ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 175 ಗ್ರಾಮ ಒನ್ ಕೇಂದ್ರಗಳು ಪ್ರಾರಂಭಗೊಂಡು ಕಾರ್ಯನಿರ್ವಹಿಸುತಿದ್ದು, ಅಂಬಲಪಾಡಿ, ಕಲ್ಯಾಣಪುರ, ಕಡೆಕಾರ್, ಅಲೆವೂರು, ಸಾಣೂರು, ಮುಂಡ್ಕೂರು, ಬೆಳ್ಮಣ್, ಮರ್ಣೆ, ಬೇಳೂರು, ನಿಟ್ಟೆ, ಕುಕ್ಕುಂದೂರು, ಶಂಕರನಾರಾಯಣ, ಅಮಾಸೆಬೈಲು, ಹೆಜಮಾಡಿ, ಬಡಾ, ಕೊಕ್ಕರ್ಣೆ, ವರಂಗ, ಬೆಳ್ವೆ, ಉಪ್ಪುಂದ, ಶಿರೂರು, ಆರೂರು, ಮುದರಂಗಡಿ, ಕಾಂತಾವರ, ನಂದಳಿಕೆ, ಶಿರ್ಲಾಲು, ಎಡಮೊಗೆ, ಗುಲ್ವಾಡಿ, ಹಟ್ಟಿಯಂಗಡಿ, ಹಾರ್ದಳ್ಳಿ-ಮಂಡಳ್ಳಿ, ಕಿರಿಮಂಜೇಶ್ವರ, ಯಡ್ತಾಡಿ,ಕೋಟ, ಚಾಂತಾರು ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಈ ಗ್ರಾಮ ಪಂಚಾಯತ್ ಗಳಲ್ಲಿ ಪ್ರಾಂಚೈಸಿ ತೆರೆಯಲು ವೆಬ್ ಪೋರ್ಟಲ್ https://gramaonebls.com/applicant-registration# ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.
ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
Date: