Tuesday, September 24, 2024
Tuesday, September 24, 2024

ಮಕ್ಕಳ ಪ್ರತಿಭೆ ಅನಾವರಣಕ್ಕೆ ಥೀಮ್ ಪಾರ್ಕ್ ವೇದಿಕೆ: ಪೂರ್ಣಿಮಾ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಥೀಮ್ ಪಾರ್ಕ್ ವೇದಿಕೆ: ಪೂರ್ಣಿಮಾ

Date:

ಕೋಟ: ಮಕ್ಕಳ ಸಂಬಂಧಿತ ಕಾರ್ಯಕ್ರಮಗಳು ಮಕ್ಕಳ ಭೌತಿಕ ವಿಕಸನಕ್ಕೆ ಸಹಕಾರಿಯಾಗಿದ್ದು ಕಾರಂತರ ಆಸಕ್ತಿಯಂತೆ ಮಕ್ಕಳಿಗಾಗಿ ವಿವಿಧ ವಿನೂತನ ಕಾರ್ಯಕ್ರಮಗಳ ಆಯೋಜನೆ, ಪುರಸ್ಕಾರಗಳು ಮಕ್ಕಳಲ್ಲಿನ ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಥೀಮ್ ಪಾರ್ಕ್ ವೇದಿಕೆಯಾಗಿ ರೂಪುಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.

ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ. ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ ಇವರ ಆಶ್ರಯದಲ್ಲಿ ನಡೆದ ಕಾರಂತರ ಇಪ್ಪತ್ತೈದನೇ ಪುಣ್ಯಸ್ಮರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ -ಸಾಹಿತ್ಯಿಕ ರಸಗವಳ ಅನೂಹ್ಯ-2022(ನಾವೀನ್ಯದ ಗೌಜಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ, ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ
ಅಧಿಕಾರಿ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಕೋಟ ವಿವೇಕ ಬಾಲಕಿರ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಅಮರ ಸುಳ್ಯ ಕ್ರಾಂತಿ-1937 ಯಕ್ಷಗಾನ ತಾಳಮದ್ದಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಸಮಯದಲ್ಲಿ ಕಾವೇರಿ ಐದನೇ ಹಂತಕ್ಕೆ ಚಾಲನೆ: ಡಿಕೆಶಿ

ಬೆಂಗಳೂರು, ಸೆ.24: ಬೆಂಗಳೂರು ನಗರದ ಮೂಲೆ ಮೂಲೆಗೂ ಕಾವೇರಿ ನೀರನ್ನು ತಲುಪಿಸುವ...

ನೂತನ ಆ್ಯಂಬುಲೆನ್ಸ್‌ಗಳಿಗೆ ಚಾಲನೆ

ಬೆಂಗಳೂರು, ಸೆ.24: ರಸ್ತೆ ಅಪಾಘಾತಕ್ಕೀಡಾದವರಿಗೆ ಗೋಲ್ಡನ್ ಅವರ್‌ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ...

ಸೆ.26: ಕೆಎಚ್‌ಐಆರ್‌ ಸಿಟಿ ಮೊದಲ ಹಂತಕ್ಕೆ ಚಾಲನೆ

ಬೆಂಗಳೂರು, ಸೆ.24: ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರಗಳು ಒಂದೆಡೇ...

ಸುದ್ದಿಗಳ ಫ್ಯಾಕ್ಟ್ ಚೆಕ್ ಮಾಡಲು ಠಾಣೆಗಳಲ್ಲಿ ಪ್ರತ್ಯೇಕ ತಂಡ

ಬೆಂಗಳೂರು, ಸೆ.24: ಫೇಕ್‌ ನ್ಯೂಸ್‌ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ...
error: Content is protected !!