ಉಡುಪಿ, ಜ.26: ನಮ್ಮ ದೇಶದಲ್ಲಿರುವ ವೈವಿಧ್ಯತೆ ಬೇರೆಲ್ಲಿಯೂ ಕಾಣಸಿಗದು. ಇಂಥಹ ವೈವಿಧ್ಯತೆ ಗಮನಿಸಿ ಎಲ್ಲಾ ವರ್ಗದವರಿಗೂ ಪ್ರಾತಿನಿಧ್ಯ ಕಲ್ಪಿಸಿ ನಿರ್ಮಿಸಲಾದ ಸಂವಿಧಾನಕ್ಕೆ ಕನ್ನಡಿಗರ ಕೊಡುಗೆ ಮಹತ್ವದಾಗಿತ್ತು. ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಸದೃಢ ಭಾರತ ನಿರ್ಮಾಣ ಕಾಂಗ್ರೆಸ್ ಪಕ್ಷದ ಉದ್ದೇಶ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು. ಅವರು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಚೌಕದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ಸಮಾರಂಭದಲ್ಲಿ ಪಕ್ಷದ ಮುಖಂಡರಾದ ದಿನೇಶ್ ಪುತ್ರನ್, ಹರೀಶ್ ಕಿಣಿˌ ಭಾಸ್ಕರ ರಾವ್ ಕಿದಿಯೂರುˌ ಅಣ್ಣಯ್ಯ ಸೇರಿಗಾರ, ಶಬ್ಬಿರ್ ಆಹ್ಮದ್ˌ ಹರೀಶ್ ಶೆಟ್ಟಿ ಪಾಂಗಾಳˌ ಉದ್ಯಾವರ ನಾಗೇಶ್ ಕುಮಾರ್, ಪ್ರಶಾಂತ ಜತ್ತನ್ನ, ಯತೀಶ್ ಕರ್ಕೇರ, ಸುರೇಶ್ ಶೆಟ್ಟಿ ಬನ್ನಂಜೆˌ ಸತೀಶ್ ಕೊಡವೂರ್ˌ ಪ್ರಕಾಶ್ ಅಂದ್ರಾದೆˌ ಶಾಂತರಾಮ್ ಸಾಲ್ವಾಂಕರ್ˌ ಲೂಯಿಸ್ ಲೋಬೋˌ ಸೇವಾದಳದ ಅಧ್ಯಕ್ಷ ಕಿಶೋರ್ ಕುಮಾರ್ ಎರ್ಮಾಳ್ˌ ಶರತ್ ನಾಯ್ಕˌ ಉಮೇಶ್ ಪೂಜಾರಿˌ ಕೇಶವ್ ಹೆಜಮಾಡಿˌ ಅರುಣ್ˌ ಪ್ರದೀಪ್, ಪ್ರವೀಣ್ ಉಪಸ್ಥಿತರಿದ್ದರು.