Wednesday, January 22, 2025
Wednesday, January 22, 2025

ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಹಾಲು ಶೇಖರಣೆ ಮತ್ತು ಹಾಲು ಮಾರಾಟದ ಪ್ರಸ್ತುತ ಸ್ಥಿತಿಗತಿ

ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಹಾಲು ಶೇಖರಣೆ ಮತ್ತು ಹಾಲು ಮಾರಾಟದ ಪ್ರಸ್ತುತ ಸ್ಥಿತಿಗತಿ

Date:

ಉಡುಪಿ: ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 396 ಸಂಘಗಳ 35707 ಸದಸ್ಯರಿಂದ 2,86,576 ಲೀ. ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 29396 ಸದಸ್ಯರಿಂದ 1,89,806 ಲೀ. ಹಾಲು ಸಂಗ್ರಹಣೆಯಾಗುತ್ತಿದೆ.

ಡಿಸೆಂಬರ್ 2021ರ ಮಾಹೆಯಲ್ಲಿ ದ.ಕ ಜಿಲ್ಲೆಯಲ್ಲಿ 392 ಸಂಘಗಳ 36943 ಸದಸ್ಯರಿಂದ 3,09,872 ಲೀ. ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 30553 ಸದಸ್ಯರಿಂದ ಒಟ್ಟು 2,09,532 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಇದನ್ನು ಗಮನಿಸಿದಾಗ ದ.ಕ ಜಿಲ್ಲೆಯಲ್ಲಿ 1236 ಸಕ್ರಿಯ ಸದಸ್ಯರು ಹಾಗೂ ಉಡುಪಿ ಜಿಲ್ಲೆಯಲ್ಲಿ 1157 ಸಕ್ರಿಯ ಸದಸ್ಯರು ಸೇರಿ ಒಟ್ಟು 2333 ಸಕ್ರಿಯ ಸದಸ್ಯರು ಕಡಿಮೆಯಾಗಿರುತ್ತಾರೆ. ಈ ಅವಧಿಯಲ್ಲಿ ಒಟ್ಟಾರೆ ಒಕ್ಕೂಟದ ವ್ಯಾಪ್ತಿಯಲ್ಲಿ 2414 ಸದಸ್ಯರು ಹೆಚ್ಚಳವಾಗಿರುತ್ತಾರೆ.

ಮೇಲ್ಕಂಡ ಅಂಕಿ ಅಂಶಗಳ ಪ್ರಕಾರ ಸಕ್ರಿಯ ಸದಸ್ಯತ್ವವು ಕಡಿಮೆಯಾಗಲು ರಾಸುಗಳು ಗರ್ಭಾವಸ್ಥೆಯಲ್ಲಿರುವುದು, ಸ್ವಾಭಾವಿಕವಾಗಿ ಹೈನುಗಾರರು ವಯಸ್ಸಿನ ಕಾರಣದಿಂದ ಹೈನುಗಾರಿಕೆಯಿಂದ ನಿವೃತ್ತಿ, ನಗರೀಕರಣ, ಪಟ್ಟಣಕ್ಕೆ ವಲಸೆ ತೆರಳಿರುವುದು, ಕೋವಿಡ್ ಕಾಯಿಲೆ ಕಡಿಮೆಯಾಗಿ ಪರ್ಯಾಯ ಉದ್ಯೋಗಾವಕಾಶಗಳು ಪ್ರಾರಂಭಗೊAಡಿರುವುದು ಪ್ರಮುಖ ಕಾರಣಗಳಾಗಿರುತ್ತವೆ. ಒಕ್ಕೂಟದ ವ್ಯಾಪ್ತಿಯಲ್ಲಿ 2021-22 ನೇ ಸಾಲಿನಲ್ಲಿ ದಿನವಹಿ ಸರಾಸರಿ 3,52,085 ಲೀ. ಹಾಲು ಮತ್ತು 60019 ಕೆ.ಜಿ ಮೊಸರು ಮಾರಾಟವಾಗುತ್ತಿತ್ತು. ಪ್ರಸ್ತುತ ಸಾಲಿನಲ್ಲಿ 3,75,992 ಲೀ. ಹಾಲು ಮತ್ತು 70,193 ಕೆ.ಜಿ ಮೊಸರು ಮಾರಾಟವಾಗುತ್ತಿದೆ.

