Sunday, January 19, 2025
Sunday, January 19, 2025

ಭಯವಿಲ್ಲದಿದ್ದರೆ ಏನನ್ನೂ ಸಾಧಿಸಬಹುದು

ಭಯವಿಲ್ಲದಿದ್ದರೆ ಏನನ್ನೂ ಸಾಧಿಸಬಹುದು

Date:

ಪೂರ್ವಿಗೆ ಚಿಕ್ಕಂದಿನಿಂದಲೂ ಹಲ್ಲಿ ಕಂಡರೆ ಭಯ. ದೊಡ್ಡವಳಾದರೂ ಆ ಭಯ ದೂರವಾಗಲಿಲ್ಲ. ಎಲ್ಲಿ ಹಲ್ಲಿ ನೋಡಿದರೂ ದೂರ ಓಡಿ ಹೋಗುತ್ತಾಳೆ. ಈ ರೀತಿಯ ಭಯ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವರಿಗೆ ಜೀವ ಭಯ, ಕೆಲವರಿಗೆ ನೀರಿನ ಭಯ, ಪ್ರಾಣಿಗಳ ಭಯ, ಎತ್ತರದ ಭಯ, ವೇದಿಕೆಯ ಮೇಲೆ ಮಾತನಾಡುವ ಭಯ. ಹೀಗೆ ಬೇರೆ ಬೇರೆ ರೀತಿಯ ಭಯ ನಮ್ಮಲ್ಲಿ ಅಡಗಿರುತ್ತದೆ. ಇದನ್ನು ಬಿಡಿಸುವುದು ಕಷ್ಟ. ಆದರೆ ನಮಗೆ ಅದರ ಅರಿವಾದರೆ, ಮನಸ್ಸಿದ್ದರೆ ಆ ಭಯದಿಂದ ಹೊರಗೆ ಬರಲು ಸಾಧ್ಯ.

ಭಯ ಹೋಗಲು ಏನು ಮಾಡಬೇಕು? ಮೊದಲಿಗೆ ಆ ಭಯ ಹುಟ್ಟಿದ್ದು ಎಲ್ಲಿಂದ ಎಂದು ತಿಳಿದುಕೊಳ್ಳಿ. ಸಾಮಾನ್ಯವಾಗಿ ಚಿಕ್ಕಂದಿನಲ್ಲಿ ಬೇರೆಯವರನ್ನು ನೋಡಿ ಅಥವಾ ಹೆದರಿಸಿದ ಪ್ರಸಂಗಗಳು ಇರಬಹುದು. ಆ ಕಾರಣವನ್ನು ಹುಡುಕಿ. ಸಮಯ ಬೇಕಾಗಬಹುದು, ಆದರೆ ಕಾರಣವನ್ನು ನೀವೇ ಹುಡುಕಿದರೆ ಒಳ್ಳೆಯದು. ಎಲ್ಲಿಂದ ಏಕೆ ಪ್ರಾರಂಭವಾಯಿತು ಎಂದು ಗೊತ್ತಾದ ಮೇಲೆ ಅದರ ಬಗ್ಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ. ಈ ಭಯದಿಂದ ನೀವು ಎಷ್ಟು ನರಳುತ್ತಿದ್ದೀರಿ ಇಡೀ ಜೀವನ ಹೀಗೆ ನರಳಬೇಕೆ ಎಂದು. ನಂತರ ಧೈರ್ಯ ಮಾಡಿ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿ.

ಹೇಗೆ ಭಯವನ್ನು ಹೋಗಲಾಡಿಸುವುದು? ಉದಾಹರಣೆಗೆ ಹಲ್ಲಿಯ ಭಯ ಹೋಗಲು ಈ ರೀತಿ ಮಾಡಿ. ಮೊದಲಿಗೆ ನಿಮಗೆ ಹೇಳಿಕೊಳ್ಳಿ ಈ ಹಲ್ಲಿ ನಿರುಪದ್ರವ ಪ್ರಾಣಿ, ನಾನು ಏಕೆ ಹೆದುರುತ್ತಿದ್ದೇನೆ. ಅನೇಕ ಸಲ ಈ ರೀತಿ ಹೇಳಿದ ಮೇಲೆ ಸ್ವಲ್ಪ ಧೈರ್ಯ ತುಂಬುತ್ತದೆ. ದಿನಾಲು ಇದನ್ನು ಮನನ ಮಾಡಿಕೊಳ್ಳಿ. ನಂತರ ಹಲ್ಲಿಯ ಹತ್ತಿರ ಹೋಗಿ ಈ ಹಲ್ಲಿ ನನಗೆ ಏನು ಮಾಡುವುದಿಲ್ಲ, ಹೆದರುವ ಅವಶ್ಯಕೆತೆ ಇಲ್ಲ. ಹೀಗೆ ಸುಮಾರು ಸಲ ಮಾಡಿದ ಮೇಲೆ ಭಯ ಮಾಯವಾಗುತ್ತದೆ. ಹೀಗೆ ನಿಮ್ಮಲ್ಲಿ ಇರುವ ಅನೇಕ ಭಯವನ್ನು ದೂರ ಮಾಡಬಹುದು. ನಿಮಗೆ ನೀವು ಸರಿಯಾದ ಪ್ರಶ್ನೆ ಕೇಳಿದರೆ ಭಯ ಹೋಗುವುದು ಮಾತ್ರವಲ್ಲ ಎಲ್ಲಿಲ್ಲದ ಧೈರ್ಯ ಬರುತ್ತದೆ. ನಿಮ್ಮಲ್ಲಿ ಇರುವ ಒಂದೊಂದು ಭಯವನ್ನು ಒಂದೊಂದಾಗಿ ಬಿಡಿಸಿ.

