Tuesday, November 26, 2024
Tuesday, November 26, 2024

ಸಮಾನ ನಾಗರಿಕ ಸಂಹಿತೆ ಅನುಷ್ಠಾನ ಇಂದಿನ ಅನಿವಾರ್ಯತೆ?

ಸಮಾನ ನಾಗರಿಕ ಸಂಹಿತೆ ಅನುಷ್ಠಾನ ಇಂದಿನ ಅನಿವಾರ್ಯತೆ?

Date:

ಕರಾಷ್ಟ್ರ ಏಕ ಸಂವಿಧಾನ; ಏಕ ತೆರಿಗೆ; ಏಕ ಚುನಾವಣೆ ಏಕ ಪಡಿತರ ಚೀಟಿ.. ಹೀಗೆ ಎಲ್ಲವನ್ನು ಏಕತೆಯ ರೂಪದಲ್ಲಿ ಆಲೇೂಚಿಸುವ ಕಾಲಘಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ಸಂದರ್ಭದಲ್ಲಿ ಸಂವಿಧಾನ ಒಪ್ಪಿಕೊಂಡ ದಿನದಿಂದಲೇ ಕೇಳಿ ಬರುತ್ತಿದ್ದ ಪ್ರಮುಖ ವಿಚಾರವೆಂದರೆ ‘ಸಮಾನ ನಾಗರಿಕ ಸಂಹಿತೆ’. ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಕೂಡಾ ಬಲವಾಗಿ ಪ್ರತಿಪಾದಿಸಿದ ವಿಚಾರವೆಂದರೆ ಸಮಾನ ನಾಗರಿಕ ಸಂಹಿತೆ. ಜಾತಿ ಧರ್ಮ ರಾಜಕೀಯ ತುಷ್ಟೀಕರಣದ ಪರಿಸ್ಥಿತಿಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಣೆಪಟ್ಟಿ ಕಟ್ಟಿಕೊಂಡವರು ಸಮಾನ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸುವ ನಿರ್ಧಾರಕ್ಕೆ ಬರಲೇ ಇಲ್ಲ.

ಅಂಬೇಡ್ಕರಂತಹ ದೂರದರ್ಶಿತ್ವ ಉಳ್ಳ ಕಾನೂನು ತಜ್ಞರು ರಾಷ್ಟ್ರೀಯ ಏಕತಾ ಹಿತ ದೃಷ್ಟಿಯಿಂದ ‘ಕಾಮನ್ ಸಿವಿಲ್ ಕೇೂಡ್’ ಇಂದಿನ ಅಗತ್ಯತೆ ಎಂದು ಬಲವಾಗಿ ಪ್ರತಿಪಾದಿಸಿ ಕೊನೆಗೂ ಭಾರತ ಸಂವಿಧಾನದ ಭಾಗ 1V ಅನುಚ್ಛೇದ 44ರ ರಾಜ್ಯ ನಿರ್ದೇಶಿತ ತತ್ವಗಳ ಭಾಗದಲ್ಲಿ ಸಮಾನ ನಾಗರಿಕ ಸಂಹಿತೆ ಸೇರಿಸಲು ಸಫಲರಾದರು. ಸಂವಿಧಾನದಲ್ಲಿ ಸೇರಿಸಿದ ಮಾತ್ರಕ್ಕೆ ಅದು ಅನುಷ್ಠಾನ ವಾಗುವುದಿಲ್ಲ. ಸರಕಾರ ಅದನ್ನು ಪರಿಗಣಿಸಿ ಕಾರ್ಯರೂಪಕ್ಕೆ ತರಬೇಕು. ಸಂವಿಧಾನದ ರಾಜ್ಯ ನಿರ್ದೇಶಿತ ಭಾಗ ಕೇವಲ ಸರಕಾರಕ್ಕೆ ಸಲಹೆ ನಿರ್ದೇಶನ ಕೊಡುತ್ತದೆ ಬಿಟ್ಟರೆ, ಮಾಡಲೇಬೇಕೆನ್ನುವ ಅಧಿಕಾರಯುಕ್ತವಾದ ಭಾಗ ಅದಾಗಿರಲಿಲ್ಲ. ಹಾಗಾಗಿ ನೆಹರೂ ಸರಕಾರದಿಂದ ಹಿಡಿದು ಇಂದಿನ ತನಕ ಇದು ಬರೇ ವೊಟ್ ಬ್ಯಾಂಕಿನ ವಿಷಯ ಎಂಬಂತೆ ಚರ್ಚೆಗೆ ಗ್ರಾಸವಾಗುತ್ತಾ ಬಂತು ಬಿಟ್ಟರೆ ಅನುಷ್ಠಾನದ ಕಡೆಗೆ ಯಾರು ಕೂಡಾ ಇಚ್ಛಾಶಕ್ತಿ ಮೆರೆಯಲೇಇಲ್ಲ.

