ಉಡುಪಿ: ನವೆಂಬರ್ 25, 26 ರಂದು ಉಡುಪಿ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಭವಾನಿ ಮಂಟಪದ ಡಾ. ಮುರಾರಿ ಬಲ್ಲಾಳ್ ವೇದಿಕೆಯಲ್ಲಿ ನಡೆಯಲಿರುವ ಉಡುಪಿ ತಾಲೂಕು ಹದಿಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಬಿಡುಗಡೆಗೊಳಿಸಿದರು. ಹಿರಿಯ ಸಾಹಿತಿ ಟಿ. ತಿರುಮಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಸಾಹಿತಿ ವೀಣಾ ಬನ್ನಂಜೆ ಉದ್ಘಾಟಿಸಲಿದ್ದಾರೆ.
ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪರೀಕ್ಷಾರ್ಥಿ ಭಾರತೀಯ ಆಡಳಿತ ಸೇವಾಧಿಕಾರಿ ಯತೀಶ್ ಆರ್., ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್. ಪಿ., ಕಾರ್ಯದರ್ಶಿ ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು.