Wednesday, March 25, 2026
Wednesday, March 25, 2026

ವಿಶ್ವ ಕೊಂಕಣಿ ನಾಟಕ ಮಹೋತ್ಸವ; ವಿಶ್ವ ಕೊಂಕಣಿ ಪ್ರಶಸ್ತಿ ಪದಾನ ಸಮಾರಂಭ

ವಿಶ್ವ ಕೊಂಕಣಿ ನಾಟಕ ಮಹೋತ್ಸವ; ವಿಶ್ವ ಕೊಂಕಣಿ ಪ್ರಶಸ್ತಿ ಪದಾನ ಸಮಾರಂಭ

Date:

ಮಂಗಳೂರು, ಜ.29: ಜನವರಿ 31 ಹಾಗೂ 1 ಫೆಬ್ರವರಿ 2026 ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಟಿತ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ ನಗರದ ಟಿವಿ ರಮಣ ಪೈ ಸಭಾಂಗಣ, ಕೊಡಿಯಾಲ್ ಬೈಲ್ ನಲ್ಲಿ ನಡೆಯಲಿದೆ. ವಿಶ್ವ ಕೊಂಕಣಿ ನಾಟಕ ಮಹೋತ್ಸವದ ಪ್ರಯುಕ್ತ ನಡೆಯಲಿರುವ ನಾಲ್ಕು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕಪ್ರಿಯರನ್ನು ಆಕರ್ಷಿಸಲಿದೆ.

ಮೊದಲನೆಯ ದಿನದಂದು (ದಿ. 31-01-2026) ಸಂಜೆ 5.00-6.00 ಕ್ಕೆ ಮಂಗಳೂರು ಸಾಧನಾ ಬಳಗ ಪ್ರಕಾಶ್ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು “ಭಕ್ತ ಪುರಂದರ” ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅದೇ ದಿನ ಸಂಜೆ 7.00-8.00 ಕ್ಕೆ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಅಭಿನಯಿಸುವ ಜನಪ್ರಿಯ “ಚಿಕೆ ರಾಬ್” (ಹ್ಯಾಂಗ್ ಓನ್) ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ಎರಡನೆಯ ದಿನದಂದು (ದಿ. 01-02-2026) ಸಂಜೆ 5.00-6.00 ಕ್ಕೆ ಗೋವಾದ ನಟರಂಗ ಕ್ರಿಯೇಶನ್ಸ್ ತಂಡದವರಿಂದ “ಹೆಡೋನಿಸ್ಟ್” ಕೊಂಕಣಿ ನಾಟಕವು ಪ್ರದರ್ಶನಗೊಳ್ಳಲಿದೆ. ಅದೇ ದಿನ 7.00-8.00 ಗಂಟೆಗೆ ನಾಟ್ಯ ನಿಕೇತನ ಕೊಲ್ಯದ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ಇವರ ತಂಡದವರಿಂದ “ಪಾರಿಜಾತ ಫೂಲ್” ಗೀತ ನೃತ್ಯ ನಾಟಕವೂ ಪ್ರದರ್ಶನಗೊಳ್ಳಲಿದೆ.

ಎರಡನೇ ದಿನ ಸಂಜೆ 6.00 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಹಿರಿಯ ಕೊಂಕಣಿ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರು, ಈ ಬಾರಿಯ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ ಇವರು ಈ ವರ್ಷದ ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ ಸ್ವೀಕರಿಸಲಿರುವರು. ಕಲಾಸಕ್ತ ಕೊಂಕಣಿ ಬಾಂಧವರು ಈ ಎರಡೂ ದಿನಗಳ ಕೊಂಕಣಿ ನಾಟಕ ಮಹೋತ್ಸವದಲ್ಲಿ ಭಾಗವಹಿಸಿ ಕೊಂಕಣಿ ಭಾಷೆ ಹಾಗೂ ರಂಗಕಲೆಯನ್ನು ಪ್ರೊತ್ಸಾಹಿಸಬೇಕಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಶ್ವಸ್ಥ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಕೊಂಕಣಿ ಕೇಂದ್ರ, ಮಂಗಳೂರು ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈ, ಕಾರ್ಯದರ್ಶಿ ಡಾ. ಕೆ. ಮೋಹನ್ ಪೈ, ಕೋಶಾಧಿಕಾರಿ ಬಿ.ಆರ್. ಭಟ್, ಸಲಹಾ ಸಮಿತಿ ಸದಸ್ಯರುಗಳಾದ ಎಂ.ಆರ್. ಕಾಮತ್, ಗೋವಿಂದರಾಯ ಪ್ರಭು, ರತ್ನಾಕರ ಕುಡ್ವ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಾದ್ಯಂತ ಇಂಧನ ಕೊರತೆ ಇಲ್ಲ: ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ

ನವದೆಹಲಿ, ಮಾ.25: ದೇಶಾದ್ಯಂತ ಇಂಧನ ಕೊರತೆ ಇಲ್ಲ ಎಂದು ಭಾರತ್ ಪೆಟ್ರೋಲಿಯಂ...

ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ: ಸರ್ಕಾರ

ನವದೆಹಲಿ, ಮಾ.25: ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ...

ಕ್ಷಯರೋಗದ ಶಾಶ್ವತ ನಿರ್ಮೂಲನೆಗೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿ: ಮನು ಪಟೇಲ್ ಬಿ.ವೈ

ಉಡುಪಿ, ಮಾ.25: ಕ್ಷಯರೋಗವು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲನ್ನು ಒಡ್ಡುತ್ತಿದ್ದು, ದೇಶದಲ್ಲಿಯೇ...

ಏರ್ಲಪಾಡಿ: ಗಾಳಿ ಮಳೆಗೆ ಮನೆಯ ಮೇಲೆ ಮರ ಬಿದ್ದು ಹಾನಿ

ಉಡುಪಿ, ಮಾ.25: ಮಂಗಳವಾರ ಜಿಲ್ಲೆಯ ಕೆಲವೆಡೆ ಸುರಿದ ಗಾಳಿ ಮಳೆಗೆ ಅಲ್ಲಲ್ಲಿ...
error: Content is protected !!