Home ಅಂಕಣ ಋತುಮಾನದ ಮಬ್ಬಿನಲ್ಲಿ

ಋತುಮಾನದ ಮಬ್ಬಿನಲ್ಲಿ

ಮಳೆ ಹನಿಗಳ ಜೊತೆಗಿನ ಪಯಣ

525
0

ಮುಂಜಾನೆ ಹೊತ್ತಿನ ನಿಸರ್ಗದ ಸುತ್ತ ಮಂಜಿನ ಹೊದಿಕೆ ಅದೆಷ್ಟು ಸುಂದರವಾಗಿ, ಶಾಂತವಾಗಿ ಹೊದ್ದುಕೊಂಡಿರುತ್ತದೆ.. ಮೈ ಮರಗಟ್ಟಿಸುವ ಚಳಿಯ ಮಧ್ಯೆ ಅದೇನೋ ಬೆಚ್ಚನೆಯ ಗಾಳಿ ಮೈ ಸೋಕಿ ಹೋದ ಅನುಭವ. ಒಮ್ಮೊಮ್ಮೆ ಮಾನವನಾಗಿರುವ ಬದಲು ನಾನು ಒಂದು ಮರವಾಗಿಯೋ, ಕಾಡಾಗಿಯೋ, ಅಥವಾ ಬೆಟ್ಟ ಆಗಿದ್ರೆ ಹೇಗಿರುತ್ತಿತ್ತು ಅನ್ನೋ ಒಂದು ಕಲ್ಪನೆ ಹುಟ್ಟಿಕೊಳ್ಳುತ್ತದೆ.

ವರ್ಷಾ ಋತು ಅಂದರೆ ಮಳೆಗಾಲದ ಕಾಲ. ಆಷಾಢ ಮಾಸ ಬಂತೆಂದರೆ ಮಳೆಗಾಲ ಆರಂಭವಾದಂತೆ. ಅಂದರೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳ ಅವಧಿಯಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಇನ್ನೂ ನಮ್ಮ ಮಕ್ಕಳ ಸೈನ್ಯದ ಪ್ರಕಾರ ಮಳೆ ಅಂದ್ರೆ ಆಟ, ಮೋಜು ಮಸ್ತಿ. ನಾವು ಮಳೆ ಬರಲಿಲ್ಲ ಅಂದ್ರೆ ಬೇಕಾದಾಗ ಮಳೆ ಬರೋದೆ ಇಲ್ಲ.. ಅಂದ್ರೆ ಇನ್ನೂ ಮಳೆ ಸ್ವಲ್ಪ ಜೋರಾಗಿ ಬಂದ್ರೆ ಇಲ್ಲ ಅಂತ ಟೈಂ ನಲ್ಲಿ ಕರೆಂಟ್ ಹೋದ್ರೆ ಅಯ್ಯೋ ಮಳೆ ಜೊತೆಗೆ ಕರೆಂಟ್ ಕಟ್ ಮಾಡಿದವರಿಗೂ ಸರಿ ಬೈಗುಳ. ಮಳೆ ಅಂದಾಗ, ನೀರಿನ ಜೊತೆ ಅಡೋ ಆಟದ ಜೊತೆ ಮಳೆಗಾಲದಲ್ಲಿ ಬರೋ ಬಗೆ ಬಗೆಯ ತಿಂಡಿ, ಜ್ವರ ಎಲ್ಲ ನೆನಪಾಗುತ್ತೆ.

ಹಾಗೆ ಮಳೆ, ಮಳೆಗಾಲ ಅಂದ್ರೆ ಮೊದಲು ನೆನಪಾಗೋದೆ ಮಳೆ ಮತ್ತು ಮಳೆ ನಿಂತ ಮೇಲೆ ಬರುವ ಘಮನೆಯ ಮಣ್ಣಿನ ಪರಿಮಳ. ಹಾಗೆ ನಮ್ಮ ಮಲೆನಾಡು ಪ್ರದೇಶ, ಅಲ್ಲಿನ ಪ್ರಕೃತಿಯ ಅಮೋಘ ಸೌಂದರ್ಯ, ಹಸಿರು ಬಣ್ಣದ ಓಕುಳಿ ಮಲೆನಾಡ ಮೈತುಂಬ ಚೆಲ್ಲಿ ಸುತ್ತಲ ಪ್ರದೇಶವನ್ನ ಹಸಿರ ಸ್ವರ್ಗವನ್ನಾಗಿಸಿ ಕಣ್ಣನ ತಂಪು ಮಾಡಿದ್ರೆ ನಮ್ಮ ಮನಸನ್ನು ಅತ್ತಿತ ಎತ್ತ ಹೋಗದ ಹಾಗೆ ಸೆರೆಮಾಡಿಕೊಳುತ್ತದೆ. ಮುಂಜಾನೆ ಹೊತ್ತಿನ ನಿಸರ್ಗದ ಸುತ್ತ ಮಂಜಿನ ಹೊದಿಕೆ ಅದೆಷ್ಟು ಸುಂದರವಾಗಿ, ಶಾಂತವಾಗಿ ಹೊದ್ದುಕೊಂಡಿರುತ್ತದೆ.. ಮೈ ಮರಗಟ್ಟಿಸುವ ಚಳಿಯ ಮಧ್ಯೆ ಅದೇನೋ ಬೆಚ್ಚನೆಯ ಗಾಳಿ ಮೈ ಸೋಕಿ ಹೋದ ಅನುಭವ. ಒಮ್ಮೊಮ್ಮೆ ಮಾನವನಾಗಿರುವ ಬದಲು ನಾನು ಒಂದು ಮರವಾಗಿಯೋ, ಕಾಡಾಗಿಯೋ, ಅಥವಾ ಬೆಟ್ಟ ಆಗಿದ್ರೆ ಹೇಗಿರುತ್ತಿತ್ತು ಅನ್ನೋ ಒಂದು ಕಲ್ಪನೆ ಹುಟ್ಟಿಕೊಳ್ಳುತ್ತದೆ.

