Monday, October 12, 2026
Monday, October 12, 2026

ವಯಸ್ಸಾಗುವುದು ಸಹಜ ಪ್ರಕ್ರಿಯೆ, ಅದು ಸಮಸ್ಯೆಯಲ್ಲ: ಡಾ. ಸಂಪತ್ ಕುಮಾರ್

ವಯಸ್ಸಾಗುವುದು ಸಹಜ ಪ್ರಕ್ರಿಯೆ, ಅದು ಸಮಸ್ಯೆಯಲ್ಲ: ಡಾ. ಸಂಪತ್ ಕುಮಾರ್

Date:

ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗ ಮತ್ತು ಕರ್ನಾಟಕ ಸಮಾಜಶಾಸ್ತ್ರ ಸಂಘದ ಜಂಟಿ ಆಶ್ರಯದಲ್ಲಿ ‘ಸೋಶಿಯಾಲಜಿ ಆಫ್ ಏಜಿಂಗ್ ಥಿಯರೆಟಿಕಲ್ ಅಪ್ರೋಚಸ್ ಆಂಡ್ ಕರಂಟ್ ರೀಸರ್ಚ್ ಟ್ರೆಂಡ್ಸ್’ ಎಂಬ ವಿಷಯದ ಕುರಿತು ರಾಷ್ಟ್ರ‍ೀಯ ವಿಚಾರ ಸಂಕಿರಣ ನಡೆಯಿತು.

ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಹಾಗೂ ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ. ಗುರುಲಿಂಗಯ್ಯರವರು ಉದ್ಘಾಟನೆ ನೆರವೇರಿಸಿದರು. ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಎಸ್. ಸಂಪತ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸ ನೀಡಿದರು.

ಹಿರಿಯ ನಾಗರೀಕರ ರಾಷ್ಟ್ರ‍ೀಯ ನೀತಿಯ ಬಗ್ಗೆ ಬೆಳಕನ್ನು ಚೆಲ್ಲುತ್ತಾ, 2026ರಲ್ಲಿ ಭಾರತದ ಒಟ್ಟು ಜನಸಂಖ್ಯೆಯ ಶೇ 12.17 ರಷ್ಟು 60 ವಯಸ್ಸು ದಾಟಿದವರು ಇರಲಿದ್ದಾರೆ. ಹಲವಾರು ವರ್ಷಗಳ ಹಿಂದೆ ಆಧುನಿಕತೆಯ ಮೊದಲು ಹಿರಿಯ ನಾಗರೀಕರನ್ನು ಒಳ್ಳೆಯ ರೀತಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ಆಧುನಿಕತೆಯ ಅಲೆಯ ಪ್ರಭಾವದಿಂದ ಅವರ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೆಚ್ಚುತ್ತಿರುವುದು ಬೇಸರದ ಸಂಗತಿ. ಇದರಿಂದ ಹಿರಿಯ ನಾಗರೀಕರು ಭಾವನಾತ್ಮಕ, ದೈಹಿಕ, ಭೌತಿಕ ಹಾಗೂ ಆರ್ಥಿಕ ಅಭದ್ರತೆಗೆ ಒಳಗಾಗುವ ಸಾಧ್ಯತೆಗಳಿವೆ.

ವಯಸ್ಸಾಗುವುದು ಒಂದು ಸಹಜ ಪ್ರಕ್ರಿಯೆ, ಅದು ಸಮಸ್ಯೆಯಲ್ಲ ಎಂದು ಅರ್ಥೈಸಿಕೊಳ್ಳುವ ಅಗತ್ಯತೆಯಿದೆ ಎಂದು ಇದಕ್ಕೆ ಸಂಬಂಧಿಸಿದ ಹಲವಾರು ಸಿದ್ಧಾಂತಗಳನ್ನು ವಿವರಿಸಿ ಅವರು ಮಾತನಾಡಿದರು. ನೊಂದುಕೊಳ್ಳುವ ವಯಸ್ಸಾಗುವಿಕೆ ಬೇಡ, ಕ್ರಿಯಾಶೀಲ ವಯಸ್ಸಾಗುವಿಕೆ ಇಂದಿನ ಅಗತ್ಯ ಎಂದರು.

ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಸಮಾಜಕಾರ್ಯ ವಿಭಾಗ ಸಂಯೋಜಕ ಡಾ. ದುಗ್ಗಪ್ಪ ಕಜೆಕಾರ್ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ರಾಘವ ನಾಯ್ಕ್ ಸ್ವಾಗತಿಸಿ, ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಉಮೇಶ್ ಪೈ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ರಾಜೇಶ್ ಉದ್ಘಾಟಕರನ್ನು ಪರಿಚಯಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಶರ್ಮಿಳಾ ಹಾರಾಡಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ

ಮೈಸೂರು, ಅ.11: ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2026ರ ಮೈಸೂರು...

ತಮಿಳುನಾಡಿನಲ್ಲಿ 13,000 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಚೆನ್ನೈ, ಅ.11: ಚೆನ್ನೈನ ಐಐಟಿ-ಮದ್ರಾಸ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರಧಾನಿ ನರೇಂದ್ರ...

ಕಾಪು ಶ್ರೀ ಹೊಸಮಾರಿಗುಡಿ: ಶರನ್ನವರಾತ್ರಿ ಮಹೋತ್ಸವ ಉದ್ಘಾಟನೆ

ಕಾಪು, ಅ.11: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಳದ ಪ್ರಧಾನ...

ಮಾಹೆ ವತಿಯಿಂದ ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ ಮೂಲಕ ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನಾಚರಣೆ

ಮಣಿಪಾಲ, ಅ.11: ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ...
error: Content is protected !!