಸವಲತ್ತುಗಳು ಸಿಗುತ್ತಾ ಇರಬೇಕಾದರೆ ನಮ್ಮ ಬಂಟರು ಮಾತ್ರ ಕೈ ಕಟ್ಟಿ ಸುಮ್ಮನೆ ಇರಬೇಕಾ?
ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸರಿ ಸುಮಾರು 30 ಲಕ್ಷಕ್ಕೂ ಮಿಕ್ಕಿ ಬಂಟರ ಜನಸಂಖ್ಯೆ ಇದೆ. ಮಾತ್ರವಲ್ಲ ಅವಿಭಜಿತ ದ.ಕ.ಜಿಲ್ಲೆಯ 13 ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶ ಅಡಿಮೇಲು ಮಾಡುವಷ್ಟು ಮತದಾರರು ಇದ್ದಾರೆ. ಬಂಟರ ಸಮಾಜಕ್ಕೆ ಸೇರಿದ ಶಾಸಕರು ಸಂಸದರು ಇದ್ದಾರೆ. ಇವರು ಕೂಡಾ ಈ ನಿಟ್ಟಿನಲ್ಲಿ ಹೆಚ್ಚು ಆಸ್ಥೆ ವಹಿಸದೇ ಇರುವುದು ಬಂಟರ ಬೇಗುದಿಗೆ ಕಾರಣವಾಗಿದೆ. ಒಂದು ವೇಳೆ ಆಡಳಿತರೂಢ ಬಿಜೆಪಿ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೇೂದರೆ ಮುಂಬರುವ ಚುನಾವಣೆಯಲ್ಲಿ ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸಲು ನಾವು ಹಿಂದೆ ಮುಂದೆ ನೇೂಡುವುದಿಲ್ಲ ಅನ್ನುವ ಎಚ್ಚರಿಕೆಯ ಸಂದೇಶವನ್ನು ಆಡಳಿತರೂಢ ಪಕ್ಷಕ್ಕೆ ಉಡುಪಿ ಬಂಟರ ಸಂಘದ ಗೌರವಾಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಉಡುಪಿಯಲ್ಲಿ ನಡೆದ ಪತ್ರಿಕಾಗೇೂಷ್ಠಿಯಲ್ಲಿ ನೀಡಿದರು.
ಉಪಾಧ್ಯಕ್ಷ ಸುರೇಶ್ ಶೆಟ್ಟಿ, ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ. ಸಂಘದ ಉಪಾಧ್ಯಕ್ಷ ಮೇೂಹನ್ ಶೆಟ್ಟಿ, ಮೂಡನಿಡಂಬೂರು ತೇೂನ್ಸೆ ವಲಯದ ಬಂಟರ ಸಂಘದ ಅಧ್ಯಕ್ಷ ಟಿ. ಮನೇೂಹರ್ ಶೆಟ್ಟಿ, ಕೊಡವೂರು ಬಂಟರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಮಿತ್ ಕುಮಾರ್ ಶೆಟ್ಟಿ, ಕೃಷ್ಣ ಕುಮಾರ್ ಶೆಟ್ಟಿ, ಸಂತೋಷ ಶೆಟ್ಟಿ ಪತ್ರಿಕಾಗೇೂಷ್ಠಿಯಲ್ಲಿ ಉಪಸ್ಥಿತರಿದ್ದರು.