ಸಾಣೂರು, ಸೆ. 27: ನಿಯಮಿತ ಆರೋಗ್ಯ ತಪಾಸಣೆಯಿಂದ ಮನುಷ್ಯನ ಆರೋಗ್ಯ ಸದೃಢವಾಗುತ್ತದೆ. ಆರೋಗ್ಯವಂತ ವ್ಯಕ್ತಿ ಕೂಡ ನಿರಂತರ ಅರೋಗ್ಯ ತಪಾಸಣೆ ಮಾಡಿಸಿದಾಗ ಅರೋಗ್ಯವಾಗಿರಲು ಸಾಧ್ಯ ಎಂದು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಕಾರ್ಕಳ ತಾಲೂಕು ಸಂಚಾಲಕರಾದ ವಿಜಯ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಬಂಟರ ಯಾನೆ ನಾಡವರ ಸಂಘ ಸಾಣೂರು ಇವರ ನೇತೃತ್ವದಲ್ಲಿ ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವರ ಸಹಯೋಗದಲ್ಲಿ ಸಾಣೂರು ಶಿವರಾಮ ರೈ ಕಲಾ ವೇದಿಕೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಟರ ಯಾನೆ ನಾಡವರ ಸಂಘ ಸಾಣೂರು ಇದರ ಗೌರವ ಸಲಹೆಗಾರರು, ಪ್ರಗತಿಪರ ಕೃಷಿಕರಾದ ವಾಸು ಶೆಟ್ಟಿ ಕೆಳಗಿನ ಮನೆ ಕಾರ್ಯಕ್ರಮ ಉದ್ಘಾಟಿಸಿದರು. ಉಚಿತ ಕನ್ನಡಕದ ದಾನಿಗಳಾದ ಸುಂದರ ಶೆಟ್ಟಿ ದುಗಬೆಟ್ಟು ಸಾಣೂರು ಸಮಯೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಡಾ. ವೈಭವ್, ಡಾ. ಯತಾರ್ಥ್ ದತ್ತ, ಬಂಟರ ಸಂಘದ ಅಧ್ಯಕ್ಷರಾದ ಬಿ. ವಿಶ್ವನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಒಟ್ಟು 111 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ವೈದ್ಯರು ಸೂಚಿಸಿದ 52 ಮಂದಿಗೆ ಕನ್ನಡಕ ನೀಡಲಾಯಿತು, 6 ಮಂದಿಗೆ ಉಚಿತ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.