ಮೊದಲ ಕಾನೂನು ಸಚಿವರಾಗಿದ್ದ ಬಿ.ಆರ್.ಅಂಬೇಡ್ಕರ್ ಸಂಸತ್ತಿನಲ್ಲಿ ಬಲವಾಗಿ ಪ್ರತಿಪಾದಿಸಿದರೂ ಕೂಡಾ ಇದನ್ನು ಒಪ್ಪಲೇ ಇಲ್ಲ ನೆಹರೂ ಸರ್ಕಾರ. ಕೊನೆಗೂ ಮನನೊಂದ ಡಾ.ಬಿ.ಆರ್.ಅಂಬೇಡ್ಕರ್ ರಾಜೀನಾಮೆ ಕೊಟ್ಟು ಹೊರಗೆ ಬರಬೇಕಾದ ಪರಿಸ್ಥಿತಿ. ಹಲವು ಬಾರಿ ನ್ಯಾಯಾಂಗ ಕೂಡಾ ಸಮಾನ ನಾಗರಿಕ ಸಂಹಿತೆ ಅನುಷ್ಠಾನದ ಕಡೆಗೆ ಒಲವು ತೇೂರಬಹುದು ಎಂಬ ಹಸಿರು ನಿಶಾನೆ ತೇೂರಿಸಿದಾಗಲೂ ಕೂಡಾ ಆಡಳಿತರೂಢ ಪಕ್ಷಗಳು ಅಲ್ಪಸಂಖ್ಯಾತರ ಮತಗಳು ಎಲ್ಲಿ ಕೈ ಬಿಟ್ಟು ಹೇೂಗುತ್ತದೋ ಎಂಬ ಹೆದರಿಕೆಯಲ್ಲಿಯೇ ಚುನಾವಣೆಗಳನ್ನು ಎದುರಿಸಿಕೊಂಡು ಬಂದವು. ಅದೇ ಬಿಜೆಪಿ ಮಾತ್ರ ಪ್ರತಿ ಚುನಾವಣೆಯ ಪ್ರಣಾಳಿಕೆಯಲ್ಲಿ ತಪ್ಪದೇ ಇದನ್ನು ನಮೂದಿಸಿಕೊಂಡು ಬಂತು. ಆದರೆ ಅವರು ಕೂಡಾ ಹೆಚ್ಚೇನು ಬಹುಮತ ಪಡೆಯದ ಸಂದರ್ಭದಲ್ಲಿ ಈ ಕುರಿತಾಗಿ ದಿಟ್ಟ ನಿರ್ಧಾರದ ಕಡೆ ದೃಷ್ಟಿ ಹರಿಸಲೇ ಇಲ್ಲ.

ಆದರೆ ಈಗ ಸಂಸತ್ತಿನ ಎರಡು ಸದನಗಳಲ್ಲಿ ನಿಚ್ಚಳ ಬೆಂಬಲವಿರುವ ಕಾರಣ ಸಮಾನ ನಾಗರಿಕ ಸಂಹಿತೆಯ ಕುರಿತಾಗಿ ಧ್ವನಿ ಎತ್ತಲು ಶುರು ಮಾಡಿದೆ. ಮಾತ್ರವಲ್ಲ ಇದಕ್ಕೆ ಪೂರಕವಾಗಿ ಇತ್ತೀಚಿಗೆ ಡಿಲ್ಲಿ ಹೈಕೇೂರ್ಟು ಕೂಡಾ ಸಮಾನ ನಾಗರಿಕ ಸಂಹಿತೆಯ ಅನುಷ್ಠಾನದ ಕಡೆಗೆ ಯಾಕೆ ಗಮನಹರಿಸಬಾರದು ಅನ್ನುವ ತರದಲ್ಲಿ ಕೇಂದ್ರ ಸರಕಾರಕ್ಕೆ ನಿರ್ದೇಶನಾತ್ಮಕ ಸಲಹೆ ನೀಡಿರುವುದು ಕೇಂದ್ರ ಸರಕಾರಕ್ಕೆ ಇನ್ನಷ್ಟು ಕಾನೂನು ಮತ್ತು ನೈತಿಕ ಬಲ ತಂದಿದೆ ಎಂದೇ ಹೇಳಬೇಕಾಗಿದೆ.

ಹಾಗಾದರೆ ಸಮಾನ ನಾಗರಿಕ ಸಂಹಿತೆ ಹೇಗಿರಬೇಕು?

1. ಸಮಾನ ನಾಗರಿಕ ಸಂಹಿತೆ ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಹಿತವನ್ನು ಕಾಪಾಡುವ ಉದ್ದೇಶದಿಂದಲೇ ರೂಪಿತವಾಗಬೇಕಾದ ಕಾನೂನು ಅನ್ನುವುದನ್ನು ಸಂವಿಧಾನವೇ ಸ್ವಷ್ಟಪಡಿಸಿದೆ. ಇದನ್ನು ಯಾರು ಅಲ್ಲಗಳೆಯುವ ಹಾಗಿಲ್ಲ. ಮಾತ್ರವಲ್ಲ ತಪ್ಪಾಗಿ ಅರ್ಥೈಸಬಾರದು. 2. ಸಮಾನ ನಾಗರಿಕ ಸಂಹಿತೆ ಪ್ರತಿಯೊಬ್ಬ ನಾಗರಿಕನು ರಾಷ್ಟ್ರೀಯ ಬದುಕಿಗೆ ಸಂಬಂಧಿಸಿ ಹೇಗೆ ಬದುಕನ್ನು ಕಟ್ಟಿಕೊಂಡು ನಡೆಯಬೇಕೆನ್ನುವುದನ್ನು ಖಾತ್ರಿಪಡಿಸುತ್ತದೆ. ಇದರ ಅರ್ಥ ನಾವೆಲ್ಲರೂ ಒಂದೇ ದೇವರನ್ನು ಪೂಜಿಸಬೇಕು. ಒಂದೇ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಳ್ಳಬೇಕು. ಒಂದೇ ತರದ ಬಟ್ಟೆ ಧರಿಸಬೇಕು ಒಂದೇ ತರದ ಆಹಾರ ತಿನ್ನಬೇಕು ಅನ್ನುವ ಸಂಹಿತೆ ಅಲ್ಲವೇ ಅಲ್ಲ. 3. ಕಾನೂನಿನ ಎದುರು ಎಲ್ಲರೂ ಸಮಾನರೇ ಅದು ಗಂಡಿರಬಹುದು ಹೆಣ್ಣಿರಬಹುದು..ಯಾವುದೇ ಜಾತಿ ಮತ ಧರ್ಮದವರಿರಬಹುದು. ಸಮಾನ ತಪ್ಪಿಗೆ ಸಮಾನ ಶಿಕ್ಷೆ.

