ಉಡುಪಿ: ಯುವ ಜನತೆಯಲ್ಲಿ ಕಾನೂನಿನ ಅರಿವು ಮೂಡಿಸುತ್ತಾ ಅವರನ್ನು ಸುಶಿಕ್ಷಿತರನ್ನಾಗಿ ಮಾಡಿ ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವುದನ್ನು ಬಿಟ್ಟು ಅವರ ಕೈಯಲ್ಲಿ ಆಯುಧಗಳನ್ನು ನೀಡಿ ಧರ್ಮ ರಕ್ಷಣೆಯ ನೆಪದಲ್ಲಿ ಅವರು ಕಾನೂನನ್ನು ಕೈಗೆತ್ತಿಕೊಳ್ಳುವ ಹಾಗೆ ಮಾಡಿ ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಾ ಇರುವುದು ಅತ್ಯಂತ ಖೇದನೀಯ ಎಂದು ಉಡುಪಿ ಸಹಬಾಳ್ವೆ ತಂಡದ ಅಧ್ಯಕ್ಷ ಅಮೃತ್ ಶೆಣೈ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮರಸ್ಯ ನಡಿಗೆ: ದಯೆಯೇ ಧರ್ಮದ ಮೂಲ. ಯಾವ ಧರ್ಮವೂ ಬೋಧಿಸುವುದಿಲ್ಲ, ಯುವ ಜನರು ಧರ್ಮದ ಪಾಲನೆ ಮಾಡಿದರೆ ಧರ್ಮವನ್ನು ರಕ್ಷಿಸಿದ ಹಾಗೆ ಆಗುತ್ತದೆ. ಕರಾವಳಿಯಲ್ಲಿ ಶಾಂತಿ, ಅಹಿಂಸೆ ಹಾಗೂ ಪ್ರೀತಿಯನ್ನು ಎತ್ತಿ ಹಿಡಿಯಲು, ತನ್ಮೂಲಕ ಸಹೋದರತೆ ಹಾಗೂ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಹಬಾಳ್ವೆ ತಂಡದ ವತಿಯಿಂದ ಸಾಮರಸ್ಯ ನಡಿಗೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ಸಮಾನ ಮನಸ್ಕರ ಬೆಂಬಲ ಬೇಕು ಎಂದೂ ಅವರು ತಿಳಿಸಿದ್ದಾರೆ.
ದನ ಕಳ್ಳರಿಗೆ ಮೊದಲು ಹೈನುಗಾರಿಕೆ ಮಾಡಲಿಕ್ಕೆ ಹೇಳಿ