ಉಡುಪಿ, ಫೆ. 14: ಕೊಡವೂರು ವಾರ್ಡಿನಲ್ಲಿ ನಡೆದ ಎರಡು ಕಾಲು ವರ್ಷದ 39,77,155.00 ರೂ ಸೇವಾ ಕಾರ್ಯದ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯ ವಿಜಯ ಕೊಡವೂರು, ನಮ್ಮ ವಾರ್ಡಿನ ಶಕ್ತಿ ಸವಾಲು ಮತ್ತು ಅಪೇಕ್ಷೆಗಳನ್ನು ತಿಳಿಯಲು ಸರ್ವೇಯನ್ನು ನಡೆಸಿದ ನಂತರ ಆ ಸರ್ವೆಗೆ ಉತ್ತರ ನೀಡಲು ಸಲುವಾಗಿ ಎಲ್ಲಾ 17 ಸಮಿತಿಗಳನ್ನು ರಚನೆ ಮಾಡಿ ದಿವ್ಯಾಂಗರಿಗೆ, ಕೃಷಿಕರಿಗಾಗಿ, ಉದ್ಯೋಗಕ್ಕಾಗಿ, ವಿದ್ಯಾರ್ಥಿಗಳಿಗಾಗಿ, ಕೆರೆ, ಗೋವು, ಧಾರ್ಮಿಕ, ಮಹಿಳೆಯರಿಗಾಗಿ ಮತ್ತು ಧಾರ್ಮಿಕ ಸಮಿತಿಗಳನ್ನು ಮಾಡಿ ಇಂತಹ 14 ಸಮಿತಿಗಳನ್ನು ರಚನೆ ಮಾಡಿ ನ್ಯಾಯ ಒದಗಿಸುವ ಕಾರ್ಯ ನಡೆದಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ ಮಾರ್ಗದರ್ಶನದಲ್ಲಿ ಈ ರೀತಿ ಮಾಡಲಾಗಿದೆ ಎಂದು ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್ ತಿಳಿಸಿದರು. ಸಮಿತಿಯ ಪ್ರಮುಖರು ತಮ್ಮ ತಮ್ಮ ಸಮಿತಿಯಿಂದ ನಡೆದ ಸೇವಾ ಕಾರ್ಯವನ್ನು ವಿವರಿಸಿದರು.
ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ವಿಜಯ ಕೊಡವೂರು, ನಾನು ಆಕಾಂಕ್ಷಿಯಲ್ಲ. ಪಕ್ಷದ ಹಿರಿಯರು ಅಪೇಕ್ಷೆ ಪಟ್ಟರೆ ಜನಸೇವೆಗೆ ಸಿದ್ದನಿದ್ದೇನೆ. ಕಾರ್ಯಕರ್ತನ ಸಾಮರ್ಥ್ಯ, ಶಕ್ತಿ ಮತ್ತು ಪಕ್ಷದ ಅವಶ್ಯಕತೆಗಳನ್ನು ತಿಳಿದು ಅವರೇ ಜವಾಬ್ದಾರಿ ನೀಡಿದರೆ ಸ್ವೀಕರಿಸಲು ಸಿದ್ಧನಿದ್ದೇನೆ. ಸಾಮಾನ್ಯ ವ್ಯಕ್ತಿಗೆ ಜವಾಬ್ದಾರಿಯನ್ನು ನೀಡಿ ಎತ್ತರಕ್ಕೆ ಬೆಳೆಸುವ ಶಕ್ತಿ ನಮ್ಮ ಭಾರತೀಯ ಜನತಾ ಪಕ್ಷಕ್ಕಿದೆ. ಆದ್ದರಿಂದ ನಾನು ಆಕಾಂಕ್ಷಿಯಲ್ಲ, ಬದಲಾಗಿ ಕಾರ್ಯಕರ್ತರ ಅಪೇಕ್ಷೆಯಂತೆ ಪಕ್ಷದ ಹಿರಿಯರು ಯೋಚನೆ ಮಾಡಿ ಅವಕಾಶ ನೀಡಿದರೆ ಖಂಡಿತವಾಗಿಯೂ ಜನಸೇವೆಗೆ ಸಿದ್ಧವಾಗಿದ್ದೇನೆ.
ಅವಕಾಶ ನೀಡಿಲ್ಲ ಅಂದರೆ ಯಾವುದೇ ಬೇಸರವನ್ನು ಮಾಡದೆ ಪಕ್ಷ ಹೇಳಿದ ಕಾರ್ಯವನ್ನು ಮಾಡುತ್ತೇನೆ. ಪಕ್ಷ ಏನು ಜವಾಬ್ದಾರಿ ಕೊಟ್ಟಿದೆ ಅದನ್ನು ಮಾಡುವೆ. ವ್ಯಕ್ತಿ ಯಾರು ಅನ್ನೋದು ಮುಖ್ಯವಲ್ಲ ಎಂದು ವಿಜಯ ಕೊಡವೂರು ತಿಳಿಸಿದರು.