Friday, September 20, 2024
Friday, September 20, 2024

ಶಿವಾಜಿ ಅವರ ಆಡಳಿತ ಕೌಶಲ್ಯ ಮಾದರಿಯಾಗಲಿ: ಅಪರ ಜಿಲ್ಲಾಧಿಕಾರಿ ವೀಣಾ

ಶಿವಾಜಿ ಅವರ ಆಡಳಿತ ಕೌಶಲ್ಯ ಮಾದರಿಯಾಗಲಿ: ಅಪರ ಜಿಲ್ಲಾಧಿಕಾರಿ ವೀಣಾ

Date:

ಉಡುಪಿ, ಫೆ. 19: ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ ಕೌಶಲ್ಯಗಳನ್ನು ಇಂದಿನ ಆಡಳಿತ ವ್ಯವಸ್ಥೆಯಲ್ಲಿಯೂ ಬಳಸಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಲು ಸಾದ್ಯವಾಗಲಿದ್ದು, ಅವರ ಆಡಳಿತ ಕೌಶಲ್ಯ ಸದಾ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು. ಅವರು ಭಾನುವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಇತಿಹಾಸದಲ್ಲಿ ಭಾರತದ ಸಂಸ್ಕೃತಿ ರಕ್ಷಣೆಯ ಮಹಾನ್ ಕಾರ್ಯಗಳಲ್ಲಿ ಹೆಸರು ಮಾಡಿದಂತಹ ಧೀಮಂತ ವ್ಯಕಿಗಳಲ್ಲಿ ಶಿವಾಜಿ ಮುಖ್ಯವಾದವರು. ತಮ್ಮ ಆಡಳಿತದಲ್ಲಿ ಸಮಾಜದಲ್ಲಿದ್ದ ದುರ್ಬಲರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದ್ದರು ಎಂದರು. ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ ಮಾತನಾಡಿ, ಯುವ ಪೀಳಿಗೆಯಲ್ಲಿ ಶಿವಾಜಿ ಮಹಾರಾಜರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನ ತಿಳಿಸಿ ಅವರಲ್ಲಿ ರಾಷ್ಟ್ರಾಭಿಮಾನ ಮೂಡಿಸಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಶಿಕ್ಷಕ ಸಂಜೀವ ನಾಯಕ್ ಮಾತನಾಡಿ, ಭರತಖಂಡ ಅನಾಧಿ ಕಾಲದಿಂದಲೂ ಬಲಿಷ್ಠ ಮತ್ತು ಚಾರಿತ್ರ‍್ಯವನ್ನು ನೀಡುತ್ತಾ ಬಂದಿದ್ದು, ಸ್ವರಾಜ್ಯದ ರಕ್ಷಣೆಗಾಗಿ ಎಷ್ಟೋ ಮಹಾನ್ ನಾಯಕರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಅಂತಹ ಮಹಾನ್ ಸಾಧಕರಲ್ಲಿ ಶ್ರೇಷ್ಟವಾದವರು ಛತ್ರಪತಿ ಶಿವಾಜಿ. ಭಾರತಕ್ಕೆ ಸಂಸ್ಕೃತಿಗೆ ಧಕ್ಕೆಯಾಗುವಂತಹ ಸಂದರ್ಭದಲ್ಲಿ ಅದನ್ನ ತಡೆಯುವಲ್ಲಿ ಮತ್ತು ಧರ್ಮವನ್ನು ಸಂರಕ್ಷಣೆ ಮಾಡುವಲ್ಲಿ ಯಶಸ್ವಿಯಾದ ನಾಯಕನಾಗಿದ್ದಾರೆ ಎಂದರು.

ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಗೌರವ ಸಲಹೆಗಾರ ಕೇಶವ ರಾವ್ ಕವಡೆ, ಗೌರವಾಧ್ಯಕ್ಷ ರಮಾನಾಥ್ ಜಿ., ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಸಂಘಟನಾ ಕಾರ್ಯದರ್ಶಿ ಮಧ್ವೇಶ್ ರಾವ್ ಬಹುಮಾನ್, ಮರಾಠ ಸಮುದಾಯದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಛತ್ರಪತಿ ಶಿವಾಜಿ ವಿವಿಧ್ಧೋದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಸಿ ನಾಯಕ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!