ಉಡುಪಿ, ಫೆ.20: ಕವಿ ಮುದ್ದಣ ಮಾರ್ಗ ಇಲ್ಲಿಯ ನವೀಕೃತ ಭಗವಾನ್ ಶ್ರೀ ನಿತ್ಯಾನಂದ ಮಂದಿರ-ಮಠದಲ್ಲಿ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮವು ಶನಿವಾರ, ಭಾನುವಾರ ಎರಡು ದಿನ ಕಾಲ ನಡೆಯಿತು. ಗುರುದೇವರಿಗೆ ನಿತ್ಯದ ಪೂಜಾ ವಿಧಿ ವಿಧಾನಗಳೊಂದಿಗೆ ವಿಶೇಷ ಪಂಚಾಮೃತ ಅಭಿಷೇಕ, ತ್ರಿಕಾಲ ವಿಶೇಷ ಮಹಾಪೂಜೆ, ಗಣಯಾಗ, ನವಗ್ರಹ ಪೂಜೆ, ಭಜನೆ, ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಮಹಾರಾಷ್ಟ್ರದ ಗಣೇಶಪುರಿ ನಿತ್ಯಾನಂದ ಸಮಾಧಿ ಮಂದಿರದ ಪ್ರಧಾನ ಅರ್ಚಕ ರಮೇಶ್ ಸುಲಾಕೆ ಅವರ ಆಚಾರ್ಯತ್ವದಲ್ಲಿ ನಡೆದವು.
ಕಾಂಞಂಗಾಡ್ ಶ್ರೀ ನಿತ್ಯಾನಂದ ಆಶ್ರಮದ ಕಾರ್ಯಾಧ್ಯಕ್ಷರಾದ ತೋಟದಮನೆ ಕೆ. ದಿವಾಕರ್ ಶೆಟ್ಟಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಭಾನುವಾರ ಮಧ್ಯಾಹ್ನ ಮಂದಿರ ಮಠದಲ್ಲಿ ಬಾಲಭೋಜನ, ಸಾಧುಭೋಜನ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ನಿತ್ಯಾನಂದ ಮಂದಿರ ಮಠದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಬನ್ನಂಜೆ, ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿತ್ಪಾಡಿ, ಕೋಶಾಧಿಕಾರಿ ಶಶಿ ಕುಮಾರ್ ಶೆಟ್ಟಿ ಗೋವಾ, ಉಪಾಧ್ಯಕ್ಷ ಪಾಂಗಳ ಯೋಗೀಶ್ ಶಾನುಭೋಗ್, ಶೋಭಾ ಕುಮಾರ್ ಶೆಟ್ಟಿ, ನರೇಶ್ ಕುಮಾರ್ ಪೆರಂಪಳ್ಳಿ, ವಿಶ್ವನಾಥ್ ಸನಿಲ್, ಜಯಕರ್ ಶೆಟ್ಟಿ ಅಂಬಲಪಾಡಿ, ಗುಂಡಿಬೈಲ್ ಕರುಣಾಕರ್ ಶೆಟ್ಟಿ, ಅರ್ಚಕರಾದ ಮಹೇಶ್ ರತ್ನಪಾರ್ಕಿ ಗಣೇಶಪುರಿ, ಗಣೇಶ್ ಕುಲಕರ್ಣಿ, ಪ್ರಕಾಶ್ ಸರಳಾಯ, ವ್ಯವಸ್ಥಾಪಕ ರವೀಂದ್ರ ಪುತ್ರನ್ ಬೀಜಾಡಿ, ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ವಿಜಯ ಸ್ವಾಮಿ, ತಾರಾನಾಥ್ ಮೇಸ್ತ ಶಿರೂರು ಹಾಗೂ ನಿತ್ಯಾನಂದ ಮಂದಿರದ ಭಜಕರು, ಸದ್ಭಕ್ತವೃಂದ, ಸೇವಾಕರ್ತರು ಉಪಸ್ಥಿತರಿದ್ದರು.