Home ಅಂಕಣ ಸಮೃದ್ಧಿಯ ನಾಡು, ನೆಮ್ಮದಿಯ ಬೀಡು, ‘ನವ ಕಾಶ್ಮೀರವ’ ನೇೂಡ ಬನ್ನಿ

ಸಮೃದ್ಧಿಯ ನಾಡು, ನೆಮ್ಮದಿಯ ಬೀಡು, ‘ನವ ಕಾಶ್ಮೀರವ’ ನೇೂಡ ಬನ್ನಿ

ಕಾಶ್ಮೀರ ಪ್ರವಾಸ ಕಥನ

328
0

ಭಾರತದ ಮಣಿ ಮುಕುಟವೆಂದೇ ಖ್ಯಾತಿ ಪಡೆದ ನಿಸರ್ಗದ ಸ್ವರ್ಗವೆಂದೇ ವಿಶ್ವ ವಿಖ್ಯಾತಿಯಾದ ಭಾರತದ ಭೂಶಿಖರವೆಂದೇ ಕರೆಯಿಸಿಕೊಳ್ಳುವ ಹೆಮ್ಮೆಯ ಸಮೃದ್ಧಿಯ ನಾಡು ಕಾಶ್ಮೀರ. ಇಂತಹ ಕಾಶ್ಮೀರದ ಕುರಿತಾಗಿ ಪಾಠ ಮಾಡಿದ್ದೇವೆ ಪಾಠ ಓದಿದ್ದೇವೆ. ಆದರೆ ಈ ಸೌಂದರ್ಯತೆಯನ್ನು ಪ್ರತ್ಯಕ್ಷವಾಗಿ ನೇೂಡಿ ಕಣ್ಣು ತುಂಬಿಸಿಕೊಳ್ಳಬೇಕಾದರೆ ಇಷ್ಟು ವರ್ಷಗಳ ಕಾಲ ಕಾಯಬೇಕಾಯಿತು. ಎಲ್ಲದಕ್ಕೂ ಕಾಲ ಕೂಡಿ ಬರಬೇಕೆನ್ನುವ ಮಾತು ನೆನಪಾಯಿತು. ಅದಕ್ಕೂ ಒಂದು ಕಾಲ ಕೂಡಿ ಬಂತು ನೇೂಡಿ.

ಕಾಶ್ಮೀರಕ್ಕೆ ಹೇೂಗುವುದೆಂದರೆ ಹತ್ತು ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಹಜವೇ? ಮನದಲ್ಲಿ ಮೂಡುವ ಮೊದಲ ಪ್ರಶ್ನೆ ಅಂದರೆ ಜೀವ ರಕ್ಷಣೆಯ ಭಯದ ಸ್ಥಿತಿ. ಭಯೇೂತ್ಪಾದಕರು ಬಂದುಬಿಟ್ಟರೆ? ಬಾಂಬು ಸಿಡಿಸಿಬಿಟ್ಟರೆ? ಪ್ರಾಣ ಹೇೂಗಿಬಿಟ್ಟರೆ? ಹಾಗಾಗಿ ಹೆಚ್ಚಿನವರಿಗೆ ಕಾಶ್ಮೀರವೆಂದರೆ ಇಂತಹ ಹತ್ತು ಹಲವು ಭಯದ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುವುದು ಸಹಜ. ಆದರೆ ಈಗ ಕಾಶ್ಮೀರದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಜನರು ಸ್ವಚ್ಛಂದವಾಗಿ ಯಾವುದೇ ಭಯ ಬೀತಿ ಇಲ್ಲದೆ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಭರವಸೆಯಲ್ಲಿ ನಿಂತಿದ್ದಾರೆ. ತಮ್ಮ ನಾಡಿಗೆ ಬಂದ ಪ್ರವಾಸಿಗರನ್ನು ಪ್ರೀತಿ ವಿಶ್ವಾಸದಿಂದ ಬರಮಾಡಿಕೊಳ್ಳುವ ಮನಸ್ಥಿತಿಯ ಬದಲಾವಣೆಯನ್ನು ಕಾಶ್ಮೀರದ ಜನರಲ್ಲಿ ನಾವು ಪ್ರತ್ಯಕ್ಷವಾಗಿ ಕಂಡಿದ್ದೇವೆ.

