Wednesday, January 22, 2025
Wednesday, January 22, 2025

ಶ್ರೀ ಕ್ಷೇತ್ರ ಬೆಳ್ಮಣ್ಣು- ಸೆ. 26 ರಿಂದ ಅ. 5 ರವರೆಗೆ ನವರಾತ್ರಿ ಉತ್ಸವ

ಶ್ರೀ ಕ್ಷೇತ್ರ ಬೆಳ್ಮಣ್ಣು- ಸೆ. 26 ರಿಂದ ಅ. 5 ರವರೆಗೆ ನವರಾತ್ರಿ ಉತ್ಸವ

Date:

ಉಡುಪಿ: ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನವರಾತ್ರಿ ಉತ್ಸವ ಹಾಗೂ ಅಕ್ಟೋಬರ್ 6ರಂದು ವಿಜಯ ದಶಮಿ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 8. 30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸೆಪ್ಟೆಂಬರ್ 26 ರಂದು ಸೋಮವಾರ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮತ್ತು ಶ್ರೀ ವಿಠೋಭ ರುಕ್ಮಾಯಿ ಭಜನಾ ಮಂಡಳಿ ಬೆಳ್ಮಣ್ಣು ಇವರಿಂದ ‘ಹರಿ ಸಂಕೀರ್ತನೆ’.

ಸೆಪ್ಟೆಂಬರ್ 27 ರಂದು ಮಂಗಳವಾರ ಶ್ರೀ ಮಯೂರವಾಹನ ಯಕ್ಷಗಾನ ನಾಟಕ ಸಭಾ ಸೂಡ ಇದರ ಖ್ಯಾತ ಕಲಾವಿದರ ಸಮ್ಮಿಲನದೊಂದಿಗೆ ಸೂಡ ಹರೀಶ್ ಶೆಟ್ಟಿಯವರ ನಿರ್ದೇಶನದಲ್ಲಿ ತೆಂಕುತೆಟ್ಟಿನ ಯಕ್ಷಗಾನ ‘ಅಂಜನಾ
ನಂದನ’ ನಡೆಯಲಿದೆ, ಸೆಪ್ಟೆಂಬರ್ 28 ರಂದು ಬುಧವಾರ ಶ್ರೀ ದುರ್ಗಾಪರಮೇಶ್ವರಿ ಶೋಬಾನೆ ಬಳಗ ಮತ್ತು ಕಲಾಸಕ್ತರಿಂದ ವೈಷ್ಣವಿ ಭಟ್ ಅವರ ಸಂಯೋಜನೆಯಲ್ಲಿ ‘ತಾಳ ಮದ್ದಳೆ – ಪಂಚವಟಿ’, ಸೆಪ್ಟೆಂಬರ್ 29 ರಂದು ಗುರುವಾರ ‘ಯಕ್ಷಗಾನ ವೈಭವ’ ರವೀಂದ್ರ ರಾವ್ ಚೆನೈ ಸಾರಥ್ಯದಲ್ಲಿ ಶಾಲಿನಿ ಹೆಬ್ಬಾರರ ಮಧುರ ಗಾನಸಿರಿಯೊಂದಿಗೆ ವೈಶಿಷ್ಠ್ಯ ಕಾರ್ಯಕ್ರಮ ನಡೆಯಲಿದೆ.

ಸೆಪ್ಟೆಂಬರ್ 30 ರಂದು ಶುಕ್ರವಾರ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಭಜನಾ ಮಂಡಳಿಯ ಸದಸ್ಯರಿಂದ ‘ಕುಣಿತ ಭಜನಾ ಕಾರ್ಯಕ್ರಮ’, ಅಕ್ಟೋಬರ್ 1 ರಂದು ಶನಿವಾರ ಶ್ರೀ ನೃತ್ಯಾಲಯ (ರಿ) ಕಾರ್ಕಳ ಇವರಿಂದ ‘ನೃತ್ಯಾಪರ್ಣಂ’, ಅಕ್ಟೋಬರ್ 2ರಂದು ಆದಿತ್ಯವಾರ ಬೆಳ್ಮಣ್ಣು ಪರಿಸರದ ಸಾರ್ವಜನಿಕ ಸಂಗೀತ ಆಸಕ್ತರಿಗೆ ಕರೋಕೆ ಗಾಯನ ಸ್ಪರ್ಧೆ – ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧೆ – ವಿಶೇಷ ಪ್ರಶಸ್ತಿ ಮತ್ತು ನಗದು ಬಹುಮಾನ. ವಯಸ್ಸಿನ ನಿರ್ಬಂಧವಿಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆಪ್ಟೆಂಬರ್ 30ರ ಮೊದಲು ದೇವಾಲಯದ ಕಚೇರಿಯಲ್ಲಿ ಅಥವಾ ಈ ಕೆಳಗಿನ ದೂರವಾಣಿಗೆ 7259789716, 9902171267, 9448474731 ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದು. ಸ್ಪರ್ಧೆ ಸಂಜೆ: 5.30 ರಿಂದ ಆರಂಭವಾಗುತ್ತದೆ.

ಅಕ್ಟೋಬರ್ 3 ರಂದು ಸೋಮವಾರ ಯಕ್ಷಗಾನ ತಾಳಮದ್ದಳೆ- ‘ನಚಿಕೇತ ಉಪಾಖ್ಯಾನ’ ಅಕ್ಟೋಬರ್ 4 ರಂದು ಮಂಗಳವಾರ ಪಡುಬಿದ್ರಿ – ಮಧ್ವನಗರ ತರಂಗಿಣಿ ಮಿತ್ರ ಮಂಡಳಿಯವರಿಂದ ‘ಕುಣಿತ ಭಜನಾ ಕಾರ್ಯಕ್ರಮ’ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಜರಗಲಿದೆ.

ಅಕ್ಟೋಬರ್ 5ರಂದು ಬುಧವಾರ ವಿಜಯ ದಶಮಿ ಪ್ರಯುಕ್ತ ಬೆಳಿಗ್ಗೆ 11ರಿಂದ ಬೋಳ ನಮಿತಾ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ 95% ಕ್ಕೂ ಹೆಚ್ಚು ಅಂಕ ಗಳಿಸಿದ ಬೆಳ್ಮಣ್ಣು ಗ್ರಾಮದ ಶಾಲಾ ಕಾಲೇಜು ಮತ್ತು ಬೆಳ್ಮಣ್ಣು ಪರಿಸರದ ಪರವೂರಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಅರ್ಹ ವಿದ್ಯಾರ್ಥಿಗಳು ದೇವಾಲಯದ ಕಚೇರಿಗೆ 26-09-2022ರ ಮೊದಲು ಅಂಕಪಟ್ಟಿಯ ಜೆರಾಕ್ಸ್ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕಾಗಿ ವಿನಂತಿ.

ನವರಾತ್ರಿ ಉತ್ಸವದಂದು ಪ್ರತಿದಿನ ರಾತ್ರಿ ನವರಾತ್ರಿ ಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ ಎಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!