ಉಡುಪಿ, ಫೆ. 20: ಉಡುಪಿ ಹೋಂ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಬನ್ನಿ ಮೇಸ್ತ್ರಿಗಳೇ ಬಡವರ ಪಾಲಿಗೆ ದೇವರಾಗೋಣ ಪರಿಕಲ್ಪನೆಯಲ್ಲಿ ಕುಷ್ಠ ನಾಯ್ಕ, ಬಂಡಾರ್ತಿ ಬಿಲ್ಲಾಡಿ ಇವರ ಮನೆ ಪುನರ್ನವೀಕರಣ ನಡೆಯಿತು. ಕುಷ್ಟನಾಯ್ಕ್ ಸರ್ಕಾರದ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿದರೂ ಹಣಕಾಸಿನ ತೊಂದರೆಯಿಂದ ಕಳೆದ ಹತ್ತು ವರ್ಷಗಳಿಂದ ಮನೆಯನ್ನು ಪೂರ್ತಿಯಾಗಿ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ.
ಈ ನಿಟ್ಟಿನಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಮತ್ತು ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಸುಮಾರು 50 ಜನ ಮೇಸ್ತ್ರಿ ಮತ್ತು ಹೆಲ್ಪರ್ ಗಳ ಸಹಾಯದಿಂದ ಈ ಮನೆಯನ್ನು ನವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ನೆರವು ಫೌಂಡೇಶನ್ ಬಿಲ್ಲಾಡಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಾಕೃತಿಕ ವಿಪತ್ತು ಘಟಕ ಪೆರ್ಡೂರು ಸದಸ್ಯರು ಭಾಗವಹಿಸಿದರು. ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ನೈನಾ ನಾಯಕ್, ಉದಯ್ ನಾಯ್ಕ್, ಸುಂದರ ಪೂಜಾರಿ, ಶಂಕರ ನಾಯಕ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.