ಉಡುಪಿ, ಜ.29: ಆಕಾಶದಲ್ಲಿ ಪ್ರಜ್ವಲಿಸಲಿರುವ ಭೂಮಿಗೆ ಹತ್ತಿರವಾಗಿ ಸಮೀಪಿಸುತ್ತಿರುವ, ಸುಮಾರು ಐವತ್ತು ಸಾವಿರ ವರುಷಗಳ ತದನಂತರ ಕಾಣುವ ಈ ಧೂಮಕೇತುವನ್ನು ಉಡುಪಿ ಜಿಲ್ಲೆಯ ಪರ್ಕಳದ ಬಸ್ ಸ್ಟ್ಯಾಂಡ್ ಬಳಿ ಇರುವ ಸಂಧ್ಯಾ ಹೋಟೆಲ್ ನ (ಶಿವಂ) ಕಟ್ಟಡದ ಟಾಪ್ ಫ್ಲೋರ್ ನಲ್ಲಿ ಫೆಬ್ರವರಿ 1ರ ಮುಂಜಾನೆ ನಾಲ್ಕು ಗಂಟೆಗೆ ಆರ್ ಮನೋಹರ್ ಅವರ ದೂರದರ್ಶಕ ಹಾಗೂ ಸುಹಾಸ್ ಶೆಣೈ ಸರಳೇಬೆಟ್ಟು ರವರ ಕ್ಯಾಮಾರದ ಮೂಲಕ ಖಗೋಳ ಆಸಕ್ತರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.
ಪ್ರಕ್ರಿಯೆ ಮುಂಜಾನೆಯೇ ನಡೆಯುವುದರಿಂದ ಧೂಮಕೇತುವನ್ನು ವೀಕ್ಷಿಸಲು ಬರುವವರಿಗೆ ಜನವರಿ 31 ರಾತ್ರಿ ತಂಗಲು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9845690278 ಸಂಪರ್ಕಿಸಿ.