Saturday, March 21, 2026
Saturday, March 21, 2026

ಮಹಿಳಾ ಪರ ಕಾನೂನುಗಳ ಅರಿವು ಮೂಡಿಸುವುದು ಅಗತ್ಯ: ವಿನಯ

ಮಹಿಳಾ ಪರ ಕಾನೂನುಗಳ ಅರಿವು ಮೂಡಿಸುವುದು ಅಗತ್ಯ: ವಿನಯ

Date:

ಉಪ್ಪೂರು, ಡಿ.30: ಮಹಿಳಾ ಪರ ಹಲವಾರು ಕಾಯ್ದೆಗಳು ಈಗಾಗಲೇ ಜಾರಿಯಲ್ಲಿದ್ದರೂ ಅರಿವಿನ ಕೊರತೆಯಿಂದ ಇದನ್ನು ಸಂಪೂರ್ಣ ಜಾರಿ ಮಾಡುವಲ್ಲಿ ವಿಫಲವಾಗಿವೆ. ಈ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಪ್ರದೇಶದ ಬಡ ಜನರಿಗಾಗಿ ಉಚಿತ ಕಾನೂನು ಸೇವೆಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್‌ ವಕೀಲರಾದ ವಿನಯ ಮಹಿಳೆಯರಿಗೆ ಕರೆ ನೀಡಿದರು.

ಅವರು ಉಪ್ಪೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜ್ಞಾನ ಸಂಜೀವಿನಿ ಒಕ್ಕೂಟದ ಸದಸ್ಯರಿಗಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ ಮಹಿಳಾ ಸಬಲೀಕರಣ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಎಂ.ಎಸ್.ಡಬ್ಲ್ಯು ವಿಭಾಗ ಮುಖ್ಯಸ್ಥರಾದ ಸುಷ್ಮಾ ಟಿ. ಮಾತನಾಡಿ, ಮಹಿಳೆಯರು ಸಮಾಜದ ಪ್ರಮುಖ ಅಂಗವಾಗಿದ್ದಾರೆ. ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೂ ಇನ್ನೂ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ಪುರುಷರ ಸಾಕ್ಷರತಾ ಪ್ರಮಾಣ 82.14% ಆಗಿದೆ, ಮಹಿಳೆಯರ ಸಾಕ್ಷರತಾ ಪ್ರಮಾಣ 65.46% ಆಗಿದೆ. ಈ ಅಂಕಿ ಅಂಶಗಳು ಮಹಿಳಾ ಸಬಲೀಕರಣದ ಅಗತ್ಯವನ್ನು ಸೂಚಿಸುತ್ತದೆ. ಹೊಸ ವಿಷಯಗಳನ್ನು ನಾವು ಕಲಿಯೋಣ ಇನ್ನೊಬ್ಬರಿಗೆ ತಿಳಿಸುತ್ತಾ ಸಬಲರಾಗೋಣ ಎಂದು ಮಹಿಳೆಯರಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಗಾಯತ್ರಿ ವಹಿಸಿಕೊಂಡಿದ್ದು, ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ಯಾರಾಲೀಗಲ್‌ ಸ್ವಯಂಸೇವಕರಾದ ತಿಲೋತ್ತಮ ನಾಯಕ್, ಜ್ಞಾನ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುನೀತಾ, ಜ್ಞಾನ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಸುನಂದಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಪ್ರಥಮ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಾದ ದೀಕ್ಷಿತಾ ಎ.ಆರ್.‌, ವಜ್ರೇಶ್‌ ಆಚಾರ್ಯ, ಸುಜನ್‌ ಮತ್ತು ವಾತ್ಸಲ್ಯ ಇವರು ಆಯೋಜಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮ್ಯಾಜಿಕ್ ಜಾರ್

ನಾವೆಲ್ಲ ದಿನಾಲು ಅನೇಕ ಋಣಾತ್ಮಕ ಭಾವನೆಗಳಿಂದ ತೋಲಾಡುತ್ತಿರುತ್ತೇವೆ. ಭಾರವಾದ ಮನಸ್ಸು, ಕೆಲಸದಲ್ಲಿ...

ತೆಂಕನಿಡಿಯೂರು ಕಾಲೇಜು: ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿಗೆ ಪ್ರಥಮ ರ‍್ಯಾಂಕ್‌

ಉಡುಪಿ, ಮಾ.21: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ಕತಾರ್ ದೊರೆಗೆ ಈದ್ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ, ಮಾ.20: ಪ್ರಧಾನಿ ನರೇಂದ್ರ ಮೋದಿ ಕತಾರ್ ದೊರೆ ಶೇಖ್ ತಮೀಮ್...

ಇಸ್ರೇಲ್‌ನ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಯು.ಬಿ.ಎನ್.ಡಿ., ಮಾ.20: ಹೈಫಾದ ಉತ್ತರ ನಗರದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಇರಾನಿನ...
error: Content is protected !!