Monday, September 23, 2024
Monday, September 23, 2024

ರೋಟರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ

ರೋಟರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ

Date:

ಕುಂದಾಪುರ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಲೈಬ್ರರಿ ಹಾಲ್ ನಲ್ಲಿ ಗಂಗೊಳ್ಳಿಯ ರೋಟರಾಕ್ಟ್ ಕ್ಲಬ್ ನ ಪದಪ್ರದಾನ ಸಮಾರಂಭ ಜರುಗಿತು. 2022-23ನೇ ಸಾಲಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶ್ರೇಯಾ ಜಿ ಹಾಗೂ ಕಾರ್ಯದರ್ಶಿಯಾಗಿ ಕಿರಣ್ ಆಯ್ಕೆಯಾದರು.

ರೋಟರಾಕ್ಟ್ ಡಿಸ್ಟ್ರಿಕ್ಟ್ ಚೇರ್ಮನ್ ಜೈ ವಿಠ್ಠಲ್, ಪದಪ್ರದಾನ ನೆರವೇರಿಸಿದರು. ರೊಟ್ರಾಕ್ಟ್ ವೈಸ್ ಚೇರ್ಮನ್ ಚಂದ್ರ ಪೂಜಾರಿ, ರೊಟ್ರ್ಯಾಕ್ ಜೋನಲ್ ಕೋ ಆರ್ಡಿನೇಟರ್ ಜಾನ್ಸನ್ ಡಿ ಅಲ್ಮೇಡ ಪದಪ್ರದಾನ ಸಮಾರಂಭವನ್ನು ನೆರವೇರಿಸಿದರು.

ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಶುಭ ಹಾರೈಸಿದರು. ಗಂಗೊಳ್ಳಿ ರೋಟರಿ ಕ್ಲಬ್ ನ ಯೂಥ್ ಸರ್ವಿಸ್ ಚೇರ್ಮನ್ ನಾಗೇಂದ್ರ ಪೈ, ಕ್ಲಬ್ನ್ ನ ಕಾರ್ಯದರ್ಶಿ ಚಂದ್ರಕಲಾ ಎಸ್ ಉಪಸ್ಥಿತರಿದ್ದರು.

ನಿರ್ಗಮನ ರೋಟರಾಕ್ಟ್ ಅಧ್ಯಕ್ಷೆ ಅಮೀಕ್ಷಾ ಡಿ ನಾಯ್ಕ್ ಸ್ವಾಗತಿಸಿ ಹಿಂದಿನ ಸಾಲಿನ ರೋಟರಾಕ್ಟ್ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ರೋಟರಿ ಕ್ಲಬ್ಬಿನ ಸದಸ್ಯರಾದ ರಾಮನಾಥ್ ನಾಯಕ್, ಲಕ್ಷ್ಮಿಕಾಂತ್ ಮಡಿವಾಳ, ಕೃಷ್ಣ ಪೂಜಾರಿ, ಗೋಪಾಲ್ ಬಿಲ್ಲವ ಉಪಸ್ಥಿತರಿದ್ದರು. ಕೀರ್ತಿ ಭಟ್, ದೀಕ್ಷಾ ಮತ್ತು ಮಹಿಮಾ ಅತಿಥಿಗಳನ್ನು ಪರಿಚಯಿಸಿದರು ಕಾರ್ಯದರ್ಶಿ ಕಿರಣ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2024ರಲ್ಲಿ ಲಲಿತಕಲೆ...

ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ಸಡಿಲಿಕೆಗೆ ಮನವಿ

ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್...

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...
error: Content is protected !!