Saturday, September 28, 2024
Saturday, September 28, 2024

ತುಳು ಕಾದಂಬರಿ ಪ್ರಶಸ್ತಿ ಆಯ್ಕೆಗಾಗಿ ತುಳು ಕಾದಂಬರಿಗಳ ಹಸ್ತಪ್ರತಿ ಆಹ್ವಾನ

ತುಳು ಕಾದಂಬರಿ ಪ್ರಶಸ್ತಿ ಆಯ್ಕೆಗಾಗಿ ತುಳು ಕಾದಂಬರಿಗಳ ಹಸ್ತಪ್ರತಿ ಆಹ್ವಾನ

Date:

ಉಡುಪಿ: ಉಡುಪಿ ತುಳುಕೂಟದ ಆಶ್ರಯದಲ್ಲಿ ನಡೆಯುವ ಎಸ್.ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಆಯ್ಕೆಗಾಗಿ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕು ಎಂಬ ಆಶಯದಿಂದ ತುಳು ಚಳವಳಿಯ ಪ್ರವರ್ತಕ ದಿ. ಎಸ್.ಯು. ಪಣಿಯಾಡಿ ಅವರ ನೆನಪಿನಲ್ಲಿ ನೀಡುವ ಈ ಪ್ರಶಸ್ತಿಗೆ ಈ ಕೆಳಗಿನ ನಿಬಂಧನೆಗೊಳಪಟ್ಟ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದು.

ಹಸ್ತಪ್ರತಿಗಳು ತುಳು ಕಾದಂಬರಿಗಳಾಗಿರಬೇಕು. ಅದು ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು. ಇದುವರೆಗೆ ಎಲ್ಲೂ ಮುದ್ರಿತವಾಗಿರಬಾರದು. ಆಯ್ಕೆಯಾದರೆ ಮುದ್ರಿಸುವಾಗ ಕ್ರೌನ್ 1/8 ಆಕಾರ ದಲ್ಲಿ 120 ಪುಟಗಳಿಗಿಂತ ದೀರ್ಘವಾಗಿರಬೇಕು.

ಹಸ್ತಪ್ರತಿಗಳು ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿಟಿಪಿ) ರೂಪದಲ್ಲಿರಬಹುದು. ಕಾದಂಬರಿಯು ತುಳುನಾಡಿನ ಭೌಗೋಳಿಕ ಚಿತ್ರಣ, ತುಳು ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳಿಂದ ಕೂಡಿದ್ದು, ಪೌರಾಣಿಕ, ಐತಿಹಾಸಿಕ, ಜಾನಪದ, ಸಾಮಾಜಿಕ ವಸ್ತುವನ್ನು ಆಧರಿಸಿರಬಹುದು. ಪ್ರಶಸ್ತಿ 8 ಸಾವಿರ ರೂ. ಮೊತ್ತ ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ.

ಹಸ್ತಪ್ರತಿಯನ್ನು ಡಿಸೆಂಬರ್ 20 ರೊಳಗೆ ಪಣಿಯಾಡಿ ತುಳು ಕಾದಂಬರಿ ಸ್ಪರ್ಧೆಯ ಸಂಚಾಲಕಿ – ಶಿಲ್ಪಾ ಜೋಶಿ , ಶೆಲ್ಟರ್. ಹೆಚ್.ಐ.ಜಿ 19. ಪ್ರಸನ್ನ ಗಣಪತಿ ದೇವಸ್ಥಾನದ ಎದುರು, ಮಣ್ಣುಪಳ್ಳ. ಮಣಿಪಾಲ, ಉಡುಪಿ. 576104, ಮೊಬೈಲ್ – 7892194150 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು 9844532629 ಇವರನ್ನು ಸಂಪರ್ಕಿಸಬಹುದು ಎಂದು ಉಡುಪಿ ತುಳುಕೂಟದ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕಾಪು, ಸೆ.28: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್...

ಸಾಹಿತ್ಯದ ಓದಿನಿಂದ ವಿಕಸನ: ರಾಜೇಂದ್ರ ಭಟ್ ಕೆ

ಕಾರ್ಕಳ, ಸೆ.28: ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ....

ನಾನೇ ಅಡ್ಜಸ್ಟ್ ಮಾಡಿಕೊಳ್ಳುವುದು

ಸಂಜೆ ಡ್ಯೂಟಿ ಮುಗಿಸಿ ಮನೆಗೆ ಬಂದ ಹೆಂಡತಿ "ನಾನೇ ಎಲ್ಲ ಕೆಲಸ...
error: Content is protected !!