ಮಣಿಪಾಲ: ಪಟ್ಲದ ಯು.ಎಸ್.ನಾಯಕ್ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿ, ಟಿ.ಎ.ಪೈ.ಮ್ಯಾನೇಜ್ ಮೆಂಟ್ ಇನ್ಸ್ಟಿಟ್ಯೂಟ್, ಟ್ಯಾಪ್ಮಿಯ ಸಾಮಾಜಿಕ ಉತ್ಥಾನ ಸಂಘ ಸೋಶಿಯಲ್ ಎನ್ಡೇವರ್ ಗ್ರೂಪ್ ಮತ್ತು ರೂರಲ್ ಎಜುಕೇಶನ್ ಸೊಸೈಟಿ ಪಟ್ಲ ಇವರ ಸಹಯೋಗದಲ್ಲಿ ಆರೋಗ್ಯ ಮಾಹಿತಿ ಶಿಬಿರ ಜರಗಿತು.
ಸ್ತ್ರೀರೋಗತಜ್ಞೆ ಡಾ. ರಾಜಲಕ್ಷ್ಮಿ ಅವರು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು ಮತ್ತು ಸಂವಾದ ನಡೆಸಿದರು. ವಿದ್ಯಾರ್ಥಿನಿಯರಿಗೆ ಟ್ಯಾಪ್ಮಿ ಸಾಮಾಜಿಕ ಉತ್ಥಾನ ಸಂಘದ ವತಿಯಿಂದ ಸ್ಯಾನಿಟರಿ ನೇಪಕಿನ್ ಗಳನ್ನು ಉಚಿತವಾಗಿ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಪ್ರಭು, ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್, ಟ್ಯಾಪ್ಮಿಯ ವಿದ್ಯಾರ್ಥಿಗಳಾದ ಅನುಷಾ ನಾಯಕ್, ಖ್ಯಾತಿ, ಸಾರಿಕಾ, ಪರಾಗ್, ನವೀನ್, ನಿಕಿತಾ, ಅಪೂರ್ವಾ ಉಪಸ್ಥಿತರಿದ್ದರು. ನಿರಂಜನ ಪ್ರಭು ವಂದಿಸಿದರು.