Wednesday, January 22, 2025
Wednesday, January 22, 2025

ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷೆ: ಕಾರ್ಕಳ ಜ್ಞಾನಸುಧಾದ ವಿದ್ಯಾರ್ಥಿಗಳ ಸಾಧನೆ

ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷೆ: ಕಾರ್ಕಳ ಜ್ಞಾನಸುಧಾದ ವಿದ್ಯಾರ್ಥಿಗಳ ಸಾಧನೆ

Date:

ಕಾರ್ಕಳ, ಜ.21: ದಿನಾಂಕ 11.01.2025 ರಂದು ಇನ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ (ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್)ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 32 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 28 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.

ಸಂಸ್ಥೆಯ ರಕ್ಷಾ ರಾಮಚಂದ್ರ ಅವರು 200ರಲ್ಲಿ 163 ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಯಾಗಿರುತ್ತಾರೆ. ಜೊತೆಗೆ ಖತಿಜಾತುಲ್ ರಾಫಿಯಾ, ಹೃಷಿಕೇಶ್ ಸತೀಶ್ ಶೆಟ್ಟಿ, ಮ್ಯಾಕ್ಲಿನ್ ಜಾಕ್ ಡಿ’ಮೆಲ್ಲೊ, ಶ್ರೀಧಾ ಶೆಟ್ಟಿ, ರಕ್ಷಿತಾ ಜನ್ನೆ, ಶೋಧನ್ ಕುಮಾರ್ ಶೆಟ್ಟಿ, ಶ್ರಜಿತ್ ಕುಲಾಲ್, ಶ್ರಾವಂತ್ ಕುಮಾರ್ ಶೆಟ್ಟಿ, ಪ್ರಥಮ್ ನಾಯಕ್, ರಕ್ಷಿತ್ ಆರ್, ಪ್ರಜನ್, ಅಜಯ್ ಡಿ. ನಾಯಕ್, ಆಯುಶ್ ಶೆಟ್ಟಿ, ನಮೀಶ್ ಎನ್ ಶೆಟ್ಟಿ, ವಿಘ್ನೇಶ್, ಕೆ.ಆಂಕಿತಾ ಪೈ, ಪ್ರೇರಣಾ ಸುನಿಲ್ ಕುಮಾರ್, ಸಮರ್ಥ್ ವಿಜಯ್ ದೇವಾಡಿಗ, ಅಪೇಕ್ಷಾ, ಹುದಾಹಮ್ರಾ, ಕಾವ್ಯ ಸೆಲ್ಲಾಮುತು(100), ರಾಜೇಂದ್ರ ಎನ್.ಮಲ್ಯಾ, ಶುಧಿನ್ ಶೆಟ್ಟಿ, ಸುಭೀತ್, ಸುವೀಕ್ಷಾ, ವಿಶ್ವಾಸ್ ನಾಯ್ಕ್ ಮತ್ತು ಯಶಸ್ವಿನಿ ಸೇರಿದಂತೆ ಒಟ್ಟು ೨೮ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹಾಗೂ ಜ್ಞಾನಸುಧಾ ಪರಿವಾರವು ಸಾಧಕರನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!