ಕೋಟ, ಡಿ.1: ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು. ದೇಗುಲದಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ಹಣತೆ ಸಾಲು ಇರಿಸಲು ಸಕಲ ವ್ಯವಸ್ಥೆಯನ್ನು ದೇಗುಲದ ಆಡಳಿತ ಮಂಡಳಿ ಕಲ್ಪಿಸಿತು. ದೇಗುಲದಲ್ಲಿ ಪ್ರಧಾನ ಅರ್ಚಕ ಸುಬ್ರಾಯ ಜೋಗಿ ವಿಶೇಷ ಆರತಿ ಬೆಳಗಿ ದೇಗುಲದ ಅಧ್ಯಕ್ಷರಾದ ಆನಂದ್ ಸಿ ಕುಂದರ್ ಹಣತೆಗೆ ದೀಪ ಬೆಳಗಿಸಿ ಚಾಲನೆ ನೀಡಿದರು.
ರಸ್ತೆಯುದ್ದಕ್ಕೂ ರಂಗೋಲಿ ಅರಳಿಸಿದ ಭಕ್ತರು ಸಾಗರೋಪಾದಿಯಲ್ಲಿ ಇರಿಸಿದ ಹಣತೆಗೆ ಭಕ್ತಿಭಾವದಲ್ಲಿ ಜ್ಯೋತಿ ಬೆಳೆಗಿಸಿದರು.
ವಿಶೇಷ ಹೂವಿನ ಪೂಜೆ, ಮಹಾಮಂಗಳಾರತಿ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಆನಂದ್ ಸಿ ಕುಂದರ್, ಸಮಿತಿಯ ಸದಸ್ಯರಾದ ಎಂ ಶಿವ ಪೂಜಾರಿ, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ ಪೂಜಾರಿ, ಜ್ಯೋತಿ ಡಿ ಕಾಂಚನ್, ಚಂದ್ರ ಆಚಾರ್, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.