ಉಡುಪಿ: ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪ್ರೊ. ಎ ಶ್ರೀಪಾದ ಭಟ್ ಇವರ ಮಾರ್ಗದರ್ಶನದಲ್ಲಿ ಜ್ಯೋತಿಷ್ಯಶಾಸ್ತ್ರದಲ್ಲಿ ರಾಧಾಕೃಷ್ಣ ಬಿ ಇವರು ‘ಶಂಕರನಾರಾಯಣ-ವಿರಚಿತ ತಂತ್ರದರ್ಪಣಾಭಿಧಾನ- ವಾರ್ಷಿಕ ತಂತ್ರವ್ಯಾಖ್ಯಾನಸ್ಯ ಸಂಪಾದನಮ್ ಅಧ್ಯಯನಂ ಚ’ ಎಂಬ ಶೋಧಪ್ರಬಂಧವನ್ನು ಮಂಡಿಸಿ ವಿದ್ಯಾವಾರಿಧಿ (ಪಿ.ಎಚ್.ಡಿ) ಪದವಿಯನ್ನು ಪಡೆದಿರುತ್ತಾರೆ.
ಮೂಲತಃ ಕಾಸರಗೋಡು ಜಿಲ್ಲೆಯವರಾದ ವೇದಮೂರ್ತಿ ಬೇಂಗ್ರೋಡಿ ಮಾಧವ ಭಟ್ ಮತ್ತು ರಾಧಾ ದಂಪತಿಗಳ ಪುತ್ರರಾದ ಇವರು ಪ್ರಸ್ತುತ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನ ಕೇಂದ್ರದಲ್ಲಿ ಜ್ಯೋತಿಷ್ಯ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಎಸ್.ಎ.ಪಿ.ಎಚ್.ಎಸ್ ಅಗಲ್ಪಾಡಿ ಮತ್ತು ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತಾಧ್ಯಯನ ಕೇಂದ್ರದ ಪ್ರಾಕ್ತನ ವಿದ್ಯಾರ್ಥಿಯಾಗಿರುತ್ತಾರೆ.