Thursday, November 28, 2024
Thursday, November 28, 2024

ತುಳು ಕಾದಂಬರಿ ಗತಿ ಬದಲಾಯಿಸಿದ ‘ನಾಣಜ್ಜೆರ್’

ತುಳು ಕಾದಂಬರಿ ಗತಿ ಬದಲಾಯಿಸಿದ ‘ನಾಣಜ್ಜೆರ್’

Date:

ಮೂಡುಬಿದಿರೆ, ನ.27: ತುಳು ಕಾದಂಬರಿ ಪ್ರಕಾರದ ದಿಕ್ಕನ್ನೇ ಬದಲಾಯಿಸಿದ ಕೃತಿ ‘ನಾಣಜ್ಜೆರ್ ಸುದೆ ತಿರ್ಗಾಯೆರ್ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುಲಸಚಿವ (ಶೈಕ್ಷಣಿಕ) ಡಾ. ಟಿ. ಕೆ. ರವೀಂದ್ರನ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ‘ಡಾ. ಮಹಾಲಿಂಗ ಭಟ್ ಬರೆದ ನಾಣಜ್ಜೆರ್ ಸುದೆ ತಿರ್ಗಾಯೆರ್’ ಕಾದಂಬರಿಯ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುಳು ಭಾಷೆಯು ತಮಿಳಿನಷ್ಟೇ ಪುರಾತನವಾದ ಭಾಷೆ. ಪ್ರಪಂಚದಾದ್ಯಂತ ಒಂದು ಕೋಟಿಗೂ ಹೆಚ್ಚು ತುಳು ಭಾಷಿಕರಿದ್ದಾರೆ. ಸಂಗಮ ಸಾಹಿತ್ಯದಲ್ಲೂ ತುಳು ಭಾಷೆಯ ಉಲ್ಲೇಖವಿದೆ ಎಂದರು.

ತಮ್ಮ ಭಾಷೆಯ ಮೇಲೆ ಯಾರಿಗೂ ಕೀಳರಿಮೆ ಇರಬಾರದು. ತುಳು ಭಾಷಿಕರು ಸಾಹಿತ್ಯಕ್ಕೆ ಹೆಚ್ಚಿನ ಒಲವು ನೀಡದೇ ಇರುವುದರಿಂದ ಸಾಹಿತ್ಯದಲ್ಲಿ ತುಳು ಭಾಷೆಯು ಹಿಂದುಳಿದಿದೆ. ತುಳು ಭಾಷಿಕರು ತುಳು ಭಾಷೆಯನ್ನು ಉತ್ತೇಜಿಸಬೇಕು ಎಂದು ತಿಳಿಸಿದರು. ‘ನಾಣಜ್ಜೆರ್ ಸುದೆ ತಿರ್ಗಾಯೆರ್’ ಕೃತಿಯು ತುಳು ಸಾಹಿತ್ಯದ ಸ್ಥಿತಿಯನ್ನೇ ಬದಲಾಯಿಸಿದ ಕೃತಿಯಾಗಿದೆ. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಇದಾಗಿದ್ದು. ತುಳು ಸಾಹಿತ್ಯವು ಈ ಕೃತಿಯ ನಂತರ ತಿರುವು ಪಡೆದುಕೊಂಡಿದೆ ಎಂದರು. ವಾಣಿಜ್ಯ ವೃತ್ತಿಪರ ವಿಭಾಗದ ಸಂಯೋಜಕ ಅಶೋಕ್ ಕೆ. ಜಿ. ಇದ್ದರು. ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿ, ವಿದ್ಯಾರ್ಥಿನಿ ಅನೀಶಾ ಶೆಟ್ಟಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ

ಉಡುಪಿ, ನ.27: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ...

ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು

ವಿದ್ಯಾಗಿರಿ (ಮೂಡುಬಿದಿರೆ), ನ.27: ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ,...

ಯಕ್ಷಾರಾಧನೆ ರಂಗದೋಕುಳಿ

ಕೋಟ, ನ.27: ಒಂದು ಕಾಲದಲ್ಲಿ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು,...

ಫ್ರೆಂಡ್ಸ್ ಗುಂಡ್ಮಿ: ಕನ್ನಡ ರಾಜ್ಯೋತ್ಸವ ಸಂಭ್ರಮ

ಕೋಟ, ನ.27: ಕನ್ನಡಾಭಿಮಾನ ಕಾರ್ಯಕ್ರಮಗಳಲ್ಲಿ ಮೊಳಗುವುದರ ಜತೆಗೆ ಮನೆ ಮನಗಳಲ್ಲಿ ಮೊಳಗಲಿ...
error: Content is protected !!