Home ಅಂಕಣ ಮಕ್ಕಳಿಗೆ ಜೀವನ ಎದುರಿಸಲು ಕಲಿಸಿರಿ

ಮಕ್ಕಳಿಗೆ ಜೀವನ ಎದುರಿಸಲು ಕಲಿಸಿರಿ

281
0

ಕ್ಕಳನ್ನು ಬೆಳೆಸುವುದು ಒಂದು ಕಲೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗೆ ಸರಿ ಅನಿಸಿದ ಹಾಗೆ ಬೆಳೆಸುತ್ತಾರೆ. ಪೇರೆಂಟಿಂಗ್ ಎಂಬುದು ಇದೇ ದಾರಿ ಹೀಗೆ ಮಾಡಬೇಕು ಎಂಬುದಿಲ್ಲ. ನಮ್ಮ ಮಕ್ಕಳನ್ನು ಅರ್ಥ ಮಾಡಿಕೊಂಡು ಅವರನ್ನು ಬೆಳೆಸುವುದು ಸೂಕ್ತ. ಹತ್ತು ವರ್ಷದ ತನಕ ಮಕ್ಕಳಿಗೆ ಏನು ಕಲಿಯಬೇಕು ಅನಿಸುತ್ತದೆಯೋ ಅದನ್ನು ಮಾಡಲು ಬಿಡಿ. ಅವರಲ್ಲಿ ವಿವಿಧ ಹವ್ಯಾಸಗಳನ್ನು ಬೆಳೆಸಿ. ಆಟ ಪಾಠ ಒಟ್ಟಿಗೆ ಇರಲಿ. ಸಂಗೀತ, ನೃತ್ಯ, ಆರ್ಟ್, ಕ್ರಾಫ್ಟ್, ಪುಸ್ತಕ ಓದುವುದು, ಬರೆಯುವುದು, ಪರಿಸರವನ್ನು ವೀಕ್ಷಿಸುವುದು, ನಕ್ಷತ್ರ ವಿಕ್ಷಣೆ ಇತ್ಯದಿ, ಅಭ್ಯಾಸ ಬೆಳೆಸಿರಿ. ಇತರರನ್ನು ಗೌರವಿಸಲು ಕಲಿಸಿರಿ. ಹತ್ತು ವರ್ಷಗಳ ನಂತರ ಜೀವನದಲ್ಲಿ ಓದು ಕೂಡ ಮುಖ್ಯವೆಂದು ತಿಳಿಸಿರಿ. ಪಾಠವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ, ಅಂಕ ಮುಖ್ಯವಲ್ಲ. ಬಾಯಿ ಪಾಠ ಮಾಡಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಗಳಿಸಿ ಏನೂ ಪ್ರಯೋಜನವಿಲ್ಲ. ನಮ್ಮ ಮೆದುಳು ಚುರುಕಾಗಬೇಕಾದರೆ ಜೀವನದಲ್ಲಿ ಪಾಠಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಪಾಠ ಅರ್ಥವಾದರೆ ಅಂಕಗಳು ಬಂದೇ ಬರುತ್ತವೆ. ಇತರರ ಚಟುವಟಿಕೆಗಳು ನಮ್ಮ ಸೃಜನಶೀಲ ಆಲೋಚನೆಗೆ ಪೂರಕವಾಗುತ್ತದೆ. ಹೀಗೆ ಬೆಳೆದು ಬಂದ ಮಗು ಯಾವುದೋ ಆತಂಕಕ್ಕೆ ಒಳಗಾಗುವುದಿಲ್ಲ. ಇಂತಹ ಚಟುವಟಿಕೆಗಳು ನಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ.