ಅಂದರೆ, ದಿನವಹಿ 24,000 ಲೀ. ಹಾಲು ಹಾಗೂ 10,000 ಲೀ. ಮೊಸರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ, ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಕಳೆದ ಸಾಲಿಗೆ ಹೋಲಿಸಿದಾಗ ಸರಾಸರಿ ಶೇ.25 ರಷ್ಟು ಹೆಚ್ಚು ಮಾರಾಟವಾಗುತ್ತಿದೆ. ಹೆಚ್ಚುವರಿ ಮಾರಾಟದಿಂದಾಗಿ ಒಕ್ಕೂಟಕ್ಕೆ ಇನ್ನೂ ದಿನವಹಿ 40,000 ಲೀ. ಹಾಲಿನ ಅವಶ್ಯಕತೆ ಇದೆ. ಒಕ್ಕೂಟದ ವ್ಯಾಪ್ತಿಯಲ್ಲಿ ರಾಸುಗಳಿಗೆ ಅಗತ್ಯವಾಗಿ ಬೇಕಾಗಿರುವ ನಂದಿನಿ ಪಶು ಆಹಾರವು ಕಳೆದ ಸಾಲಿನ ಡಿಸೆಂಬರ್ 2021 ರ ಮಾಹೆಯಲ್ಲಿ ದ.ಕ. ಜಿಲ್ಲೆಯಲ್ಲಿ 2761 ಮೆ.ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 3090 ಮೆ.ಟನ್ ಸೇರಿ ಒಟ್ಟು 5,851 ಮೆ.ಟನ್ ಮಾರಾಟವಾಗಿರುತ್ತದೆ. ಪ್ರಸ್ತುತ ಡಿಸೆಂಬರ್ 2022 ರ ಮಾಹೆಯಲ್ಲಿ ದ.ಕ. ಜಿಲ್ಲೆಯಲ್ಲಿ 3384 ಮೆ.ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 3748 ಮೆ.ಟನ್ ಸೇರಿ ಒಟ್ಟು 7,133 ಮೆ.ಟನ್ ಪಶು ಆಹಾರ ಮಾರಾಟವಾಗಿ ಡಿಸೆಂಬರ್ 22 ರ ಮಾಹೆಯಲ್ಲಿ ಡಿಸೆಂಬರ್ 21 ರ ಮಾಹೆಗಿಂತ 1282 ಮೆ.ಟನ್‌ನಷ್ಟು ಉತ್ತಮ ಗುಣಮಟ್ಟದ ಸಮತೋಲನ ಪಶು ಆಹಾರ ಹೆಚ್ಚುವರಿ ಮಾರಾಟವಾಗಿರುತ್ತದೆ. ಪಶು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಪ್ರತಿ ಮಾಹೆಯಾನ ಪಶು ಆಹಾರದ ಮಾದರಿಯನ್ನು ಪರೀಕ್ಷಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ.

ಅಕಾಲಿಕ ಮಳೆಯಿಂದ ಪಶು ಆಹಾರದ ಕಚ್ಚಾ ಪದಾರ್ಥಗಳಾದ ಮೆಕ್ಕೆಜೋಳ, ಅಕ್ಕಿ ತೌಡು, ಕಾಕಂಬಿ ಬೆಲೆಯು ಕನಿಷ್ಟ ಶೇ.20 ರಷ್ಟು ಗಣನೀಯವಾಗಿ ಹೆಚ್ಚಳವಾಗಿರುವ ಕಾರಣದಿಂದ ಪಶು ಆಹಾರದ ಮಾರಾಟ ದರದ ಮೇಲಿನ ಅನುದಾನವನ್ನು ಕಹಾಮವು ಹಿಂಪಡೆದಿರುವ ಕಾರಣ ಪ್ರಸ್ತುತ ಪಶು ಆಹಾರ ದರವು ಹೆಚ್ಚಳವಾಗಿರುತ್ತದೆ. ಒಕ್ಕೂಟದಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ನವಂಬರ್ ತಿಂಗಳಿನಿಂದ ಸದಸ್ಯರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ರೂ.2.05 ಗಳನ್ನು ವಿಶೇಷ ಪ್ರೋತ್ಸಾಹಧನವಾಗಿ ಸದಸ್ಯರಿಗೆ ನೀಡುವುದರಿಂದ ಪ್ರತಿ ತಿಂಗಳು ಒಕ್ಕೂಟದಿಂದ ಸರಾಸರಿ 3 ಕೋಟಿ ರೂ. ಹಣ ಹೆಚ್ಚುವರಿಯಾಗಿ ಹಾಲಿನ ಬಟವಾಡೆಗಾಗಿ ವಿನಿಯೋಗಿಸಲಾಗುತ್ತಿದ್ದು, ಇದರಿಂದ ಒಕ್ಕೂಟವು ನಷ್ಟವಾಗಲು ಕಾರಣವಾಗಿರುತ್ತದೆ.

