ಉಡುಪಿ: ಶ್ರೀಕೃಷ್ಣ ಮಠದ ಪರಿಸರದಲ್ಲಿ ಸುಮಾರು 30 ವರ್ಷಗಳ ಹಿಂದೆ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನಿರ್ಮಿಸಿರುವ ಗೀತಾ ಮಂದಿರದಲ್ಲಿ ಗೀತಾ ಜಯಂತಿಯ ಅಂಗವಾಗಿ ಸಮಗ್ರ ಗೀತಾ ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪಾರಾಯಣದ ನಂತರ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೀತಾ ಸಂದೇಶವನ್ನು ನೀಡಿದರು. ಶತಾವಧಾನಿಗಳಾದ ಉಡುಪಿ ರಾಮನಾಥ ಆಚಾರ್ಯರು ಸಂಪಾದಿಸಿರುವ ಗೀತಾ ಸಮೀಕ್ಷಾ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಗೀತಾ ಜಯಂತಿಯ ಪ್ರಯುಕ್ತ 20 ಕ್ಕೂ ಹೆಚ್ಚಿನ ಶಾಲೆಗಳಲ್ಲಿ ನಡೆದ ಕಂಠಪಾಠ ಸ್ಪರ್ಧೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಡಾ. ಬಿ. ಗೋಪಾಲಾಚಾರ್ಯ ಹಾಗೂ ಮಹಿತೋಷ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.