4. ಅದು ಸಾರ್ವಜನಿಕ ಸೇವಾ ವಲಯದಲ್ಲಿ ನಾವು ತೊಡಗಿಸಿಕೊಳ್ಳಬೇಕಾದ ಸಂದರ್ಭದಲ್ಲಿ ನಮ್ಮ ವಸ್ತ್ರ ಸಂಹಿತೆ ಇರಬಹುದು ಅಥವಾ ನಮ್ಮ ಧಾರ್ಮಿಕ ನಂಬಿಕೆಗಳಿರಬಹುದು. ಉದಾ: ಸಂಸತ್ತಿನ ಒಳಗೆ ಇರುವಾಗ ಯಾರು ಕೂಡಾ ಶಸ್ತ್ರಾಸ್ತ್ರಗಳನ್ನು ಒಯ್ಯಬಾರದು ಅನ್ನುವ ಕಾನುಾನು ಇರುವಾಗ ಸಿಖ್ ಧರ್ಮದವರು ಇಲ್ಲ ನಮಗೆ ನಾವು ಹೇೂಗುವ ಕಡೆಯಲ್ಲಿ ಈ ಮೂರು “ಕ” ನಾವು ಒಯ್ಯಲೇ ಬೇಕು ಅಂದರೆ ಕೇಶ, ಖಡ್ಗ, ಕೃಪಣ ಅದು ನಮ್ಮ ಧರ್ಮದ ರಿವಾಜು ಎಂದು ವಾದಿಸಿದರೆ ಹೇಗೆ? ಅವರು ವಾದಿಸಿದ್ದಾರೆ ಅನ್ನುವ ಅರ್ಥವಲ್ಲ, ವಾದಿಸಿದರೇ ಅನ್ನುವುದು ಪ್ರಶ್ನೆ. 5. ರಾಷ್ಟ್ರದ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಣಯಗಳು ಅದು ರಾಷ್ಟ್ರಭದ್ರತಾ ದೃಷ್ಟಿಯಿಂದ ಇರಬಹುದು, ಆರ್ಥಿಕ ದೃಷ್ಟಿಯಿಂದ ಇರಬಹುದು, ಶೈಕ್ಷಣಿಕ ನೀತಿಗಳಿರಬಹುದು, ಇತ್ಯಾದಿ. ಇದನ್ನು ಎಲ್ಲರೂ ಸಮಾನವಾಗಿ ಗೌರವಿಸುವುದರೊಂದಿಗೆ ಅನುಷ್ಠಾನ ಗೊಳಿಸಬೇಕು.

6. ಸಮಾನ ನಾಗರಿಕ ಸಂಹಿತೆಯ ಹೆಸರಿನಲ್ಲಿ ವೈಯುಕ್ತಿಕ ಹಾಗೂ ಖಾಸಗಿ ಹಕ್ಕುಗಳಿಗೆ ಸ್ವಲ್ಪವೂ ಚ್ಯುತಿ ಬಾರದಂತೆ ಜಾಗೃತಿ ವಹಿಸಬೇಕಾದದ್ದು ಅಷ್ಟೇ ಅಗತ್ಯ. ಆದುದರಿಂದ ಸಮಾನ ನಾಗರಿಕ ಸಂಹಿತೆಯ ಹಿಂದಿರುವ ಮೂಲ ಉದ್ದೇಶಗಳನ್ನು ಪ್ರತಿಯೊಬ್ಬರಿಗೂ ಮೊದಲು ಅರ್ಥೈಸಿ ಅನಂತರದಲ್ಲಿ ಅನುಷ್ಠಾನ ಮಾಡಬೇಕು. ಈ ಕುರಿತಾಗಿ ಸಾಕಷ್ಟು ಗೊಂದಲ ಹೆದರಿಕೆ ಸೃಷ್ಟಿಸುವವರು ಸಾಕಷ್ಟು ಮಂದಿ ಇದ್ದಾರೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಿ ಅನ್ನುವುದು ಪ್ರಬುದ್ಧ ನಾಗರಿಕರ ಒತ್ತಾಸೆಯೂ ಹೌದು.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!