ಇನ್ನೊಂದು ಉದಾಹರಣೆ ವೇದಿಕೆಯ ಮೇಲೆ ಮಾತನಾಡುವ ಭಯವಿದ್ದರೆ ಹೀಗೆ ಕೇಳಿ. ಎಲ್ಲರೂ ಮನುಷ್ಯರು ಅಲ್ಲವೇ. ನನಗೆ ಏಕೆ ಭಯವಾಗುತ್ತದೆ? ಸರಿಯಾಗಿ ಮಾತನಾಡದಿದ್ದರೆ ನನ್ನನ್ನು ನೋಡಿ ನಗುತ್ತಾರೆ ಎಂದೇ? ಆಲೋಚನೆ ಮಾಡಿ. ಈ ರೀತಿಯ ಊಹೆಗಳು ನಮ್ಮನ್ನು ಕುಗ್ಗಿಸುತ್ತದೆ. ಬೇರೆಯವರು ನಮ್ಮ ಬಗ್ಗೆಯೇ ಆಲೋಚನೆ ಮಾಡುತ್ತಾರೆ. ನಮ್ಮನ್ನು ನೋಡಿ ನಗುತ್ತಾರೆ ಎನ್ನುವ ಭ್ರಮೆಯಲ್ಲಿಯೇ ನಾವು ಇದ್ದೇವೆ. ನೆನಪಿಡಿ ಎಲ್ಲರಿಗೆ ಅವರವರ ಚಿಂತೆ ತಲೆಯಲ್ಲಿ ಇರುತ್ತದೆ. ನಮ್ಮ ಬಗ್ಗೆನೇ ಆಲೋಚನೆ ಮಾಡಿ ಕೂತುಕೊಳ್ಳುವುದಿಲ್ಲ. ಕೆಲವರು ನಗಬಹುದು ಅವರ ಕೆಲಸವೇ ಅದೇ ಸೀರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಗಲಿ ಬಿಡಿ ಎಲ್ಲರನ್ನೂ ಮೆಚ್ಚಿಸಲು ಆಗುವುದಿಲ್ಲವಲ್ಲ. ನಿಮ್ಮ ಪ್ರಯತ್ನ ನೀವು ಮಾಡಿ ಮುಂದೆ ನೀವು ಒಳ್ಳೆಯ ಮಾತುಗಾರ ಆಗಬಹುದು. ನಿಮ್ಮ ಕೆಲಸ ಸ್ಟೇಜ್ ಮೇಲೆ ಮಾತನಾಡುವುದು. ಮೊದಲಿಗೆ ಕಷ್ಟವಾಗಬಹುದು ನಂತರ ಕ್ರಮೇಣ ಅಭ್ಯಾಸವಾಗುತ್ತದೆ. ಇತರರನ್ನು ನೋಡಿ ಕಲಿಯಿರಿ. ನೀವು ಹೇಗೆ ಸುಧಾರಿಸಬೇಕೆಂದು ಗುರಿ ಇಟ್ಟುಕೊಳ್ಳಿ. ಇತರರು ಏನು ಬೇಕಾದರೂ ಆಡಿಕೊಳ್ಳಿ ಇತರರನ್ನು ಅಧಿಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡರೆ ನಮಗೆ ಮುಂದೆ ಬರಲು ಆಗುವುದಿಲ್ಲ.

ಭಯ ಇಲ್ಲದಿದ್ದರೆ ನೀವು ಹೇಗೆ ಮಾತನಾಡುತ್ತೀರಿ ಎಂದು ಊಹಿಸಿ. ಹಾಗೆ ದಿನಾಲು ಅಭ್ಯಾಸ ಮಾಡಿ, ಆಗ ಭಯವನ್ನು ದೂರ ಸರಿಯಬಹುದು. ಇದು ಎಲ್ಲಾ ರೀತಿಯ ಭಯಗಳಿಗೆ ಅನ್ವಯವಾಗುತ್ತದೆ. ಭಯ ನಮ್ಮನ್ನು ಜೀವನವಿಡಿ ಕೈದಿಗಳಾಗಿಸುತ್ತದೆ. ಆದ್ದರಿಂದ ಭಯದಿಂದ ಮುಕ್ತರಾಗಿ. ಭಯ ಎಂಬ ನಮ್ಮೊಳಗಿನ ಊಹೆಗಳು ಅದನ್ನು ಸರಿಯಾದ ರೀತಿಯಲ್ಲಿ ಬುಡ ಸಮೇತ ತೆಗೆದು ಹಾಕುವುದು ಮುಖ್ಯ. ಅಂಜಿಕೆಯನ್ನು ಗೆದ್ದರೆ ಜಗವೇ ನಿಮ್ಮ ಮುಷ್ಟಿಯಲ್ಲಿ ಇರುವಂತಹ ಅನುಭವವಾಗುತ್ತದೆ. ಒಮ್ಮೆ ಯೋಚಿಸಿ.

– ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!