Home ಅಂಕಣ ಸ್ಥಳೀಯ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಿ, ದೇಶೀಯ ಸಂಸ್ಕೃತಿ ಉಳಿಸಿ

ಸ್ಥಳೀಯ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಿ, ದೇಶೀಯ ಸಂಸ್ಕೃತಿ ಉಳಿಸಿ

324
0

ರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯವರೆಗೆ ಸಂಜೆ ಹೊತ್ತು ದೇವರಿಗೆ ದೀಪ ಬೆಳಗಿಸಿದ ನಂತರ ನಾವು ಗೂಡುದೀಪಗಳನ್ನು ಹಚ್ಚುವ ಸಂಪ್ರದಾಯ ನಿನ್ನೆ ಮೊನ್ನೆಯದಲ್ಲಾ, ಭಾರತೀಯ ಹಬ್ಬ ಹರಿದಿನಗಳಲ್ಲಿ ಆಯಾ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಜನರು ತಾವೇ ತಯಾರಿಸುತ್ತಿದ್ದ ಅಥವಾ ಸ್ಥಳೀಯವಾಗಿ ಖರೀದಿ ಮಾಡುತ್ತಿದ್ದ ಕಾಲ ಒಂದಿತ್ತು.

ಆ ಮೂಲಕ ಆರ್ಥಿಕ ವಹಿವಾಟು ದೇಶದ ಒಳಗೆಯೇ ನಡೆಯುತ್ತಿತ್ತು, ದೇಶೀಯ ಕುಶಲಕರ್ಮಿಗಳಿಗೂ ತಮ್ಮ ಕೌಶಲ್ಯಕ್ಕೆ ಸರಿಯಾದ ಮಾರುಕಟ್ಟೆ ಮತ್ತು ಪ್ರೋತ್ಸಾಹ ಸಿಗುತ್ತಿತ್ತು, ಆದರೆ ಇಂದು ಬಹುತೇಕ ನಾವು ಆಚರಿಸುವ ಹಬ್ಬಗಳಿಗೆ ವಿದೇಶೀ ಸಾಮಗ್ರಿಗಳು ಲಗ್ಗೆ ಇಟ್ಟಿವೆ, ಬಣ್ಣ ಬಣ್ಣದ ತರಹತರಹದ ಸಾಮಗ್ರಿಗಳು ನಮ್ಮನ್ನು ಕೈಬೀಸಿ ಕರೆಯುತ್ತಿವೆ.

ದೋಸೆಯ ಬಂದದಿಂದ ಹಿಡಿದು ಮಾವಿನ ಎಳೆಯ ಕುಡಿಯವರೆಗೆ ಎಲ್ಲವೂ ರೆಡಿಮೇಡ್ ಆಗಿ ಸಿಗುವ ಈ ಕಾಲಘಟ್ಟದಲ್ಲಿ, ನಮಗೂ ಕೆಲಸ ಕಡಿಮೆ ಆಗಬೇಕು ಮತ್ತು ಸುಲಭವಾಗಿ ಆಗಬೇಕು ಎನ್ನುವ ನಮ್ಮ ಮಾನಸಿಕತೆಯ ಕಾರಣಕ್ಕೆ ನಮ್ಮ ದೇಶೀಯತೆ ಹಾಳಾಗುವುದು ಬೇಡ.

ನಾನು ಈಗ ಕೆಲವು ಹೊತ್ತು ಮೊದಲು ಮಿತ್ರ ತೇಜಸ್ವಿಯ ಜೊತೆ ಉಡುಪಿ ರಥಬೀದಿಗೆ ಹೋಗಿದ್ದೆ, ಒಬ್ಬ ವ್ಯಕ್ತಿ ಸಾಂಪ್ರದಾಯಿಕ ಗೂಡುದೀಪಗಳನ್ನು ಮಾರುತ್ತಿರುವುದನ್ನು ನೋಡಿದೆ, ಹೋಗಿ ಮಾತನಾಡಿಸಿದೆ ಹೆಸರು ಅರುಣ್, ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ಎಂದು ತಿಳಿಯಿತು.

ತಾನು ಮತ್ತು ತನ್ನ ಮನೆಮಂದಿ ಸೇರಿ 500 ಕ್ಕೂ ಹೆಚ್ಚಿನ ಸಾಂಪ್ರದಾಯಿಕ ಗೂಡುದೀಪ ತಯಾರಿಸಿರುವುದಾಗಿ ಹೇಳಿದರು, ಜನರ ಪ್ರತಿಕ್ರಿಯೆ ಹೇಗಿದೆ ಎಂದು ಕೇಳಿದಾಗ ಅಷ್ಟೊಂದು ಸಮಾಧಾನಕರವಾಗಿಲ್ಲ ಎನ್ನುವ ಉತ್ತರ ಸಿಕ್ಕಿತು.

ಆತ್ಮನಿರ್ಭರತೆ ಎನ್ನುವುದು ಯಾರೋ ಹೇಳಿ ಗೊತ್ತಾಗುವ ವಿಚಾರವಲ್ಲ ಸ್ವಾಭಿಮಾನಿ ವ್ಯಕ್ತಿಗೆ ರಕ್ತಗತವಾಗಿರುತ್ತದೆ. ಹಾಗಾಗಿ ಈ ಮನುಷ್ಯನ ಸ್ವಾಭಿಮಾನದ ಬಗ್ಗೆ ಖುಷಿ ಆಯಿತು, ಸೋ ಹೀಗೆ ಬರೆಯುವ ಯೋಜನೆ ಬಂತು. ಸಾಂಪ್ರದಾಯಿಕ ಗೂಡುದೀಪ ರಚನೆ ಅಷ್ಟು ಸುಲಭವಲ್ಲ ಒಂದು ಗೂಡುದೀಪ ಮಾಡಲು ಕನಿಷ್ಠ 2 ದಿನ ಬೇಕು ಹಾಗಾದರೆ 500 ಗೂಡುದೀಪ ರಚನೆಯ ಹಿಂದಿರುವ ಇವರ ಪರಿಶ್ರಮದ ಬಗ್ಗೆ ಒಮ್ಮೆ ಯೋಚನೆ ಮಾಡಿ.

ನಿಮ್ಮಲ್ಲಿ ಕೆಲವರು ಈಗಾಗಲೇ ಗೂಡುದೀಪಗಳನ್ನು ಖರೀದಿ ಮಾಡಿರಬಹುದು. ಆದರೆ ಇನ್ನೂ ಹಲವರು ಗೂಡುದೀಪ ಖರೀದಿಸದೆ ಯಾರಾದರೂ ಇದ್ದರೆ ದಯವಿಟ್ಟು ಇವರನ್ನು ಈ ನಂಬರ್ ನ ಮೂಲಕ ಸಂಪರ್ಕಿಸಿ. ಉಡುಪಿಯ ರಥಬೀದಿಯಲ್ಲಿ ಸದ್ಯಕ್ಕೆ ಮಾರಾಟ ಮಾಡ್ತಾ ಇದ್ದಾರೆ. ಸ್ಥಳೀಯ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಿ, ದೇಶೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ. ಸಂಪರ್ಕಿಸಿ ಅರುಣ್ +918088825738

– ಶಶಾಂಕ್ ಶಿವತ್ತಾಯ ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.