ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ವಿಜಯ್ ಕೊಡವೂರು, ಕೊಡವೂರು ವಾರ್ಡಿನಲ್ಲಿ ಒಟ್ಟು 9 ಬಸ್ಸು ನಿಲ್ದಾಣವಿದ್ದು, ಈಗಾಗಲೇ 3 ಬಸ್ಸು ನಿಲ್ದಾಣವನ್ನು ಶ್ರಮದಾನ ಮೂಲಕ ಹೊಸತಾಗಿ ನಿರ್ಮಾಣ ಕಾರ್ಯ ನಡೆದಿದ್ದು. ಪಾಳೆಕಟ್ಟೆ ಪರಿಸರದಲ್ಲಿನ ಅತ್ಯಂತ ಹಳೆಯ ಬಸ್ಸು ನಿಲ್ದಾಣವಾಗಿದ್ದು ಮಳೆಗಾಲದ ಸಮಯದಲ್ಲಿ ಮಳೆಯ ನೀರು ಸೋರುತಿದ್ದು, ಅಪಾಯದ ಅಂಚಿನಲ್ಲಿತ್ತು. ಇದನ್ನು ಗಮನಿಸಿ ಅನುದಾನದ ಮೂಲಕ ಹೊಸ ಬಸ್ಸು ನಿಲ್ದಾಣಕ್ಕೆ ಗುದ್ದಲಿ ಪೂಜೆ ನಡೆಸಲಾಗಿದೆ ಎಂದರು.
ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷರಾದ ಹರೀಶ್, ದಿನೇಶ್, ರವಿ, ಶಂಭು ಮಾಸ್ಟರ್, ಸುಂದರ್ ಜಲಶಾಂತಿ, ಉಮೇಶ್ ರತ್ನಾಕರ್, ಯಶೋಧ ರಾಜೇಂದ್ರ, ಅಶೋಕ್ ಶೆಟ್ಟಿಗಾರ್, ಪ್ರಭಾತ್, ವಿನಯ್ ಗರ್ಡೆ ಮುಂತಾದವರಿದ್ದರು.