ಪ್ರಕೃತಿಯ ಪ್ರಶಾಂತವಾದ ಹಿಮದ ನೆಲದಲ್ಲಿ ಆರಾಮವಾಗಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪ ಅಲ್ಲಿನ ಜನರಲ್ಲಿ ಕಾಣುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ರದ್ದತಿಯ ಅನಂತರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೇೂದಿ ನೀಡಿದ ಭರವಸೆ ‘ಕಾಶ್ಮೀರವನ್ನು ಸ್ವಿಟ್ಜರ್ಲ್ಯಾಂಡ್ ಸೌಂದರ್ಯತೆಗೂ ಮೀರಿ ಅಭಿವೃದ್ಧಿ ಪಡಿಸಬಹುದು’ ಅನ್ನುವುದಕ್ಕೆ ಇನ್ನಷ್ಟು ಪೂರಕವಾಗಿ ಸ್ಪಂದಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತು ಕೆಲಸವನ್ನು ನಿರ್ವಹಿಸುತ್ತಿರುವವರಲ್ಲಿ ನಮ್ಮವರೇ ಆದ ಹಿರಿಯಡಕದ ಪುಟ್ಟ ಹಳ್ಳಿ ಬೊಮ್ಮಾರಬೆಟ್ಟಿನಲ್ಲಿ ಹುಟ್ಟಿ ಬೆಳೆದು ಇಂದು ಜಮ್ಮು ಕಾಶ್ಮೀರ ಸರಕಾರದ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹಿರಿಯಡಕ ರಾಜೇಶ್ ಪ್ರಸಾದ್ ಹಿರಿಯ ಐ.ಎ.ಎಸ್. ಅಧಿಕಾರಿ ಅನ್ನುವುದನ್ನು ಕಣ್ಣಾರೆ ನೇೂಡಿ ಆನಂದಿಸುವ ಸದಾವಕಾಶ ನಮ್ಮ ಪಾಲಿಗೆ ಬಂದಿರುವುದು ಅವಿಸ್ಮರಣೀಯ. ಸಂದರ್ಭ ಅನ್ನುವುದನ್ನು ನಾವು ನೆನಪಿಸಿಕೊಳ್ಳಲೇ ಬೇಕು.

ಪ್ರವಾಸೋದ್ಯಮವೇ ಕಾಶ್ಮೀರಿ ಜನರ ಜೀವನಾಡಿ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯ ರಾಷ್ಟ್ರಗಳಿಂದ ಪ್ರವಾಸಿಗರು ಬರುತ್ತಿದ್ದಾರೆ ಅನ್ನುವುದು ಅಲ್ಲಿನ ಜನರ ಬಿಚ್ಚು ಮನಸ್ಸಿನ ಸ್ಪೂರ್ತಿಯ ಮಾತು. ನಮ್ಮ ಏಳು ದಿನಗಳ ಅಧ್ಯಯನದ ಪ್ರವಾಸದಲ್ಲಿ ಕಾಶ್ಮೀರದ ಒಟ್ಟು ಹತ್ತು ಜಿಲ್ಲೆಗಳಲ್ಲಿ ಏಳು ಪ್ರಮುಖ ಜಿಲ್ಲಾ ಕೇಂದ್ರ ಮತ್ತು ಪ್ರಮುಖ ಪ್ರಕೃತಿ ತಾಣದ ಸೌಂದರ್ಯತೆಯನ್ನು ಕಣ್ಣ ಮನ ತುಂಬಿಸಿಕೊಳ್ಳುವ ಸೌಭಾಗ್ಯ ನಮ್ಮದಾಗಿತ್ತು. ಜೀವಮಾನದಲ್ಲಿ ಒಮ್ಮೆಯಾದರೂ ಕಾಶ್ಮೀರ ನೇೂಡಿ ಬಾ ಅನ್ನುವ ಮಾತು ನಿಜವಾಗಿದೆ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.