ಪ್ರೌಢಶಾಲೆ, ಪಿಯುಸಿ ಓದುವ ಮಕ್ಕಳನ್ನು ಕೂರಿಸಿ ತಿಳಿಹೇಳಿ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ ಎಂದು. ಓದುವುದರಿಂದ ಮುಂದೆ ಏನಾಗ ಬಯಸುತ್ತೇವೆಯೋ ಅದನ್ನು ನನಸು ಮಾಡಲು ಸತತ ಪ್ರಯತ್ನ ಮುಖ್ಯ. ಸಮಯವನ್ನು ಪೋಲು ಮಾಡದೆ ಓದು ಹಾಗೂ ಹವ್ಯಾಸಗಳಲ್ಲಿ ಸಮತೋಲನ ಕಾಪಾಡಿಕೊಂಡು ತನ್ನ ಕನಸನ್ನು ಸಾಕಾರಗೊಳಿಸುವ ಸಮಯವಿದು ಎಂದು ತಿಳಿಹೇಳಿ. ಬೈಯುವುದರಿಂದ ಒತ್ತಾಯ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಅರಿವು ಮೂಡಿಸುವುದು ಮುಖ್ಯ. ಪಾಸಾಗದಿದ್ದರೆ ಅದು ಜೀವನದ ಅಂತ್ಯವಲ್ಲ. ಅದೊಂದೇ ಜೀವನವಲ್ಲ. ಅವಕಾಶಗಳು ಬಹಳಷ್ಟು ಇವೆ. ಇದು ಇಲ್ಲದಿದ್ದರೆ ಇನ್ನೊಂದು ಕೆಲಸ ಇದ್ದೇ ಇರುತ್ತದೆ. ಅದೇ ಬೇಕೆಂದಿದ್ದರೆ ಪುನಃ ಪುನಃ ಪ್ರಯತ್ನ ಪಡಿ ಆದರೆ ಸಮಯವನ್ನು ವ್ಯರ್ಥ ಮಾಡಬೇಡಿ. ಬೇರೆ ಕೆಲಸಕ್ಕೆ ಸೇರಿ ನಿಮ್ಮ ಕನಸಿನ ಕೆಲಸಕ್ಕೆ ಪ್ರಯತ್ನ ಮಾಡಿ ಅಷ್ಟೇ. ಮೊದಲಿಗೆ ಪೋಷಕರ ಮನಸ್ಥಿತಿ ಬದಲಾಗಬೇಕು ಸ್ಟೇಟಸ್ ಮುಖ್ಯವೋ ಅಥವಾ ತಮ್ಮ ಕನಸು ಮುಖ್ಯವೋ ಅಥವಾ ತಮ್ಮ ಮಕ್ಕಳು ಮುಖ್ಯವೋ ಎಂದು. ಪೋಷಕರು ಮಕ್ಕಳ ಹಿತವನ್ನು ಅವರ ಆಸೆಗಳನ್ನು ಪೂರೈಸಬೇಕೆ ವಿನಃ ತಮ್ಮ ಆಸೆಗಳನ್ನು ಅವರ ಮೇಲೆ ಹೇರುವುದಲ್ಲ. ನಿಮ್ಮ ಪ್ರೀತಿ ಮಾರ್ಕ್ಸ್ ಮೇಲೆ ಅವಲಂಬಿತವಾಗಿಲ್ಲ ಎಂದು ಹೇಳಿ. ಮಕ್ಕಳಿಗೆ ಆಗ ಸ್ಪೂರ್ತಿ ದೊರೆಯುತ್ತದೆ. ತಾನು ಏನು ಮಾಡಿದರೂ ತಾಯಿ ತಂದೆ ಪ್ರೋತ್ಸಾಹಿಸುತ್ತಾರೆ ಎಂದು ಆಗ ಖುಷಿಯಿಂದ ಮಕ್ಕಳು ಅಧಿಕ ಶ್ರಮ ಪಡುತ್ತಾರೆ. ಆದರೆ, ಒತ್ತಡ ಹಾಕಿದರೆ ತಾನು ಓದೋದಿಲ್ಲವೆಂದು ಹಠ ಮಾಡಬಹುದು.

ಪರೀಕ್ಷೆ ಎನ್ನುವುದು ನಮ್ಮ ಜೀವನದ ಪರೀಕ್ಷೆ ಅಂತೂ ಅಲ್ಲವೇ ಅಲ್ಲ. ಅದು ಜೀವನದ ಒಂದು ಸಣ್ಣ ಭಾಗ ಅಷ್ಟೇ. ವಿದ್ಯೆಯು ಬೇರೆ ಬೇರೆ ರೀತಿಯಲ್ಲಿ ನಮಗೆ ದೊರೆಯುತ್ತದೆ. ಸಾಯುವವರೆಗೂ ಕಲಿಯುತ್ತಿರುತ್ತೇವೆ. ಪರೀಕ್ಷೆಯು ಆರು ದಿನಗಳ ಆಟವಷ್ಟೇ. ಜೀವನದಲ್ಲಿ ಕಲಿಯಬೇಕಾದದ್ದು ಬಹಳಷ್ಟಿದೆ. ಬದುಕಿನಲ್ಲಿ ಏರಿಳಿತ ಒಂದು ಅಂಗ. ಅದನ್ನು ಅರಿತರೆ ಜೀವನ ಸಾರ್ಥಕ.

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.