ಈ ರೀತಿಯಲ್ಲಿ ವಿಶೇಷ ಪ್ರೋತ್ಸಾಹಧನವನ್ನು ಮುಂದುವರೆಸಿದಲ್ಲಿ ಮುಂದಿನ ಮೂರು ತಿಂಗಳಲ್ಲಿ 9 ರಿಂದ 10 ಕೋಟಿಯಷ್ಟು ಒಕ್ಕೂಟವು ನಷ್ಟ ಹೊಂದಬೇಕಾಗುತ್ತದೆ. ಅಲ್ಲದೆ, ಒಕ್ಕೂಟದಲ್ಲಿ 63 ರಿಂದ 64 ಕೋಟಿಯಷ್ಟು ಹಣ ಅಭಿವೃದ್ಧಿ ನಿಧಿಯಾಗಿ ಸಂಗ್ರಹಣೆಯಾಗಿದ್ದು, ಇದರಿಂದ ಬರುವ ಅಂದಾಜು 3 ಕೋಟಿ ರೂ. ಬಡ್ಡಿಯನ್ನು ಹಾಲಿನ ಖರೀದಿಗೆ ವಿನಿಯೋಗಿಸಿದಾಗ ಒಂದು ತಿಂಗಳು ಹಾಲಿನ ಪ್ರೋತ್ಸಾಹಧನವನ್ನು ಮಾತ್ರ ನೀಡಲು ಸಾಧ್ಯವಾಗುವುದು. ಆದ್ದರಿಂದ ಹಾಲಿನ ಉತ್ಪಾದಕರನ್ನು ಉತ್ತೇಜಿಸುವುದು ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು 2023 ರ ಜನವರಿ 11 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ರೂ. 2.05 ವಿಶೇಷ ಪ್ರೋತ್ಸಾಹಧನದಲ್ಲಿ ರೂ.1.05 ನ್ನು ಮಾತ್ರ ಹಿಂದಕ್ಕೆ ಪಡೆದುಕೊಂಡು ಉಳಿಕೆ ರೂ.1 ವಿಶೇಷ ಪ್ರೋತ್ಸಾಹಧನವನ್ನು ಮುಂದುವರೆಸಲಾಗಿದೆ.

ಒಕ್ಕೂಟದ ವ್ಯಾಪ್ತಿಯಲ್ಲಿ ಉಭಯ ಜಿಲ್ಲೆಯಲ್ಲಿ ಪ್ರಸ್ತುತ 16 ಪಶು ವೈದ್ಯಕೀಯ ಶಿಬಿರ ಕಚೇರಿಗಳು ಕಾರ್ಯಾಚರಣೆಯಲ್ಲಿದ್ದು, ಒಟ್ಟು 17 ಮಂದಿ ಪಶು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, 6 ತಜ್ಞ ಪಶು ವೈದ್ಯರು ವಿಶೇಷ ಸಲಹಾ ಸೂಚನೆಗಳನ್ನು ನೀಡುತ್ತಿದ್ದಾರೆ. ಇತ್ತೀಚಿನ ವರದಿಯಂತೆ ರಾಜ್ಯದಲ್ಲಿ 28,386 ರಾಸುಗಳು ಚರ್ಮಗಂಟು ರೋಗದಿಂದ ಮರಣಹೊಂದಿದ್ದು, ಉಡುಪಿ ಜಿಲ್ಲೆಯಲ್ಲಿ 54 ರಾಸುಗಳು ಹಾಗೂ ದ.ಕ ಜಿಲ್ಲೆಯಲ್ಲಿ 229 ರಾಸುಗಳು ಮರಣ ಹೊಂದಿರುವುದಾಗಿ ವರದಿಯಾಗಿರುತ್ತದೆ.

