Saturday, September 21, 2024
Saturday, September 21, 2024

ಜ. 5-8: ಉಪ್ಪೂರು ಶ್ರೀ ವಿನಾಯಕ ಯಕ್ಷಗಾನ ಸಂಘದ 40ರ ಯಕ್ಷಯಾನ ಸಂಭ್ರಮ

ಜ. 5-8: ಉಪ್ಪೂರು ಶ್ರೀ ವಿನಾಯಕ ಯಕ್ಷಗಾನ ಸಂಘದ 40ರ ಯಕ್ಷಯಾನ ಸಂಭ್ರಮ

Date:

ಉಡುಪಿ: 1983 ರಲ್ಲಿ ಸ್ಥಾಪನೆಯಾದ ಶ್ರೀ ವಿನಾಯಕ ಯಕ್ಷಗಾನ ಸಂಘ(ರಿ) ತೆಂಕಬೆಟ್ಟು, ಉಪ್ಪೂರು ಇದರ 40ರ ಯಕ್ಷಯಾನದ ಸಂಭ್ರಮಾಚರಣೆ ಅಂಗವಾಗಿ ನವೀಕೃತ ರಂಗಸ್ಥಳ ಉದ್ಘಾಟನೆ, ‘ಕಿರೀಟ’ ಸ್ಮರಣ ಸಂಚಿಕೆ ಬಿಡುಗಡೆ, ಗಾನವೈಭವ, ದಿ.ಯು ಶಿವರಾಮ ಕಲ್ಕೂರ ಪ್ರಶಸ್ತಿ ಪ್ರಧಾನ, ಗುರುವಂದನೆ, ಅಭಿನಂದನಾ ಸನ್ಮಾನ, ಗೌರವಾರ್ಪಣೆ, ಯಕ್ಷಗಾನ ಪ್ರದರ್ಶನ, ತಾಳಮದ್ದಳೆ ಕಾರ್ಯಕ್ರಮವು ಜನವರಿ 5-8 ರವರೆಗೆ ಉಪ್ಪೂರಿನ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

40ರ ಯಕ್ಷಯಾನದ ಸಂಭ್ರಮಾಚರಣೆಯ ಅಂಗವಾಗಿ ಜನವರಿ 5 ರ ಗುರುವಾರ ಸಂಜೆ ಸಂಘದ ನವೀಕೃತ ರಂಗಸ್ಥಳವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ್ ನಾಯಕ್ ವಹಿಸಲಿದ್ದು, ಉಪ್ಪೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಸಂಘದ ಗುರುಗಳಾದ ಕರ್ಜೆ ಶ್ರೀಧರ್ ಹೆಬ್ಬಾರ್
ಉಪಸ್ಥಿತರಿರುವರು.

ಸಂಘದ ಸ್ಥಾಪಕ ಸದಸ್ಯರುಗಳಾಗಿ 40 ವರ್ಷಗಳಿಂದ ವೇಷ ನಿರ್ವಹಿಸುತ್ತಿರುವ ಸಂಘದ ಗೌರವಾಧ್ಯಕ್ಷ ವೆಂಕಟೇಶ್ ಕ್ರಮಧಾರಿ ಕರ್ಜೆ ಹಾಗೂ ಹಿರಿಯ ಸದಸ್ಯ ವಾಸುದೇವ ನಾಯಕ್ ಇವರಿಗೆ ಗೌರವಾರ್ಪಣೆ ಮತ್ತು ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕರಾದ ಭಾಸ್ಕರ ಅಡಿಗ ಉಪ್ಪೂರು ಇವರಿಗೆ ಅಭಿನಂದನಾ ಸನ್ಮಾನ ನಡೆಯಲಿದೆ. ಶಶಿಕಾಂತ್ ಶೆಟ್ಟಿ ಅವರ ನಿರೂಪಣೆಯಲ್ಲಿ ಬಡಗುತಿಟ್ಟಿನ ಭಾಗವತರುಗಳಾದ ರಾಘವೇಂದ್ರ ಮಯ್ಯ ಹಾಲಾಡಿ, ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಚಂದ್ರಕಾಂತ ರಾವ್ ಮೂಡುಬೆಳ್ಳೆ, ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಗಾನ ವೈಭವ ನಡೆಯಲಿದೆ.

ಹಿಮ್ಮೇಳದಲ್ಲಿ ಕೋಟ ಶಿವಾನಂದ, ಸುಜನ್ ಹಾಲಾಡಿ, ರಾಘವೇಂದ್ರ ಹೆಗಡೆ ಯಲ್ಲಾಪುರ, ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ ಭಾಗವಹಿಸಲಿದ್ದಾರೆ. ಜನವರಿ 6 ರಂದು ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ
ಪ್ರೊ. ಪವನ್ ಕಿರಣಕೆರೆಯವರ ಅಧ್ಯಕ್ಷತೆಯಲ್ಲಿ ಸಾಲಿಗ್ರಾಮ ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ ಹಾಗೂ ಪಂಚಾಯತ್ ಸದಸ್ಯ ಅವಿನಾಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಬಡಗುತಿಟ್ಟಿನ ಖ್ಯಾತ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ ದಿ.ಯು.ಶಿವರಾಮ ಕಲ್ಕೂರ ಪ್ರಶಸ್ತಿ, ಸಂಘದ ಗುರುಗಳಾದ ಕರ್ಜೆ ಶ್ರೀಧರ್ ಹೆಬ್ಬಾರ್ ಅವರಿಗೆ ಗುರುವಂದನೆ ಹಾಗೂ ಸಂಘದ ಒಡನಾಡಿಗಳಾದ ಭಾಗವತ ಕೇಶವ ಆಚಾರ್ಯ ನೀಲಾವರ, ಹವ್ಯಾಸಿ ಯಕ್ಷಗಾನ ಕಲಾವಿದ ಪ್ರಶಾಂತ್ ಮಯ್ಯ ಕಂಬದಕೋಣೆ, ಪ್ರಸಾಧನಾ ಕಲಾವಿದ ಅಣ್ಣಪ್ಪ ನಾಯರಿ ಬಿರ್ತಿ ಬ್ರಹ್ಮಾವರ, ಪೆರ್ಡೂರು ಮೇಳದ ಸ್ತ್ರೀವೇಷಧಾರಿ ಸುಧೀರ್ ಸೇರ್ವೇಗಾರ ಉಪ್ಪೂರು ಅವರಿಗೆ ಅಭಿನಂದನಾ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಬಾಲ ಕಲಾವಿದರಿಂದ ‘ಕನಕಾಂಗಿ ಕಲ್ಯಾಣ’ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜನವರಿ 7 ರಂದು ಸಂಜೆ ಸಂಘದ ಸದಸ್ಯರಿಂದ ‘ಶ್ರೀ ದೇವಿ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜನವರಿ 8 ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ತೆಂಕುತಿಟ್ಟಿನ ಕಲಾವಿದರಿಂದ ‘ಭೃಗು ಶಾಪ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಭಾಗವತರಾಗಿ ಅಮೃತಾ ಕೌಶಿಕ್ ರಾವ್, ಹಿಮ್ಮೇಳದಲ್ಲಿ ಕೌಶಿಕ್ ರಾವ್, ಕೌಶಲ್ ರಾವ್, ಹಾಗೂ ಜಯಕರ ಬೈಲೂರು ಭಾಗವಹಿಸಲಿದ್ದು, ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ ಮಧೂರು, ವಿದ್ವಾನ್ ಸಂಕದಗುಂಡಿ ಗಣಪತಿ ಭಟ್, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!