ಇನ್ನು ನಾನಂತೂ ಮಳೆಗಾಲ ಬರೋದನ್ನ ಕಾಯ್ತಾ ಇರ್ತೇನೆ, ಕಾರಣ ಮಳೆಯಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಾ ಮೈಂಡ್ನಲ್ಲಿ ಪ್ಲೇ ಮಾಡ್ತಾ ನೆನೆಯೋ ಮಜಾ ಇದೆ ಅಲ್ಲ ಅಬ್ಬಾ.. ಮೈಮೇಲೆ ಹನಿಗಳ ಸಾಲು ನಾ ಮುಂದೂ ತಾ ಮುಂದು ಅಂತ ಧೋ ಎಂದು ಸುರಿವಾಗ ಆಗೋ ಸಂತೋಷ ಅದರ ಜೊತೆಗೆ ಮೊದಲ ಮಳೆ ಹನಿ ಇಂದ ಕೊನೆ ಹನಿಯಲ್ಲಿರೋ ಪ್ರೀತಿಯ ಚಳಿ ಮೈ ಸೋಕಿದಾಗ ಆಗೋ ಅನುಭವ ಮಳೆಯನ್ನ ಪ್ರೀತಿಯಿಂದ ಬರಮಾಡಿಕೊಳ್ಳುವ ವರ್ಷಪ್ರಿಯರಿಗೆ ಗೊತ್ತು. ಇನ್ನು ನಮಗೆ ಬೇಕಾದ ಹಾಗಿದೆ ಅನ್ನುವಷ್ಟರಲ್ಲಿ ಅಮ್ಮನ ಜೋರಾದ ಒಂದು ಕೂಗು “ಅಮಿ ನಿಂಗೆ ಏನ್ ಹಿಡಿದಿರೋದು ಮಳೆಲ್ಲಿ ಯಾಕೆ ನೆನಿತ ಇದ್ಯ? ಒಳಗ್ ಬಾ, ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಬೇಗ ಬಾ ಇಲ್ಲ ನನ್ ಬಂದ್ರೆ ಅಷ್ಟೇ ಈಗ” ಅನ್ನೋ ಕರೆ ಕಾಲಿ ಕರೆ ಅಲ್ಲ ಸ್ವಾಮಿ ಬೆದರಿಕೆಯ ಕರೆ. ಈ ಬೈಗುಳ ಸಾಕಾಗಿರಲಿಲ್ಲ ಅಂತ ಇನ್ನೂ ಈ ಕೊರೋನ ಬಂದು ಮತ್ತೆರಡು ಬೈಗುಳಗಳನ್ನು ಸೇರ್ಪಡೆ ಮಾಡಿದೆ.

ಒಳಗ್ ಬಂದ ಕೂಡ್ಲೇ ಅಮ್ಮ ಸುಪ್ರಭಾತ ಹಾಡಿದ್ರೆ ಅಡುಗೆ ಮನೆಯಿಂದ ನನ್ನ ಪ್ರೀತಿಯ ಅಮ್ಮಾಮ (ಅಜ್ಜಿ) ಬಾ ಮಗ ಕಾಫಿ ಮಾಡು, ನಾನು ಬಜ್ಜಿ ಏನಾದ್ರೂ ಮಾಡ್ತೆ ಅಂತ ಹೇಳೋದೆ ತಡ ನಾನು ಅಲ್ಲಿಗೆ ‘ಅಮ್ಮ ನಿಂಗೂ ಕಾಫಿ ಬೇಕ..!? ಅಂತ ಕೇಳಿ ಮಸ್ಕಾ ಹಾಕಿ ನನ್ನ ಸೂಕ್ಷ್ಮ ಕರ್ಣಗಳನ್ನ ಕಾಪಾಡಿಕೊಂಡು ನೈಸ್ ಆಗಿ ಅಲ್ಲಿಂದ ಜಾಗ ಕಾಲಿ ಮಾಡ್ತಿದ್ದೆ. ಮಳೆಗಾಲ ಅಂದ್ರೆ ಹೇಳ್ಬೇಕ ಎಲ್ಲರ ಮನೆಯಲ್ಲೂ ಮಳೆಗಾಲಕಂತನೆ ಹಪ್ಪಳ, ಸಂಡಿಗೆ , ಉಪ್ಪಿನಕಾಯಿ ಇತ್ಯಾದಿಗಳನ್ನೆಲ್ಲ ಒಂದೆರಡು ತಿಂಗಳ ಮುಂಚೆನೇ ತಯಾರು ಮಾಡಿ ಇಟ್ಟುಕೊಳ್ಳೋದೂ ನಮ್ಮ ಭಾರತೀಯ ಹೆಂಗಳೆಯರ ಗುಣ.