ಚರ್ಮಗಂಟು ರೋಗವು ವೈರಸ್‌ನಿಂದ ಹರಡುವ ಕಾಯಿಲೆಯಾಗಿದ್ದು, ವೈರಸ್ ಕಾಯಿಲೆಗೆ ನಿಖರವಾದ ಔಷಧ ಲಭ್ಯವಿಲ್ಲದಿದ್ದರೂ ಸಹ ಒಕ್ಕೂಟದ ಶಿಬಿರ ಕಚೇರಿಯ ಪಶು ವೈದ್ಯರು, ಪಶು ವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಸಂಘಗಳ ಕೃ.ಗ ಕಾರ್ಯಕರ್ತರು/ಲಸಿಕೆದಾರರ ಸಹಕಾರದಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ರಾಸುಗಳಲ್ಲಿ ಈ ಕಾಯಿಲೆಯು ಉಲ್ಬಣವಾಗದಂತೆ ಹೋಮಿಯೋಪತಿ ಔಷಧಿ, ಒಕ್ಕೂಟದ ಅನುದಾನದೊಂದಿಗೆ ಪೂರಕ ಔಷಧಿ, ಅಗತ್ಯ ಪಶು ಔಷಧಿಗಳನ್ನು ಸರಬರಾಜು ಮಾಡಿ ಕಾಯಿಲೆಯನ್ನು ಪೂರ್ಣ ರೂಪದಲ್ಲಿ ಹತೋಟಿಯಲ್ಲಿಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳ ವೇತನವನ್ನು ಆಯಾಯ ಸಂಘಗಳ ಲಾಭಾಂಶವನ್ನು ಅವಲಂಭಿಸಿ ಸಹಕಾರ ಇಲಾಖೆಯ ಮಾರ್ಗಸೂಚಿಯಂತೆ ನಿಗದಿಯಾಗುತ್ತಿದ್ದು, ಒಕ್ಕೂಟದ ವ್ಯಾಪ್ತಿಯ ಎಲ್ಲಾ ಸಂಘಗಳು ಲಾಭದಲ್ಲಿದ್ದು, ಹೆಚ್ಚಿನ ಸಂಘಗಳಲ್ಲಿ ಈಗಾಗಲೇ ಇಲಾಖಾ ಮಾರ್ಗಸೂಚಿಯಂತೆ ವೇತನ ನಿಗದಿಪಡಿಸಲಾಗಿದೆ.

ರಾಜ್ಯದಾದ್ಯಂತ ಹಾಲಿನ ಶೇಖರಣೆ ಕಡಿಮೆಯಾಗಿದ್ದು, ಒಕ್ಕೂಟವು ಹಾಲನ್ನು ಇತರ ಒಕ್ಕೂಟಗಳಿಂದ ಪ್ರಸ್ತುತ ಖರೀದಿಸುತ್ತಿಲ್ಲ.ಒಕ್ಕೂಟವು ಹೈನುಗಾರರ ಹಿತಾಸಕ್ತಿಯನ್ನು ಕಾಪಾಡಲು ಈಗಾಗಲೇ ವಿವಿಧ ಯೋಜನೆಗಳಾದ ಪ್ರೋತ್ಸಾಹಧನ, ಕರು ಸಾಕಾಣಿಕೆ ಯೋಜನೆ, ಹಸಿರು ಮೇವು ಯೋಜನೆ, ಹಾಲು ಹೆಚ್ಚಳ ಕಾರ್ಯಕ್ರಮವನ್ನು ಒಕ್ಕೂಟದ ಅನುದಾನದ ಮೂಲಕ ನಿರಂತರ ನೀಡಲಾಗುತ್ತಿದ್ದು, ಒಕ್ಕೂಟದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವುದರಿಂದಾಗಿ ಹಾಲಿನ ಗುಣಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿರಲು ಸಾಧ್ಯವಾಗಿದೆ. ಇನ್ನು ಮುಂದೆಯೂ ಸಹ ಉನ್ನತ ಸ್ಥಾನದಲ್ಲಿ ಇರುವಲ್ಲಿ ಹೈನುಗಾರರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ಕೈಜೋಡಿಸುವಂತೆ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜ್ಞಾನಸುಧಾ: ಕಂಪೆನಿ ಸೆಕ್ರೇಟರಿ ಸಾಧಕರಿಗೆ ಸನ್ಮಾನ

ಕಾರ್ಕಳ, ಜ.22: ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು...

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...
error: Content is protected !!