Tuesday, November 26, 2024
Tuesday, November 26, 2024

ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ 2022

ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ 2022

Date:

ಮಂಗಳೂರು: ಪ್ರಸ್ತುತ ಜಾಗತಿಕ ಸವಾಲುಗಳನ್ನು ಅರಿತು ಹೊಸ ಶಿಕ್ಷಣ ನೀತಿಯ ಆವಿಷ್ಕಾರಗಳನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಹಾಗೂ ಶಿಕ್ಷಣಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ತೆರೆಯುವ ದೃಷ್ಟಿಕೋನವನ್ನು ಇರಿಸಿಕೊಂಡು ಕೆನರಾ ಶಿಕ್ಷಣ ಸಂಸ್ಥೆ ಕೂಡ ಹೊಸ ಹೊಸ ಚಿಂತನೆಗಳನ್ನು ಮಾಡುತ್ತಿದೆ.

ಇದಕ್ಕೆ ಪೂರಕ ಎನ್ನುವಂತೆ ಕೆನರಾ ಸಮೂಹ ಸಂಸ್ಥೆಗಳಲ್ಲಿ ಕಲಿತು ವಿವಿಧ ಉನ್ನತ ಕ್ಷೇತ್ರಗಳಲ್ಲಿ ಸೇವೆಯಲ್ಲಿ ನಿರತರಾಗಿರುವ ಹಳೆ ವಿದ್ಯಾರ್ಥಿಗಳಿಗೆ ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಮರುಕಳಿಸುವಂತೆ, ಮರುಸಂಪರ್ಕ ವಾಗುವಂತೆ, ಮರುಸೃಷ್ಟಿ ಗೊಳಿಸುವಂತೆ ಕೆನರಾ ಹೈ ಸ್ಕೂಲ್ ಅಸೋಸಿಯೇಷನ್ ವತಿಯಿಂದ ಜಾಗತಿಕ ಹಳೆ ವಿದ್ಯಾರ್ಥಿಗಳ ಸಮಾವೇಶ ಶನಿವಾರ ಕೆನರಾ ಹೈಸ್ಕೂಲ್ ಗ್ರೌಂಡ್ ನಲ್ಲಿ ನಡೆಯಿತು.

ಟಿ.ವಿ ರಮಣ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಔಪಚಾರಿಕ ಸಮಾವೇಶವನ್ನು ಹಿರಿಯ ವಿದ್ಯಾರ್ಥಿಗಳು ದೀಪವನ್ನು ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು. ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಕೆನರಾ ಸಂಸ್ಥೆಯ ಹಿನ್ನೋಟವನ್ನು ನೀಡುತ್ತಾ ಶಿಕ್ಷಣ ಮತ್ತು ಬ್ಯಾಂಕಿಂಗ್ ತಜ್ಞ, ದೂರ ದೃಷ್ಟಿಯ ಚಿಂತಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು 1891ರಲ್ಲಿ ಸ್ಥಾಪಿಸಿದ ಕೆನರಾ ಶಿಕ್ಷಣ ಸಂಸ್ಥೆಗಳಿಗೆ 131ರ ಹರೆಯ.

ಇಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ಭಾರತದಲ್ಲಿ ಮಾತ್ರವಲ್ಲ ವಿಶ್ವ ಭೂಪಟದಲ್ಲಿ ತಮ್ಮ ಅಚ್ಚಳಿಯದ ಛಾಪನ್ನು ಒತ್ತಿದ್ದಾರೆ. ಇಂದು ಈ ಸಮಾವೇಶದ ಮೂಲಕ ಅವರನ್ನು ಮತ್ತೊಮ್ಮೆ ಕಂಡುಕೊಳ್ಳುವ ಕ್ಷಣ ಅವಿಸ್ಮರಣೀಯವಾದದ್ದು ಎಂದು ಹೇಳುತ್ತಾ ಮುಂದೆ ಕೆನರಾ ಸಂಸ್ಥೆ ಸಾಗಬಹುದಾದ ನೀಲ ನಕಾಶೆಯನ್ನು ವಿವರಿಸಿದರು.

ಕೌಶಲ್ಯ ಆಧಾರಿತ ಶಿಕ್ಷಣದ ಜೊತೆಗೆ, ವೈಜ್ಞಾನಿಕ ಮನೋಭಾವ, ಆವಿಷ್ಕಾರ, ಸಂಪನ್ಮೂಲಗಳ ಕ್ರೋಡೀಕರಣ, ನೈತಿಕ ವಿದ್ಯಾರ್ಥಿ ಸಮೂಹದ ಸೃಷ್ಟಿ, ಜಾಗತಿಕ ಅರಿವು ಮೂಡಿಸುವ ಶಿಕ್ಷಣ, ಉದ್ಯೋಗ ಆಧರಿತ ಕೋರ್ಸ್ ಗಳ ಆರಂಭ, ಕೆನರಾ ವಿಶ್ವವಿದ್ಯಾಲಯದ ಕಲ್ಪನೆಯ ಸಾಕಾರ, ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಮಾವೇಶ ನಡೆಸುವ ಬಗ್ಗೆ, ಈ ಮೂಲಕ ಸದೃಢ ಶಿಕ್ಷಣ ಸಂಸ್ಥೆಯನ್ನಾಗಿಸಿ ರೂಪಿಸುವ ಜವಾಬ್ದಾರಿಗಳ ಬಗ್ಗೆ ಸ್ತೂಲ ಮಾಹಿತಿಯನ್ನು ಒದಗಿಸಿದರು. ನ್ಯಾಯಯುತ ಜೀವನಕ್ಕಾಗಿ ಶಿಕ್ಷಣ ಹಾಗೂ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಧ್ಯೇಯ ಕೆನರಾ ಸಂಸ್ಥೆಯದ್ದು ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿಗಳಾದ ಪ್ರವೀಣ್ ಕಾಮತ್, ಅಶೋಕ್ ಶೆಟ್ಟಿ, ಸ್ನೇಹಾ, ಶೇಷಗಿರಿ ಪೈ ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿದರು. ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವಾಸುದೇವ್ ಹಾಗೂ ಕಾರ್ಯದರ್ಶಿಗಳಾದ ಎಂ ರಂಗನಾಥ್ ಭಟ್, ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಸಂಚಾಲಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿನಿ ಅರ್ಚನಾ ಕಾಮತ್ ಬಾಳಿಗ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಜ್ವಲ್ ಮಲ್ಯ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!