ಇನ್ನು ಮಳೆಗಾಲದಲ್ಲಿ ಸಣ್ಣ ಪುಟ್ಟ ಕೆಮ್ಮು, ಶೀತಗಳಿಂದ ಹಿಡಿದು, ಕೆಲವೊಂದು ಬಗೆಯ ಜ್ವರಗಳಿಗೂ ಮನೆ ಮದ್ದನ್ನು ಸಿದ್ದ ಮಾಡಿ ಇಟ್ಟುಕೊಳ್ತರೆ. ಮಳೆಗಾಲ ಶುರು ಆಗಿದೆ, ಮಳೆಯ ಜೊತೆಗಿನ ಆಟ, ಮೋಜು, ಮಸ್ತಿಯ ಜೊತೆ, ಒಂದು ತಕೊಂಡ್ರೆ ಇನ್ನೊಂದು ಫ್ರೀ ಅನ್ನೋ ಕಾಯಿಲೆ ಸಾಕ್ಕಾಗಿಲ್ಲ ಅಂತ ಇನ್ನೂ ಹೊಸ ಬಗೆಯ ಕಾಯಿಲೆಗಳು ಸೇರಿಕೊಂಡಿವೆ. ಆ ಕಾಯಿಲೆ ಯಾವುದೆಲ್ಲ ಅಂತ ನಮಗೆಲ್ಲರಿಗೂ ಈಗಾಗಲೇ ಗೊತ್ತಿದೆ, ಹಾಗಾಗಿ ಮತ್ತೆ ಅದರ ಮಾತು ಯಾಕೆ ಅಲ್ವಾ.

ಕಾಲ ಹೋಗ್ತಾ ಎಲ್ಲ ಸರಿ ಆಗ್ತದೆ ಅನ್ನೋ ನಂಬಿಕೆ ಜೊತೆಗೆ ಆರೋಗ್ಯ ರಕ್ಷಣೆಯ ಬಗೆಗಿನ ಜಾಗೃತಿಯನ್ನು ಮೈಗೂಡಿಸಿಕೊಂಡು ಮಳೆಯ ಜೊತೆಗಿನ ಹಳೆ ನೆನಪಿನ ಜೊತೆ ಹೊಸ ನೆನಪನ್ನು ಪೋಣಿಸುತ್ತ ಹೋಗೋಣ. ಒಟ್ಟಿನಲ್ಲಿ ಹೇಳುವುದಾದರೆ ಮಳೆಗಾಲ ಎಂದರೆ ಚಟುವಟಿಕೆಯ ಕಾಲ. ಪ್ರಕೃತಿಯೊಡನೆ ಮಾನವ ಬೆರೆಯಲು ಪ್ರಶಸ್ತವಾದ ಕಾಲ. ಹೇಳಲೂ ಬೇಕಾದಷ್ಟಿದೆ, ಅದರ ಜೊತೆ ಹೊಸ ಅನುಭವಗಳನ್ನು ಪಡೆದುಕೊಳ್ಳುವ ಸಮಯನೂ ಬಂದಿದೆ. ಮಳೆಯ ಜೊತೆ ಮತ್ತೆ ಸ್ನೇಹ ಬೆಳೆಸೋ ಕಾಲ, ಪ್ರಕೃತಿಯ ಜೊತೆ ಒಂದಾಗಿ ಬೆರೆತು ಹೋಗುವ ಸುಂದರ ಕಾಲ ಈ ವರ್ಷ ಕಾಲ. ಮತ್ತೊಮ್ಮೆ ಹೊಸ ಮಳೆಗಾಲ ಬಂದಿದೆ.

ಮಹಾಲಕ್ಷ್ಮೀ ದೇವಾಡಿಗ
ದ್ವಿತೀಯ ಬಿಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ವಿಭಾಗ
ಎಂಜಿಎಂ ಕಾಲೇಜು ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.