Tuesday, November 26, 2024
Tuesday, November 26, 2024

ಸಂವಿಧಾನದ ಮರುನೋಟ ಇಂದಿನ ಅಗತ್ಯ: ಎನ್ ವಿನಯ ಹೆಗ್ಡೆ

ಸಂವಿಧಾನದ ಮರುನೋಟ ಇಂದಿನ ಅಗತ್ಯ: ಎನ್ ವಿನಯ ಹೆಗ್ಡೆ

Date:

ವಿದ್ಯಾಗಿರಿ, ಜ.26: ಸಂವಿಧಾನದ ಮರುನೋಟ ಇಂದಿನ ಅಗತ್ಯ ಎಂದು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಹೇಳಿದರು. 74ನೇ ಗಣರಾಜ್ಯೊತ್ಸವ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಸುಮಾರು 25,000 ಕ್ಕೂ ಅಧಿಕ ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು

ದೇಶದ ಒಬ್ಬನೇ ಒಬ್ಬ ಪ್ರಜೆ ಹೊರಗುಳಿಯದಂತೆ ಸಂವಿಧಾನವನ್ನು ಬಹಳ ಶಿಸ್ತಿನಿಂದ ರಚಿಸಿದ್ದಾರೆ. ಸಂವಿಧಾನ ಕರಡು ಸಮಿತಿಯಲ್ಲಿನ ತಜ್ಞರು ಜಗತ್ತಿನ ಸಂವಿಧಾನ ಹಾಗೂ ಆಡಳಿತವನ್ನು ಅಧ್ಯಯನ ಮಾಡಿದ್ದು, ನಮಗೆ ಪೂರಕವಾದ ಬ್ರಿಟಿಷ್ ಸಂವಿಧಾನದ ನಮ್ಯತೆ ಹಾಗೂ ಅಮೆರಿಕಾ ಸಂವಿಧಾನದ ಗಟ್ಟಿತನದ ಮಿಶ್ರಣವು ಪ್ರಮುಖವಾಗಿದೆ. 1950ರ ಜನವರಿ 26ರಂದು ನಮ್ಮ ಸಂವಿಧಾನವನ್ನು ಅಂಗೀಕರಿಸಲಾಯಿತು ಎಂದರು. ಸುಶಿಕ್ಷಿತರಿಗೆ ಮತದಾನ ಹಕ್ಕು ನೀಡಬೇಕು ಎಂದು ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಎಲ್ಲರೂ ಸಹಮತ ಹೊಂದಿದ್ದರು. ಆದರೆ, ಕೇವಲ ಅಕ್ಷರಸ್ಥರಿಗೆ ಮಾತ್ರ ಮತದಾನ ಹಕ್ಕು ನೀಡಿದ್ದರೆ, ಅಂದು ಶೇ 30 ಮಂದಿ ಮಾತ್ರ ಹಕ್ಕು ಪಡೆಯುತ್ತಿದ್ದರು. ಶೇ 70 ಜನರನ್ನು ಹೊರಗಿಡಬೇಕೇ? ಎಂಬ ಪ್ರಶ್ನೆ ಎದುರಾಗಿದ್ದು, ನಂತರ ವಯಸ್ಸಿನ ಆಧಾರದಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡಲಾಯಿತು ಎಂದರು.

ದೇಶದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿವಿಕೆಯನ್ನು ಪರಿಗಣಿಸಿ 1965ರ ವರೆಗೆ ಅನ್ವಯಿಸುವಂತೆ ಮೀಸಲಾತಿ ಜಾರಿಗೆ ತರಲಾಯಿತು. ಆದರೆ, ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂಬ ಏಕೈಕ ಕಾರಣಕ್ಕೆ ಮೀಸಲಾತಿಯನ್ನು ಮುಂದುವರಿಸಿಕೊಂಡು ಬರಲಾಯಿತು. ಪ್ರಮಾಣವನ್ನೂ ಹೆಚ್ಚಿಸಲಾಯಿತು ಎಂದರು. ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗೂ ಸೂಕ್ತ ಕಾಯಿದೆಗಳು ಅಗತ್ಯ. ಇಲ್ಲದಿದ್ದರೆ, ಉನ್ನತ ಶಿಕ್ಷಣ ಸಂಸ್ಥೆಗಳು ಅರ್ಹತೆ ಇಲ್ಲದವರ ಸೊತ್ತಾಗುವ ಅಪಾಯಗಳು ಇವೆ. ಶಿಕ್ಷಣ ಸಂಸ್ಥೆಗಳು ಹಲವು ಇರಬಹುದು. ಆದರೆ, ಆಳ್ವಾಸ್‌ನಲ್ಲಿನ ಶಿಸ್ತು, ಸಮಯ, ಸೃಜನಶೀಲತೆ, ಸೌಂದರ್ಯವು ಅನನ್ಯ. ಇದಕ್ಕೆ ಡಾ. ಎಂ.ಮೋಹನ ಆಳ್ವ ಅವರ ದೂರದೃಷ್ಟಿ ಕಾರಣ ಎಂದರು.

ಆಳ್ವಾಸ್ ತ್ರಿವರ್ಣ ವೈಭವದಲ್ಲಿ ಒಂದಾದ ಸಾಂಸ್ಕೃತಿಕ ಜಾಂಬೂರಿ ಮೂಲಕ ವಿಶ್ವಕ್ಕೆ ಭಾವೈಕ್ಯದ ಸಂದೇಶ ನೀಡಿದ್ದ ಆಳ್ವಾಸ್ ಅಂಗಣದಲ್ಲಿ ಗುರುವಾರ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ತ್ರಿವರ್ಣ ರಂಗಿನಲ್ಲಿ ಒಂದಾಗಿತ್ತು. ಎಲ್ಲೆಲ್ಲೂ ತ್ರಿವರ್ಣ ಸಾಂಸ್ಕೃತಿಕ ವೈಭವ ರಂಗೇರಿದರೆ, ಸೇರಿದ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಮನದಲ್ಲಿ ದೇಶಪ್ರೇಮದ ಭಾವೈಕ್ಯದ ಭಾವ.

ಬ್ಲಾಸ್ಟರ್‌ನಲ್ಲಿ ಸಿಡಿದ ತ್ರಿವರ್ಣ ರಂಗು, ಪುಟಾಣಿಗಳು ಹಾಗೂ ಗಣ್ಯರ ಕೈಯಲ್ಲಿ ಹಾರಾಡಿದ ಧ್ವಜ, ಬ್ಯಾಂಡ್ ಸೆಟ್‌ನಲ್ಲಿ ಮೊಳಗಿದ ಸಂಗೀತ, ವಿದ್ಯಾರ್ಥಿಗಳ ಗಾಯನದದಲ್ಲಿ ದೇಶಪ್ರೇಮವು ಮೇಳೈಸಿತ್ತು. ‘ವಂದೇ ಮಾತರಂ’ ಬಳಿಕ ‘ಕೋಟಿ ಕಂಠ’ ಹಾಡಿನ ನಿನಾದವನ್ನು ಸೇರಿದ್ದ ವಿದ್ಯಾರ್ಥಿಗಳು ಹಾಗೂ ಗಣ್ಯರ ಸಹಸ್ರಾರು ತ್ರಿವರ್ಣ ಧ್ವಜಗಳ ಅಲೆ ರಂಗೇರಿಸಿತು. 

ವಿವಿಧ ಭಾಗಗಳಿಂದ ಆಹ್ವೌನಿಸಲ್ಪಟ್ಟ ೧೧೦ಕ್ಕೂ ಅಧಿಕ ಮಾಜಿ ಸೈನಿಕರು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಘಟಕದ 70ಕ್ಕೂ ಅಧಿಕ ಪದಾಧಿಕಾರಿಗಳು ಆಗಮಿಸಿದ್ದರು. ಆಳ್ವಾಸ್ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ನಡೆದ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 1,700 ಕ್ಕೂ ಅಧಿಕ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಕೆಡೆಟ್‌ಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯೂತ್ ರೆಡ್‌ಕ್ರಾಸ್ ವಿದ್ಯಾರ್ಥಿಗಳು ಮೆರುಗು ಹೆಚ್ಚಿಸಿದರು.

ಹೊನ್ನಾವರದ ‘ಸಂತ ಮದರ್ ತೆರೇಸಾ ತಂಡದ 13 ಮಂದಿ ಸಂಗೀತದ ರಸದೌತಣ ನೀಡಿದರು. ಬ್ಲಾಸ್ಟರ್ ಮೂಲಕ ಗಗನಕ್ಕೆ ಚಿಮ್ಮಿದ ತ್ರಿವರ್ಣ ರಂಗು ಹಾಗೂ ರಿಬ್ಬನ್‌ಗಳು ಬಾನಂಗಳದಲ್ಲೂ ಚಿತ್ತಾರ ಮೂಡಿಸಿ, ವೈಭವದ ಕಳೆ ನೀಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಟ್ರಸ್ಟಿ ಡಾ.ವಿನಯ ಆಳ್ವ ಉದ್ಯಮಿ ಶ್ರೀಪತಿ ಭಟ್, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ವಿವಿಧ ಜಿಲ್ಲೆಗಳ ಆಯುಕ್ತರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲ ನಿಖಾಯದ ಡೀನ್ ವೇಣುಗೋಪಾಲ ಶೆಟ್ಟಿ ಹಾಗೂ ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಾಲಾಡಿ: ಕಾದಂಬರಿ ಲೋಕಾರ್ಪಣೆ

ಕುಂದಾಪುರ, ನ.26: ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ 'ಕಣ್ತೆರೆದ ಕನಸು'...

ಕಲಾವಿದರನ್ನು ಗುರುತಿಸುವ ಕಾಯಕ ಶ್ಲಾಘನೀಯ: ಉದಯಕುಮಾರ್ ಶೆಟ್ಟಿ

ಕೋಟ, ನ.26: ಸಂಘಟನೆಗಳಿಂದ ಕಲಾರಾಧನೆ ಹಾಗೂ ಕಲಾವಿದರ ಗುರುತಿಸುವ ಕಾಯಕ ಅತ್ಯಂತ...

ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

ಉಡುಪಿ, ನ.26: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ...

ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.25: ಪ್ರತಿಯೊಬ್ಬರ ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಸದಾ...
error: Content is protected !!