ಉಡುಪಿ, ಮಾ. 2: ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಕಾಯಚಿಕಿತ್ಸಾ ವಿಭಾಗದಿಂದ ಏರ್ಪಡಿಸಿದ ನೋವು ನಿವಾರಕ ಆರೋಗ್ಯ ಚಿಕಿತ್ಸಾ ಶಿಬಿರ- ‘ವೇದನಾಹರ ಕಲ್ಪ’ ಆರೋಗ್ಯ ಶಿಬಿರವನ್ನು ಮುನಿಯಾಲ್ ಸಂಸ್ಥೆಯ ಟ್ರಸ್ಟಿ ಡಾ. ಶ್ರದ್ಧಾ ಶೆಟ್ಟಿ, ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ., ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪತಿ ಆಚಾರ್ಯ, ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ ಉದ್ಘಾಟಿಸಿದರು. ಸಂಸ್ಥೆಯ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಬಿರವು ಮಾರ್ಚ್ 7 ರವರೆಗೆ ಬೆಳಿಗ್ಗೆ 9 ರಿಂದ ಅಪರಾಹ್ನ 4 ರವರೆಗೆ ನಡೆಯಲಿದ್ದು ಮಾಂಸಖಂಡದ ನೋವು ಮತ್ತು ಸೆಳೆತ, ಸ್ನಾಯುಗಳ ಸೆಳೆತ, ಎಲ್ಲಾ ತರಹದ ಗಂಟುನೋವು, ಸೊಂಟ, ಬೆನ್ನು, ಕುತ್ತಿಗೆ, ಭುಜ, ಮಂಡಿನೋವು ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯು ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಶಿಬಿರದ ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸಿ.